
ರಣವೀರ್ ಸಿಂಗ್ ನಟನೆಯ ‘ಧುರಂಧರ’ ಮತ್ತು ‘ಧುರಂಧರ 2’ (ಧುರಂಧರ 2) ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿವೆ. ಈ ಸಿನಿಮಾಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಪರ ವಿರೋಧದ ಚರ್ಚೆ ಆಗಿದೆ. ಅನೇಕರು ಈ ಸಿನಿಮಾಗಳನ್ನು ‘ಪ್ರೋಪಗಾಂಡ’ ಎಂದು ಟೀಕಿಸಿದ್ದಾರೆ. ಈ ಸಿನಿಮಾಗಳ ಬಗ್ಗೆ ಈಗ ನರೇಂದ್ರ ಮೋದಿ (ನರೇಂದ್ರ ಮೋದಿ) ಕೂಡ ಮಾತನಾಡಿದ್ದಾರೆ. ಕೇರಳದಲ್ಲಿ ಮಾತನಾಡುವಾಗ ‘ಧುರಂಧರ’, ‘ದಿ ಕೇರಳ ಸ್ಟೋರಿ’, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗಳನ್ನು ಅವರು ಪ್ರಸ್ತಾಪಿಸಿದ್ದಾರೆ.
‘ಕೇರಳ ಸ್ಟೋರಿ ಬಂತು. ಅದರಲ್ಲಿ ಇರುವುದು ಎಲ್ಲವೂ ಸುಳ್ಳು ಅಂತ ಕೇಳಲು ಶುರು ಮಾಡಿದರು. ಕಾಶ್ಮೀರ್ ಫೈಲ್ಸ್ ಬಂದಾಗಲೂ ಸುಳ್ಳು ಹೇಳಿದರು. ಧುರಂಧರ ಸಿನಿಮಾ ಬಂದಾಗಲೂ ಸುಳ್ಳು ಹೇಳಿದರು. ಎಫ್ಎಸ್ಸಿಆರ್ ಕಾಯ್ದೆಯ ಬಗ್ಗೆ ಇದೇ ರೀತಿ ಸುಳ್ಳು ಹಬ್ಬಿಸಿದರು. ಯುಸಿಸಿ ಬಗ್ಗೆ ಕೂಡ ಸುಳ್ಳು ಹಬ್ಬಿಸುತ್ತಿದ್ದಾರೆ’ ಎಂದು ನರೇಂದ್ರ ಮೋದಿ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಪಕ್ಷಗಳು ಮತ್ತು ಪರಿಸರ ವ್ಯವಸ್ಥೆಯು ಧುರಂಧರ ಮೇಲೆ ದಾಳಿ ಮಾಡುತ್ತಿದೆ ಮತ್ತು ಅದನ್ನು ಸುಳ್ಳು ಎಂದು ಕರೆಯುತ್ತಾರೆ. “ಅವರು ಮೊದಲು ಕಾಶ್ಮೀರ ಫೈಲ್ಸ್ ಮತ್ತು ಕೇರಳ ಫೈಲ್ಸ್ ಮೇಲೆ ದಾಳಿ ಮಾಡಿದರು ಮತ್ತು ಈಗ ಧುರಂಧರ ಮೇಲೆ ದಾಳಿ ಮಾಡಿದರು.” @ನರೇಂದ್ರ ಮೋದಿ pic.twitter.com/MUDPEX9sMd
— ಆದಿತ್ಯ ರಾಜ್ ಕೌಲ್ (@AdityaRajKaul) ಏಪ್ರಿಲ್ 4, 2026
ನರೇಂದ್ರ ಮೋದಿ ಅವರು ಮಾತನಾಡುತ್ತಿರುವ ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅದರಿಂದಾಗಿ ‘ಧುರಂಧರ’, ‘ದಿ ಕೇರಳ ಸ್ಟೋರಿ’, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗಳ ಬಗ್ಗೆ ಮತ್ತೆ ಚರ್ಚೆ ಜಾಸ್ತಿ ಆಗಿದೆ. ಈ ವಿಡಿಯೋಗೆ ಕಮೆಂಟ್ ಮಾಡಿದ ಅನೇಕರು ತಮ್ಮ ಅನಿಸಿಕೆಗಳನ್ನು ನೇರವಾಗಿ ಹಂಚಿಕೊಂಡಿದ್ದಾರೆ.
‘ಹಾಗಾದ್ರೆ ಪ್ರಧಾನಿಯವರು ಈ ಸಿನಿಮಾಗಳಲ್ಲಿ ಶೇಕಡ 100ರಷ್ಟು ಸತ್ಯ ಎಂದು ನಂಬುತ್ತಾರಾ? ಈ ಸಿನಿಮಾಗಳ ಜೊತೆ ಅವರು ಗುರುತಿಸಿಕೊಳ್ಳುತ್ತಾರಾ’ ಎಂದು ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ‘ಇಷ್ಟು ದಿನ ಈ ಸಿನಿಮಾಗಳನ್ನು ವಿಮರ್ಶಕರು ಪ್ರೊಪಗಾಂಡ ಅಂತ ಯಾಕೆ ಟೀಕಿಸಿದರು ಎಂಬುದು ಈಗ ಅರ್ಥ ಆಯಿತು’ ಎಂಬ ಕಮೆಂಟ್ ಕೂಡ ಬಂದಿದೆ.
ಇದನ್ನೂ ಓದಿ: ಸಾಮಾನ್ಯ ಪ್ರೇಕ್ಷಕನಂತೆ ಥಿಯೇಟರ್ಗೆ ಬಂದು ‘ಧುರಂಧರ 2’ ನೋಡಿದ ಆರ್. ಮಾಧವನ್
‘ಮೋದಿ ಅವರು ತಮ್ಮ ಭಾಷಣದಲ್ಲಿ ನಿರುದ್ಯೋಗದಂತಹ ದೇಶದ ಸಮಸ್ಯೆಗಳ ಬಗ್ಗೆ ಮಾತನಾಡಬೇಕಿತ್ತು. ತಮ್ಮ ಅಧಿಕಾರದ ಅವಧಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರಲ್ಲಿ ಮತ ಕೇಳಬೇಕಿತ್ತು’ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಆದಿತ್ಯ ಧರ್ ನಿರ್ದೇಶನದ ‘ಧುರಂಧರ’ ಸಿನಿಮಾದಲ್ಲಿ ತೋರಿಸಿರುವುದು ಎಷ್ಟು ನಿಜ, ಕಲ್ಪನಿಕ ಆಗಿರುವ ಬಗ್ಗೆ ಚರ್ಚೆ ಇನ್ನಷ್ಟು ಜಾಸ್ತಿ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.