ಸ್ನೇಹಿತನ ಮನೆಗೆ ಊಟಕ್ಕೆ ಬಂದಿದ್ದ ಗೆಳೆಯರು ಸಾವು: ದೇವರಿಗೆ ಹರಕೆ ತೀರಿಸಲು ಹೋಗಿದ್ದ ಮತ್ತಿಬ್ಬರು ನದಿ ಪಾಲು

ಸ್ನೇಹಿತನ ಮನೆಗೆ ಊಟಕ್ಕೆ ಬಂದಿದ್ದ ಗೆಳೆಯರು ಸಾವು: ದೇವರಿಗೆ ಹರಕೆ ತೀರಿಸಲು ಹೋಗಿದ್ದ ಮತ್ತಿಬ್ಬರು ನದಿ ಪಾಲು


ಸ್ನೇಹಿತನ ಮನೆಗೆ ಊಟಕ್ಕೆ ಬಂದಿದ್ದ ಗೆಳೆಯರು ಸಾವು: ದೇವರಿಗೆ ಹರಕೆ ತೀರಿಸಲು ಹೋಗಿದ್ದ ಮತ್ತಿಬ್ಬರು ನದಿ ಪಾಲು

ಚಿಕ್ಕಬಳ್ಳಾಪುರ, ಏಪ್ರಿಲ್ 05: ಸ್ನೇಹಿತನ ಮನೆಗೆ ಬಂದಿದ್ದ 7 ಜನರ ಇಬ್ಬರು ಕೆರೆಯಲ್ಲಿ ಈಜಲು (ಈಜು) ಹೋಗಿ ನೀರುಪಾಲು (ಸಾವು) ಆಗಿರುವಂತಹ ಘಟನೆ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಗಡಿಮಿಂಚೇನಹಳ್ಳಿ ಗ್ರಾಮದ ಬಳಿಯ ರಾಮಸಮುದ್ರ ಕೆರೆಯಲ್ಲಿ ನಡೆದಿದೆ. ಬೆಂಗಳೂರಿನ ಜೆ.ಪಿ.ನಗರದ ಗಿರೀಶ್(35) ಮತ್ತು ಕಿಶೋರ್(28) ಮೃತರು. ದಿಬ್ಬಹಳ್ಳಿ ಪೊಲೀಸ್ ಠಾಣಾೂರ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಗಡಿಮಿಂಚೇನಹಳ್ಳಿ ಗ್ರಾಮಕ್ಕೆ ಭಾನುವಾರ ರಜೆ ಹಿನ್ನೆಲೆ ಸ್ನೇಹಿತ ಜಗದೀಶ್ ಮನೆಗೆ ಒಟ್ಟು 7 ಜನ ಸ್ನೇಹಿತರು ಆಗಮಿಸಿದ್ದರು. ಗ್ರಾಮಕ್ಕೆ ಹೋಗುವ ದಾರಿಯಲ್ಲಿ ಕೆರೆಯಲ್ಲಿ ಈಜಲು ನೀರಿಗೆ ಇಳಿದಿದ್ದಾರೆ. ಈ ವೇಳೆ 7 ಜನರಲ್ಲಿ ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮೃತ ಗಿರೀಶ್ ಮತ್ತು ಕಿಶೋರ್ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.

ಹರಕೆ ತಿರಿಸಲು ಬಂದಿದ್ದ ವಿದ್ಯಾರ್ಥಿಗಳಿಬ್ಬರು ಈಜಲು ಹೋಗಿ ಸಾವು

ಮತ್ತೊಂದು ಪ್ರಕರಣದಲ್ಲಿ ಭೀಮಾ ನದಿಗೆ ಈಜಲು ಹೋಗಿದ್ದ ಇಬ್ಬರು ವಿದ್ಯಾರ್ಥಿಗಳು ನೀರುಪಾಲಾದಂತಹ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಮಣ್ಣೂರಿನಲ್ಲಿ ನಡೆದಿದೆ. ಪುಂಡಲಿಕ್ ಮೂಲಿಮನಿ(17) ಮತ್ತು ಮಹೇಶ್(16) ಮೃತ ದುರ್ದೈವಿಗಳು.

ಇದನ್ನೂ ಓದಿ: ಮಕ್ಕಳ ಪಾಲಿಗೆ ಮೃತ್ಯುಕೂಪವಾದ ಕೃಷಿಹೊಂಡ: ಈಜಲು ಹೋದ ನಾಲ್ವರು ಜಲಸಮಾಧಿ

ಹರಕೆ ತಿರಿಸಲು ಮಣ್ಣೂರ್ ಯಲ್ಲಮ್ಮನ ದೇಗುಲಕ್ಕೆ ವಿದ್ಯಾರ್ಥಿಗಳು ಬಂದಿದ್ದರು. ಈ ವೇಳೆ ನದಿಯಲ್ಲಿ ಈಜಲು ಹೋದಾಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ವಿದ್ಯಾರ್ಥಿಗಳ ಶವದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಕಾಲೇಜು. ಸದ್ಯ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾರಿಗೆ ಬಸ್, ಖಾಸಗಿ ಬಸ್ ನಡುವೆ ಡಿಕ್ಕಿ: ಇಬ್ಬರ ಸಾವು

ಎನ್ ಹೆಚ್ 48 ರಲ್ಲಿ ಸಾರಿಗೆ ಬಸ್ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದ ಹಿನ್ನೆಲೆ ಇಬ್ಬರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ಮಿನಿ ವಿಧಾನಸೌಧದ ಬಳಿ ನಡೆದಿದೆ. ಖಾಸಗಿ ಬಸ್ಸಿನ ಹಿಂದಿನ ಸೀಟ್‌ನಲ್ಲಿ ಕುಳಿತಿದ್ದ ಹಾವೇರಿಯ ಪ್ರವೀಣ್ ಕೃಷ್ಣಪ್ಪ(28) ಮತ್ತು ಗದಗದ ಸಂಗೀತಾ(16) ಮೃತರು.

ಇದನ್ನೂ ಓದಿ: ಪ್ರತ್ಯೇಕ ಘಟನೆ: ರಜೆ ತಂದ ಆಪತ್ತು; ಈಜಲು ತೆರಳಿದ್ದ ಐವರು ಬಾಲಕರು ನೀರುಪಾಲು

35 ಪ್ರಯಾಣಿಕರಿಗೆ ಗಾಯಗಳಾಗಿದ್ದರೆ, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಮತ್ತು ಕೆಎಸ್ಆರ್ ಟಿಸಿ ಬಸ್. ಘಟನೆ ಸಂಬಂಧ ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



Source link

Leave a Reply

Your email address will not be published. Required fields are marked *