1 ಗಂಟೆಯಲ್ಲಿ ಏನೇನೋ ಆಗ್ಬಹುದು: ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್​ ಬಗ್ಗೆ ಜಮೀರ್ ಶಾಕಿಂಗ್ ಹೇಳಿಕೆ

1 ಗಂಟೆಯಲ್ಲಿ ಏನೇನೋ ಆಗ್ಬಹುದು: ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್​ ಬಗ್ಗೆ ಜಮೀರ್ ಶಾಕಿಂಗ್ ಹೇಳಿಕೆ


1 ಗಂಟೆಯಲ್ಲಿ ಏನೇನೋ ಆಗಬಹುದು: ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ ಬಗ್ಗೆ ಜಮೀರ್ ಶಾಕಿಂಗ್ ಹೇಳಿಕೆ

ದಾವಣಗೆರೆ, (ಏಪ್ರಿಲ್ 05): ಹಲವು ಅಂತೆ ಕಂತೆಗಳ ಬಗ್ಗೆ ಚರ್ಚೆ ಜೋರಾಗುತ್ತಿದ್ದಂತೆಯೇ ಸಚಿವ ಜಮೀರ್ ಅಹ್ಮದ್ ಖಾನ್ (ಜಮೀರ್ ಅಹಮದ್ ಖಾನ್) ಅವರು ದಾವಣಗೆರೆ ದಕ್ಷಿಣ ಉಪಚುನಾವಣೆ (ದಾವಣಗೆರೆ ದಕ್ಷಿಣ ಉಪಚುನಾವಣೆ) ಪ್ರಚಾರಕ್ಕೆ ಬಂದಿದ್ದಾರೆ. ಎಸ್ ಎಸ್ ಮಲ್ಲಿಕಾರ್ಜುನ್ (ಸಚಿವ ಎಸ್.ಎಸ್. ಮಲ್ಲಿಕಾರ್ಜುನ) ಪಕ್ಕದಲ್ಲಿಯೇ ಕುಳಿತು ಸುದ್ದಿಗೋಷ್ಠಿ ನಡೆಸಿ ತಮ್ಮ ನಡುವೆ ಯಾವುದೇ ವೈಮನಸ್ಸಿಲ್ಲ ಎಂದು ಸಾರಿದರು. ಆದರೆ ಚಾಮರಾಜಪೇಟೆಗೆ ಬಂದು ಯಾರಾದರೂ ಮಾತನಾಡಿದರೆ ನಾನೂ ಕೂಡ ಸುಮ್ಮನೆ ಇರಲ್ಲ ಎಂದು ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಯಾಕಂದ್ರೆ, ಈ ಹಿಂದೆ ಟಿಕೆಟ್ ವಿಚಾರವಾಗಿ ಸಚಿವ ಮಲ್ಲಿಕಾರ್ಜುನ ಅವರೂ ಸಹ ದಾವಣಗೆರೆಗೆ ಬಂದು ಏನೇನೋ ಮಾತನಾಡಿದ ಸರಿ ಇರಲ್ಲ ಎಂದು ಜಮೀರ್ ವಿರುದ್ಧ ಗುಡುಗಿದ್ದರು. ಇದೀಗ ಮಲ್ಲಿಕಾರ್ಜುನ ಅವರಿಗೆ ಮಾತಿಗೆ ಸ್ಪಷ್ಟನೆ ನೀಡುವಾಗ ಜಮೀರ್ ಸಹ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ​

ಟಿಕೆಟ್‌ ವಿಚಾರದ ಗಲಾಟೆ ವೇಳೆ ಎಸ್‌ಎಸ್‌ ಮಲ್ಲಿಕಾರ್ಜುನ್‌ “ಯಾರ್ರಿ ಜಮೀರ್‌ ದಾವಣಗೆರೆ ಬಗ್ಗೆ ಮಾತನಾಡಲು” ಎಂಬ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯೊಂದಿಗೆ ಅಲ್ಪಸಂಖ್ಯಾತ ಅಭ್ಯರ್ಥಿಗೆ ಟಿಕೆಟ್ ಸಿಕ್ಕಿಲ್ಲ ಎಂಬ ಕಾರಣಕ್ಕೂ ಸಚಿವ ಜಮೀರ್‌ ಮುನಿಸಿಕೊಂಡಿದ್ದರು. ಮಲ್ಲಿಕಾರ್ಜುನ ಹೇಳಿಕೆಯಿಂದಾಗಿ ಜಮೀರ್ ಅವರ ಅಭಿಮಾನಿಗಳು ಹಾಗೂ ಮುಸ್ಲಿಮರ ಆಕ್ರೋಶಕ್ಕೆ ಕಾರಣವಾಗಿತ್ತು. ಜಮೀರ್ ಅವರನ್ನ ಕಡೆಗಣಿಸಿದ್ದಕ್ಕೆ ಈ ಬಾರಿ ತಕ್ಕ ಪಾಠ ಕಲಿಸುವ ಬಗ್ಗೆಯೂ ಅಲ್ಪಸಂಖ್ಯಾತರ ಹೇಳಿಕೆ ನೀಡಿದ್ದು, ಇದು ಮಲ್ಲಿಕಾರ್ಜುನ ಅವರ ಆತಂಕಕ್ಕೆ ಕಾರಣವಾಗಿತ್ತು. ಹೀಗಾಗಿ ದಾವಣಗೆರೆಯಲ್ಲಿ ಜಮೀರ್‌ ಅವರಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆ ಎಸ್‌ಎಸ್‌ ಮಲ್ಲಿಕಾರ್ಜುನ್‌ ಅವರು ಸಿಎಂ ಬಳಿ ಒತ್ತಡ ಹಾಕಿ ಪ್ರಚಾರಕ್ಕೆ ಕರೆಸಿಕೊಂಡಿದ್ದಾರೆ. ಇನ್ನು ಸಿಎಂ ಮಾತಿಗೆ ಬೆಲೆಕೊಟ್ಟು ದಾವಣಗೆರೆಗೆ ಬಂದಿರುವ ಜಮೀರ್ ಏನೆಲ್ಲಾ ಹೇಳಿದ್ದಾರೆ ಎನ್ನುವುದನ್ನು ಕೇಳಿ.

ಇದನ್ನೂ ನೋಡಿ: ಏಕವಚನದಲ್ಲಿ ಬೈದಿದ್ದ ಸಚಿವ ಎಸ್ ಎಸ್ ಮಲ್ಲಿಕಾರ್ಜುರನ್ನು ಕ್ಷಮಿಸಿ ಪ್ರಚಾರಕ್ಕೆ ಬಂದ ಜಮೀರ್



Source link

Leave a Reply

Your email address will not be published. Required fields are marked *