Kumar vishwas ವರ್ಷದ ಮೊದಲೇ ರಾಘವ್ ಚಡ್ಡಾಗೆ ಆಪ್‌ನಿಂದ ಕೊಕ್ ಭವಿಷ್ಯ ನುಡಿದಿದ್ದ ಕುಮಾರ್ ವಿಶ್ವಾಸ್, ವಿಡಿಯೋ ವೈರಲ್ | Viral Video Kumar Vishwas Had Predicted Raghav Chadha Exit From Aap A Year Ago

Kumar vishwas ವರ್ಷದ ಮೊದಲೇ ರಾಘವ್ ಚಡ್ಡಾಗೆ ಆಪ್‌ನಿಂದ ಕೊಕ್ ಭವಿಷ್ಯ ನುಡಿದಿದ್ದ ಕುಮಾರ್ ವಿಶ್ವಾಸ್, ವಿಡಿಯೋ ವೈರಲ್ | Viral Video Kumar Vishwas Had Predicted Raghav Chadha Exit From Aap A Year Ago



Kumar vishwas ವರ್ಷದ ಮೊದಲೇ ರಾಘವ್ ಚಡ್ಡಾಗೆ ಆಪ್‌ನಿಂದ ಕೊಕ್ ಭವಿಷ್ಯ ನುಡಿದಿದ್ದ ಕುಮಾರ್ ವಿಶ್ವಾಸ್, ವಿಡಿಯೋ ವೈರಲ್ | Viral Video Kumar Vishwas Had Predicted Raghav Chadha Exit From Aap A Year Ago

ವರ್ಷದ ಮೊದಲೇ ರಾಘವ್ ಚಡ್ಡಾಗೆ ಆಪ್‌ನಿಂದ ಕೊಕ್ ಭವಿಷ್ಯ ನುಡಿದಿದ್ದ ಕುಮಾರ್ ವಿಶ್ವಾಸ್, ವಿಡಿಯೋ ವೈರಲ್ ಆಗಿದೆ. ಆಪ್ ಮುಂದಿನ ಟಾರ್ಗೆಟ್ ರಾಘವ್ ಚಡ್ಡಾ, ನೋಡುತ್ತಾ ಇರೀ ಆಪ್‌ನಿಂದ ಹೊರಬರುವ ಪರಿಸ್ಥಿತಿ ಎದುರಾಗಲಿದೆ ಎಂದು ಭವಿಷ್ಯ ನುಡಿದಿದ್ದರು.

ನವದೆಹಲಿ (ಏ.05) ಆಮ್ ಆದ್ಮಿ ಪಾರ್ಟಿ ಕಳೆದ ಕೆಲವು ದಿನಗಳಲ್ಲಿ ಸಾರ್ವಜನಿಕ ವಲಯದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ. ಪ್ರಮುಖವಾಗಿ ಜನವರವಾಗಿ ಧ್ವನಿ ಎತ್ತಿ ಸಂಸತ್ತಿನಲ್ಲಿ ಪಕ್ಷಾತೀತವಾಗಿ ಬೆಂಬಲ ಗಿಟ್ಟಿಸಿಕೊಂಡಿದ್ದ ಆಪ್ ರಾಜ್ಯಸಭಾ ಸಂಸದ ರಾಘವ್ ಚಡ್ಡಾಗೆ ಪಕ್ಷ ಕೊಕ್ ನೀಡಿತ್ತು. ರಾಜ್ಯಸಭಾ ಡೆಪ್ಯೂಟಿ ಲೀಡರ್ ಸ್ಥಾನವನ್ನು ಆಮ್ ಆದ್ಮಿ ಪಾರ್ಟಿ ಕಿತ್ತು ಹಾಕಿತ್ತು. ಇಷ್ಟೇ ಅಲ್ಲ ರಾಘವ್ ಚಡ್ಡಾಗೆ ಆಪ್ ವತಿಯಿಂದ ಮಾತನಾಡಲು ಅವಕಾಶ ನೀಡಬಾರದು ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿತ್ತು. ಆಮ್ ಆದ್ಮಿ ಪಾರ್ಟಿಯ ಈ ನಡೆ ಭಾರಿ ಆಕ್ರೋಶಕ್ಕೆ ಕಾರಣಾಗಿತ್ತು. ಆದರೆ ರಾಘವ್ ಚಡ್ಡಾ ಈಗಿನ ಪರಿಸ್ಥಿತಿಯನ್ನು ಸ್ಟಾಂಡ್ ಅಪ್ ಕಾಮಿಡಿಯನ್, ಮಾಜಿ ಆಪ್ ನಾಯಕ ಕುಮಾರ್ ವಿಶ್ವಾಸ್ ಮೊದಲೇ ಊಹಿಸಿದ್ದರು. ಈ ಕುರಿತು ಭವಿಷ್ಯ ನುಡಿದಿದ್ದರು. ಹಳೇ ವಿಡಿಯೋ ಇದೀಗ ಭಾರಿ ವೈರಲ್ ಆಗಿದೆ.

ಹಳೇ ವಿಡಿಯೋ ವೈರಲ್

ಆಪ್ ಪಕ್ಷದಿಂದ ಹಲವು ನಾಯಕರ ಉಚ್ಚಾಟನೆ, ಹಲವರ ಪಕ್ಷ ತೊರೆದ ಬೆನ್ನಲ್ಲೇ ಈ ಕುರಿತು ಕುಮಾರ್ ವಿಶ್ವಾಸ ಬಳಿ ಪ್ರಶ್ನಿಸಲಾಗಿತ್ತು. ಸಂದರ್ಶನದ ವೇಳೆ ಈ ಪ್ರಶ್ನೆ ಕೇಳಲಾಗಿತ್ತು. ಆಪ್ ರಾಜ್ಯಸಭೆ ಸಂಸದೆ ಸ್ವಾತಿ ಮಲಿವಾಲ್ ಜೊತೆಗೆ ಆಪ್ ನಡೆದುಕೊಂಡ ರೀತಿ, ಪಕ್ಷದಿಂದ ಕಿತ್ತು ಹಾಕಿದ ರೀತಿ ಭಾರಿ ಚರ್ಚೆಯಾಗಿತ್ತು. ಇದರ ಬೆನ್ನಲ್ಲೇ ಈ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಕುಮಾರ್ ವಿಶ್ವಾಸ್, ಆಮ್ ಆದ್ಮಿ ಪಾರ್ಟಿಯಲ್ಲಿ ಮುಂದಿನ ಟಾರ್ಗೆಟ್ ಬಾಲಕ ನಾಯಕ ಎಂದಿದ್ದಾರೆ. ಕುಮಾರ್ ವಿಶ್ವಾಸ ಬಾಲಕ ನಾಯಕ ಎಂದು ರಾಘವ್ ಚಡ್ಡಾ ಉಲ್ಲೇಖಿಸಿದ್ದರು. ಮಾತು ಮುಂದುವರಿಸಿದ ಕುಮಾರ್ ವಿಶ್ವಾಸ್, ರಾಘವ್ ಚಡ್ಡಾ ಜನಪ್ರಿಯತೆ ಹೆಚ್ಚಾಗುತ್ತಿದೆ. ಬಾಲಿವುಡ್ ನಟಿಯನ್ನು ಮದುವೆಯಾಗಿದ್ದಾರೆ. ಅಧಿವೇಶನದಲ್ಲಿ ಪ್ರಶ್ನೆಗಳನ್ನು ಕೇಳುತ್ತಾ ಎಲ್ಲರ ಗಮನಸೆಳೆಯುತ್ತಿದ್ದಾರೆ. ಪಕ್ಷಾತೀತವಾಗಿ ಜನಪ್ರೀಯತೆ ಸಿಗುತ್ತಿದೆ. ಅರವಿಂದ್ ಕೇಜ್ರಿವಾಲ್‌ಗಿಂತ ಹೆಚ್ಚು ಜನಪ್ರಿಯರಾಗುತ್ತಿದ್ದಾರೆ. ಹೀಗಾಗಿ ಮುಂದಿನ ಟಾರ್ಗೆಟ್ ರಾಘವ್ ಚಡ್ಡಾ ಎಂದು ಕುಮಾರ್ ವಿಶ್ವಾಸ ಹೇಳಿದ್ದರು.

ಆಪ್ ಪಾರ್ಟಿಯ ಹೈಕಮಾಂಡ್ ಹಾಗೂ ಸುಪ್ರೀಂ ಲೀಡರ್‌ಗಿಂತ ಹೆಚ್ಚು ಜನಪ್ರಿಯರಾಗಲು, ಜನರ ವಿಶ್ವಾಸಗಳಿಸಲು ಅವಕಾಶ ನೀಡುವುದಿಲ್ಲ. ಈ ಕುರಿತು ಅರವಿಂದ್ ಕೇಜ್ರಿವಾಲ್‌ಗೆ ಆತಂಕವಿದೆ ಎಂದು ಕುಮಾರ್ ವಿಶ್ವಾಸ ಹೇಳಿದ್ದರು. ಅಂದು ಈ ಮಾತುಗಳನ್ನು ಹೆಚ್ಚಿನವರು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಇದೀಗ ಕುಮಾರ್ ವಿಶ್ವಾಸ ಮಾತುಗಳು ಸತ್ಯ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ಅಂದು ಹೆಚ್ಚಿನವರ ಗಮನ ಸೆಳೆದಿರಲಿಲ್ಲ. ಆಧರೆ ಯಾವಾಗ ಆಮ್ ಆದ್ಮಿ ಪಾರ್ಟಿ ರಾಘವ್ ಚಡ್ಡಾ ಅವರ ಅಧಿಕಾರ, ಹಕ್ಕನ್ನು ರಾಜ್ಯಸಭೆಯಿಂದ ಕಿತ್ತುಕೊಂಡ ಬೆನ್ನಲ್ಲೇ ಈ ವಿಡಿಯೋ ವೈರಲ್ ಆಗಿದೆ. ಈ ಕೋಲಾದ ಬೆನ್ನಲ್ಲೇ ರಾಘವ್ ಚಡ್ಡಾ ಖಡಕ್ ಉತ್ತರ ನೀಡಿದ್ರು. ನನ್ನ ಧ್ವನಿಯನ್ನು ಮೌನವಾಗಿಸಬಹುದು, ಆಧರೆ ಸೋಲಿಸಲು ಸಾಧ್ಯವಿಲ್ಲ ಎಂದಿದ್ದರು.



Source link

Leave a Reply

Your email address will not be published. Required fields are marked *