JEEನಲ್ಲಿ ಮೊದಲ ರ‍್ಯಾಂಕ್, ಐಐಟಿ ಟಾಪರ್ ಈಗ ಖ್ಯಾತ ಸಿಂಗರ್, 9 ವರ್ಷದ ರೋಚಕ ಪಯಣ

JEEನಲ್ಲಿ ಮೊದಲ ರ‍್ಯಾಂಕ್, ಐಐಟಿ ಟಾಪರ್ ಈಗ ಖ್ಯಾತ ಸಿಂಗರ್, 9 ವರ್ಷದ ರೋಚಕ ಪಯಣ

JEEನಲ್ಲಿ ಮೊದಲ ರ‍್ಯಾಂಕ್, ಐಐಟಿ ಟಾಪರ್ ಈಗ ಖ್ಯಾತ ಸಿಂಗರ್, 9 ವರ್ಷದ ರೋಚಕ ಪಯಣ

JEEನಲ್ಲಿ ಮೊದಲ ರ‍್ಯಾಂಕ್, ಐಐಟಿ ಟಾಪರ್ ಈಗ ಖ್ಯಾತ ಸಿಂಗರ್, 9 ವರ್ಷದ ರೋಚಕ ಪಯಣ, ಕಾರ್ಪೋರೇಟ್ ಕ್ಷೇತ್ರದಲ್ಲಿ ಕೋಟಿ ರೂಪಾಯಿ ವೇತನದ ಕೆಲಸ ಕೈಬೀಸಿ ಕರೆಯುತ್ತಿದ್ದರೂ ಸಂಗೀತ ಕ್ಷೇತ್ರದಲ್ಲಿ ಪಯಣ ರೋಚಕ.

JEE ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಮೊದಲ ರ‍್ಯಾಂಕ್, ಐಐಟಿ ಬಾಂಬೆಯಲ್ಲಿ ಟಾಪರ್. ಇಷ್ಟಿದ್ದ ಮೇಲೆ ಕಾರ್ಪೋರೇಟ್ ಕೆಲಸ, ಬಹುರಾಷ್ಟ್ರೀಯ ಕಂಪನಿಗಳು, ವಿದೇಶಗಳಲ್ಲಿ ಕೋಟಿ ಕೋಟಿ ರೂಪಾಯಿ ಕೆಲಸದ ಆಫರ್ ಒಂದರ ಮೇಲೊಂದರಂತೆ ಬರುತ್ತದೆ. ಆದರೆ ಈತ ನೇರವಾಗಿ ಆಯ್ಕೆ ಮಾಡಿಕೊಂಡಿದ್ದು ಸಂಗೀತ ಕ್ಷೇತ್ರ. ತಾನು ಶೂನ್ಯದಿಂದ ಆರಂಭಿಸಬೇಕು ಅನ್ನೋ ಸ್ಪಷ್ಟ ಅರಿವು ಈತನಿಗಿತ್ತು. ಕಳೆದ 9 ವರ್ಷದಲ್ಲಿ ತಾನು ಆಯ್ಕೆ ಮಾಡಿಕೊಂಡ ದಾರಿ ಸರಿ ಇದೆ ಎಂದು ತೋರಿಸಿಕೊಟ್ಟ ಮ್ಯೂಸಿಕ್ ಸೆನ್ಸೇಷನ್ ಕಲ್ಪಿತ್ ವೀರವಾಲ್ ಅಳಿಯಾ ಕಲ್ಪೇಶ್ ಕೃಷ್ಣ.

2017ರಲ್ಲಿ ಕಲ್ಪಿತ್ ವೀರವಾಲ್ ದೇಶಾದ್ಯಂತ ಸುದ್ದಿಯಾಗಿದ್ದರು. ಈತನ ಸಾಧನೆ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿತ್ತು. ಕಾರಣ 360ಕ್ಕೆ 360 ಅಂಕ ಪಡೆದು ಆಲ್ ಇಂಡಿಯಾ 1 ರ‍್ಯಾಂಕ್ ಪಡೆದ ಕಲ್ಪಿತ್, ಮಾಧ್ಯಮಗಳಲ್ಲಿ ಭಾರಿ ಸದ್ದು ಮಾಡಿದ್ದರು. ಎಲ್ಲೆಡೆ ಕಲ್ಪಿತ್‌ಗೆ ಸನ್ಮಾನಗಳು ನಡೆದಿತ್ತು. ಕಾರಣ ಇದುವರೆಗೆ ಯಾರು ಮಾಡದಂತ ಸಾಧನೆ ಮಾಡಿದ್ದ ಕಲ್ಪಿತ್ ಬಳಿಕ ಐಐಟಿ ಬಾಂಬೆ ಸೇರಿಕೊಂಡರು. ಕಂಪ್ಯೂಟರ್ ಸೈನ್ಸ್ ಎಂಜಿನೀಯರಿಂಗ್‌ನಲ್ಲಿ ಟಾಪರ್ ಆಗಿ ಹೊರಹೊಮ್ಮಿದರು. ಈ ಪದವಿ, ಸಾಧನೆ ಇದ್ದ ಕಲ್ಪಿತ್‌ಗೆ ಕಾರ್ಪೋರೇಟ್ ಕೆಲಸಗಳು ಕೈಬೀಸಿ ಕರೆದಿತ್ತು.

ಎಂಜಿನೀಯರಿಂಗ್‌ನಲ್ಲಿ ಕಲ್ಪಿತ್‌ಗೆ ಉದ್ಯೋಗ ಖಚಿತವಾಗಿತ್ತು, ವೇತನ ಕೋಟಿಗಿಂತ ಕಡಿಮೆ ಇರಲಿಲ್ಲ. ಆದರೆ ಕಲ್ಪಿತ್ ಇದೆಲ್ಲ ಬಿಟ್ಟು ಮ್ಯೂಸಿಕ್ ಕ್ಷೇತ್ರ ಆರಿಸಿಕೊಂಡರು. ಹಾಡುವುದು, ಮ್ಯೂಸಿಕ್ ಕಂಪೋಸಿಂಗ್ ಕಲ್ಪಿತ್ ನೆಚ್ಚಿನ ಕ್ಷೇತ್ರವಾಗಿತ್ತು. ಆದರೆ ಈ ಕ್ಷೇತ್ರದಲ್ಲಿ ತಾನೂ ಶೂನ್ಯದಿಂದ ಆರಂಭಿಸಬೇಕು ಅನ್ನೋದು ಗೊತ್ತಿತ್ತು. ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿತು, ಸ್ವರ ಹಾಗೂ ಸಂಗೀತ ಪಾಂಡಿತ್ಯ ಬೆಳೆಸಿಕೊಂಡರು.

ಕಲ್ಪಿತ್ ವೀರವಾಲ್ ಕರ್ನಾಟಕ ಶಾಸ್ತ್ರೀಯ ಗಾಯಕನಾಗಿ ಗುರುತಿಸಿಕೊಂಡಿದ್ದಾರೆ. ಕಲ್ಪೇಷ್ ಕೃಷ್ಣ ಹೆಸರಿನಲ್ಲಿ ತಂಡದೊಂದಿಗೆ ಹಲವೆಡೆ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ದೇಶ ವಿದೇಶಗಳಲ್ಲಿ ಕಲ್ಪೇಷ್ ಕಾರ್ಯಕ್ರಮ ನೀಡುತ್ತಿದ್ದಾರೆ. ಭಾರಿ ಬೇಡಿಕೆಯ ಗಾಯಕನಾಗಿ ಹೊರಹೊಮ್ಮಿದ್ದಾರೆ. ಜನಪ್ರಿತಯೆ ಗಳಿಸಿಕೊಂಡಿದ್ದಾರೆ, ಎಲ್ಲಕ್ಕಿಂತ ಮುಖ್ಯವಾಗಿ ಜನರ ಪ್ರೀತಿ ವಿಶ್ವಾಸಗಳಿಸಿಕೊಂಡಿದ್ದಾರೆ.

9 ವರ್ಷದ ಹಿಂದೆ ಇದೇ ಸಮಯದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಮೊದಲ ರ‍್ಯಾಂಕ್ ಪಡೆದಿದ್ದೆ. ಭಾರಿ ಮೆಚ್ಚುಗೆ, ಶುಭ ಹಾರೈಕೆಗಳು ನನಗೆ ಸ್ಪೂರ್ತಿ ನೀಡಿತ್ತು. ಬಳಿಕ ಉನ್ನತ ಶಿಕ್ಷಣ, ಹೀಗೆ ಸಾಗಿತ್ತು. ಆದರೆ ಕಾರ್ಪೋರೇಟ್ ಕೆಲಸ ಆಯ್ಕೆ ಮಾಡಿಕೊಳ್ಳದೆ ನನಗೆ ಇಷ್ಟವಾದ, ನನ್ನ ಹೃದಯಕ್ಕೆ ಹತ್ತಿರವಾದ ಸಂಗೀತ ಕ್ಷೇತ್ರ ಆಯ್ಕೆ ಮಾಡಿಕೊಂಡೆ. ಇದೀಗ ನಿಮ್ಮ ಪ್ರೀತಿ, ಬೆಂಬಲ ನನ್ನನ್ನು ಇಲ್ಲಿವರೀಗೆ ತಂದಿದೆ. ನಿಮ್ಮ ಪ್ರೋತ್ಸಾಹ ಸದಾ ಹೀಗೆ ಇರಲಿ ಎಂದು ಕಲ್ಪಿತ್ ಹೇಳಿಕೊಂಡಿದ್ದಾರೆ.

Source link

Leave a Reply

Your email address will not be published. Required fields are marked *