
ಚುನಾವಣಾ ಪ್ರಚಾರ ಮುಗಿಸಿ ಮರಳುವಾದ ಬಿಜೆಪಿ ಮಹಿಳಾ ಅಭ್ಯರ್ಥಿ ಕಾರು ಅಪಘಾತ, ತೆಲೆಗೆ ಗಾಯ, ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಗಾಯಗೊಂಡಿರುವ ಅಭ್ಯರ್ಥಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ.
ಕೂಚ್ ಬೆಹಾರ್ (ಏ.05) ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ, ಕರ್ನಾಟಕದಲ್ಲಿ ಎರಡು ಕ್ಷೇತ್ರಗಳ ಉಪಚುನಾವಣೆ ಕಾವು ತೀವ್ರಗೊಂಡಿದೆ. ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಇದರ ನಡುವೆ ಪಶ್ಚಿಮ ಬಂಗಾಳದ ಬಿಜೆಪಿ ಮಹಿಳಾ ನಾಯಕಿ ಕಾರು ಅಪಘಾತವಾಗಿದೆ. ಪರಿಣಾಮ ಮಹಿಳಾ ಅಭ್ಯರ್ಥಿ ಸಾಬಿತ್ರಿ ಬರ್ಮನ್ ತಲೆಗೆ ಗಾಯಗೊಂಡಿದೆ. ಸಿತಾಲ್‌ಕುಚಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಸಾಬಿತ್ರಿ ಬರ್ಮನ್ ಅವರನ್ನು ಆಸ್ಪತ್ರೆ ಗೆ ದಾಖಲಿಸಲಾಗಿದೆ.
ಪ್ರಚಾರ ಮುಗಸಿ ಮರಳುವಾಗ ಕಾರು ಪಲ್ಟಿ
ಕೂಚ್ ಬೆಹಾರ್‌ನಲ್ಲಿ ಪ್ರಚಾರಕ್ಕೆ ತೆರಳಿದ್ದ ಸಾಬಿತ್ರಿ ಬರ್ಮನ್, ತಮ್ಮ ಬಿಜೆಪಿ ಕಾರ್ಯಕರ್ತರು, ಸ್ಥಳೀಯ ಮುಖಂಡರ ಜೊತೆ ಭರ್ಜರಿ ಪ್ರಚಾರ ನಡೆಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ಗೆಲುವಿನ ವಿಶ್ವಾಸದಲ್ಲಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿಗಳು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಚುನಾವಣಾ ನಿಯಮದಂತೆ ಸಂಜೆಯಾಗುತ್ತಿದ್ದಂತೆ ಪ್ರಚಾರ ಮುಗಿಸಿ ಮರಳಿದ್ದಾರೆ. ಕಾರಿನ ಮೂಲಕ ಮರಳುತ್ತಿದ್ದಾ ಶಿಖಾರ್‌ಪುರ್ ಪಂಚಮಿಲೆ ಬಳಿ ಕಾರು ನಿಯಂತ್ರಣ ತಪ್ಪಿದೆ. ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ.
ಜಲ ಮಂಡಳಿ ಬಳಿ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಕಾರಿನಲ್ಲಿದ್ದ ಅಭ್ಯರ್ಥಿ ಸಾಬಿತ್ರಿ ಬರ್ಮನ್ ಗಾಯಗೊಂಡಿದ್ದಾರೆ. ಕಾರಿನ ಹಿಂಬಾಗದಲ್ಲಿ ಬೇರೆ ವಾಹನದಲ್ಲಿ ಆಗಮಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು ನೆರವಿಗೆ ಧಾವಿಸಿದ್ದಾರೆ. ಪಲ್ಟಿಯಾದ ಕಾರಿನಿಂದ ನಾಯಕಿ ಅಭ್ಯರ್ಥಿ ಸಾಬಿತ್ರಿ ಬರ್ಮನ್ ಅವರನ್ನು ರಕ್ಷಿಸಿ ಮತಬಂಗ ಸಬ್ ಡಿವಿಶನ್ ಆಸ್ಪತ್ರೆಗೆ ದಾಖಳಿಸಿದ್ದಾರೆ. ಕಾರು ಪಲ್ಟಿಯಾದ ಕಾರಣ ಸಾಬಿತ್ರಿ ಬರ್ಮನ್ ತೆಲೆಗೆ ಗಾಯವಾಗಿದೆ. ತಕ್ಷಣವೇ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಅನುಮಾನ ಮೂಡಿಸಿದ ಅಪಘಾತ
ಅಪಘಾತ ಕುರಿತು ಗೌತಮ್ ಸರ್ಕಾರ ಮಾಹಿತಿ ನೀಡಿದ್ದಾರೆ. ಪ್ರಚಾರ ಮುಗಿಸಿ ಮರಳುತ್ತಿರುವ ಅತೀ ವೇಗವಾಗಿ ಹಾಗೂ ಅಚಾನಕ್ಕಾಗಿ ಟ್ರಕ್ ಅಡ್ಡ ಬಂದಿದೆ. ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್ ನಿಯಮ ಉಲ್ಲಂಘಿಸಿ ರಸ್ತೆಯ ಮತ್ತೊಂದು ಬದಿಗೆ ಬಂದಿದೆ. ಇದರಿಂದ ಅಪಘಾತ ತಪ್ಪಿಸಲು ಚಾಲಕ ತಕ್ಷಣವೇ ಕಾರಿನ ಸ್ಟೀರಿಂಗ್ ತಿರುಗಿಸಿದ್ದಾರೆ. ಇದರಿಂದ ಕಾರು ಅಪಘಾತವಾಗಿದೆ. ಪಶ್ಚಿಮ ಬಂಗಾಳದಲ್ಲಿ ನಾಯಕರ ಮೇಲೆ ದಾಳಿಯಾಗುತ್ತಿರುವುದು ಹೊಸ ವಿಚಾರವೇನಲ್ಲ. ಕಾಂಗ್ರೆಸ್ ನಾಯಕ ಅಧಿರಂಚನ್ ಚೌಧರಿ ಮೇಲೆ ಇತ್ತೀಚೆಗೆ ದಾಳಿಯಾಗಿತ್ತು. ಇದೀಗ ಈ ಅಪಘಾತದ ಹಿಂದೆ ಷಡ್ಯಂತ್ರವಿದೆಯಾ ಅನ್ನೋ ಅನುಮಾನಗಳು ಬಲಗೊಳ್ಳುತ್ತಿದೆ.