'ದಯವಿಟ್ಟು ಕ್ಷಮಿಸಿ..': ಧೋನಿ, ಕಪಿಲ್‌ ದೇವ್‌ಗೆ ಬಹಿರಂಗವಾಗಿ ಕ್ಷಮೆ ಕೇಳಿದ ಯುವರಾಜ್‌ ಸಿಂಗ್!

'ದಯವಿಟ್ಟು ಕ್ಷಮಿಸಿ..': ಧೋನಿ, ಕಪಿಲ್‌ ದೇವ್‌ಗೆ ಬಹಿರಂಗವಾಗಿ ಕ್ಷಮೆ ಕೇಳಿದ ಯುವರಾಜ್‌ ಸಿಂಗ್!

'ದಯವಿಟ್ಟು ಕ್ಷಮಿಸಿ..': ಧೋನಿ, ಕಪಿಲ್‌ ದೇವ್‌ಗೆ ಬಹಿರಂಗವಾಗಿ ಕ್ಷಮೆ ಕೇಳಿದ ಯುವರಾಜ್‌ ಸಿಂಗ್!

ನವದೆಹಲಿ: ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ನಾಯಕರಾದ ಕಪಿಲ್ ದೇವ್ ಹಾಗೂ ಎಂ ಎಸ್ ಧೋನಿ ಮೇಲೆ ಪದೇ ಪದೇ ಬಹಿರಂಗವಾಗಿ ಕಿಡಿಕಾರುತ್ತಿರುವ ತಮ್ಮ ತಂದೆಯ ಹೇಳಿಕೆಯ ಬಗ್ಗೆ ಯುವರಾಜ್ ಸಿಂಗ್ ಪಾಡ್‌ಕಾಸ್ಟ್‌ವೊಂದರಲ್ಲಿ ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ತಮ್ಮ ತಂದೆಯ ಹೇಳಿಕೆಗಳಿಗೆ ಸಂಬಂಧಿಸಿದಂತೆ ಭಾರತದ ಮಾಜಿ ಕ್ರಿಕೆಟಿಗ ಯುವರಾಜ್‌ ಸಿಂಗ್‌ ಅವರು ಭಾರತದ ವಿಶ್ವಕಪ್‌ ವಿಜೇತ ನಾಯಕರುಗಳಾದ ಎಂ.ಎಸ್‌.ಧೋನಿ ಹಾಗೂ ಕಪಿಲ್ ದೇವ್‌ ಬಳಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.

ಯುವರಾಜ್‌ ತಂದೆ ಯೋಗರಾಜ್‌ ಸಿಂಗ್‌ ಹಲವು ಬಾರಿ ಧೋನಿ, ಕಪಿಲ್‌ ವಿರುದ್ಧ ತೀಕ್ಷ್ಣ ಮಾತುಗಳಿಂದ ಟೀಕೆ ವ್ಯಕ್ತಪಡಿಸಿದ್ದರು. ಈ ಕುರಿತು ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಯುವರಾಜ್‌ ಸಿಂಗ್ ಇಬ್ಬರು ದಿಗ್ಗಜ ಕ್ರಿಕೆಟಿಗರಲ್ಲಿ ಕ್ಷಮೆ ಕೋರಿದ್ದಾರೆ.

‘ಅವರ(ತಂದೆಯ) ಮಾತುಗಳಿಗಾಗಿ ನಾನು ಇಬ್ಬರಲ್ಲೂ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ. ಆ ಮಾತುಗಳು ನನ್ನದಲ್ಲ ಎಂದು ಇಬ್ಬರಿಗೂ ತಿಳಿದಿದೆ. ಕ್ರಿಕೆಟಿಗರಾಗಿ ಅವರು ದೇಶಕ್ಕೆ ನೀಡಿದ ಕೊಡುಗೆ ಬಗ್ಗೆ ನನಗೆ ಅಪಾರ ಗೌರವವಿದೆ’ ಎಂದಿದ್ದಾರೆ.

1980ರ ದಶಕದಲ್ಲಿ ಭಾರತ ತಂಡದ ಆಟಗಾರರಾಗಿದ್ದ ಪಂಜಾಬ್ ಮೂಲದ ಯೋಗರಾಜ್ ಸಿಂಗ್, ಟೀಂ ಇಂಡಿಯಾ ಪರ ಒಂದು ಟೆಸ್ಟ್ ಹಾಗೂ ಆರು ಏಕದಿನ ಪಂದ್ಯಗಳನ್ನಾಡಿದ್ದಾರೆ. 2025ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ, ಯೋಗರಾಜ್ ಸಿಂಗ್, ನನ್ನ ತಂಡದಿಂದ ಕೈಬಿಟ್ಟಿದ್ದಕ್ಕೆ ಆಗಿನ ನಾಯಕ ಕಪಿಲ್ ದೇವ್ ಅವರನ್ನು ಕೊಂದು ಹಾಕಬೇಕು ಎಂದುಕೊಂಡಿದ್ದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಕಪಿಲ್ ದೇವ್ ಭಾರತ, ನಾರ್ಥ್ ಝೋನ್ ಹಾಗೂ ಹರ್ಯಾಣ ತಂಡದ ನಾಯಕರಾಗಿದ್ದಾಗ ಕಾರಣವಿಲ್ಲದೇ ನನ್ನನ್ನು ಕೈಬಿಟ್ಟರು. ಆಗ ಇದನ್ನು ಕಪಿಲ್ ಬಳಿ ಕೇಳಿ ಎಂದು ನನ್ನ ಪತ್ನಿ ಶಭ್‌ನಮ್‌ ಹೇಳಿದರು. ನಾನಾಗ ಕಪಿಲ್ ದೇವ್ ಅವರನ್ನು ಕೊಲೆ ಮಾಡಲು ಬಂಧೂಕು ಹಿಡಿದು, ಸೆಕ್ಟರ್ 9 ನಲ್ಲಿರುವ ಅವರ ಮನೆಗೆ ಹೋಗಿದ್ದೆ. ಅವರ ಮೇಲೆ ವಾಚಾಮಗೋಚರವಾಗಿ ಬೈದೆ. ಆಗ ಕಪಿಲ್ ತಾಯಿಯ ಜತೆ ಮನೆಯಿಂದ ಹೊರಬಂದರು. ನಿನಗೆ ತಾಯಿಯಿದ್ದಾರೆ ಎನ್ನುವ ಒಂದೇ ಕಾರಣಕ್ಕೆ ಸುಮ್ಮನೇ ಬಿಡುತ್ತಿದ್ದೇನೆ. ಇಲ್ಲದಿದ್ದರೇ ಇಲ್ಲೇ ಹಣೆಗೆ ಬುಲೆಟ್ ಹೊಡೆಯುತ್ತಿದ್ದೆ ಎಂದು ಆವಾಜ್ ಹಾಕಿದ್ದಾಗಿ ಪಾಡ್‌ಕಾಸ್ಟ್‌ನಲ್ಲಿ ಹೇಳಿದ್ದರು.

ಇನ್ನು ಯೋಗರಾಜ್ ಸಿಂಗ್ ಸಮಯ ಸಿಕ್ಕಾಗಲೆಲ್ಲಾ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿಯ ಮೇಲೆ ಕಿಡಿಕಾರುತ್ತಲೇ ಬಂದಿದ್ದಾರೆ. ಧೋನಿಯಿಂದಲೇ ನನ್ನ ಮಗ ಯುವರಾಜ್ ಸಿಂಗ್ ಭವಿಷ್ಯ ಹಾಳಾಯಿತು. ಧೋನಿಯಿಂದಾಗಿಯೇ ನನ್ನ ಮಗನಿಗೆ ಹೆಚ್ಚಿನ ಅವಕಾಶ ಸಿಗಲಿಲ್ಲ ಎಂದು ಆರೋಪ ಮಾಡುತ್ತಲೇ ಬಂದಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ಯುವಿ ದಿಗ್ಗಜ ಕ್ರಿಕೆಟಿಗರಾದ ಧೋನಿ ಹಾಗೂ ಕಪಿಲ್ ದೇವ್ ಅವರ ಕ್ಷಮೆಯಾಚಿಸಿದ್ದಾರೆ.

Source link

Leave a Reply

Your email address will not be published. Required fields are marked *