Trump warning ಜಲಸಂಧಿ ಓಪನ್‌ಗೆ ಡೆಡ್‌ಲೈನ್, ಅಮೆರಿಕ ಅಧ್ಯಕ್ಷ ಪದವಿಗೆ ಅಪಮಾನಕರ ಪದ ಬಳಕೆ ಮಾಡಿದ ಟ್ರಂಪ್ | Trump Sets Deadline On Strait Issue Uses Controversial Term For Us Presidency

Trump warning ಜಲಸಂಧಿ ಓಪನ್‌ಗೆ ಡೆಡ್‌ಲೈನ್, ಅಮೆರಿಕ ಅಧ್ಯಕ್ಷ ಪದವಿಗೆ ಅಪಮಾನಕರ ಪದ ಬಳಕೆ ಮಾಡಿದ ಟ್ರಂಪ್ | Trump Sets Deadline On Strait Issue Uses Controversial Term For Us Presidency



Trump warning ಜಲಸಂಧಿ ಓಪನ್‌ಗೆ ಡೆಡ್‌ಲೈನ್, ಅಮೆರಿಕ ಅಧ್ಯಕ್ಷ ಪದವಿಗೆ ಅಪಮಾನಕರ ಪದ ಬಳಕೆ ಮಾಡಿದ ಟ್ರಂಪ್ | Trump Sets Deadline On Strait Issue Uses Controversial Term For Us Presidency

ಜಲಸಂಧಿ ಓಪನ್‌ಗೆ ಡೆಡ್‌ಲೈನ್, ಅಮೆರಿಕ ಅಧ್ಯಕ್ಷ ಪದವಿಗೆ ಅಪಮಾನಕರ ಪದ ಬಳಕೆ ಮಾಡಿದ ಟ್ರಂಪ್ ಒಂದೇ ದಿನದ ಗಡುವು ನೀಡಿದ್ದು, ಅವಾಚ್ಯ ಶಬ್ದಗಳಿಂದ ಇರಾನ್ ನಿಂದಿಸಿದ್ದಾರೆ. ಟ್ರಂಪ್ ಕೊಟ್ಟ ವಾರ್ನಿಂಗ್ ಏನು?  

ವಾಷಿಂಗ್ಟನ್ (ಏ.05) : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ವಿರುದ್ಧ ತೀಕ್ಷ್ಣವಾದ ಮತ್ತು ಅವಾಚ್ಯ ಶಬ್ದಗಳನ್ನು ಬಳಸಿ ವಾಗ್ದಾಳಿ ನಡೆಸಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ತೆರವುಗೊಳಿಸಬೇಕೆಂದು ಆಗ್ರಹಿಸಿ, ತಮ್ಮ ‘ಟ್ರುತ್ ಸೋಶಿಯಲ್’ ಖಾತೆಯಲ್ಲಿ ಈ ಪೋಸ್ಟ್ ಹಾಕಿದ್ದಾರೆ.

ಕೆರಳಿ ಕಂಡವಾದ ಟ್ರಂಪ್

ಮಂಗಳವಾರ ಇರಾನ್‌ನ ವಿದ್ಯುತ್ ಸ್ಥಾವರಗಳನ್ನು ಮತ್ತು ಮರುದಿನ ಸೇತುವೆಗಳನ್ನು ನಾವು ಧ್ವಂಸ ಮಾಡುತ್ತೇವೆ. ‘ಆ F***ing ಜಲಸಂಧಿಯನ್ನು ತೆರೆಯಿರಿ, ಇಲ್ಲದಿದ್ದರೆ ನೀವು ನರಕಕ್ಕೆ ಹೋಗಬೇಕಾಗುತ್ತದೆ. ಅಲ್ಲಾಹುವಿಗೆ ಸ್ತುತಿ’ ಎಂದು ಟ್ರಂಪ್ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ಅರಬ್ ರಾಷ್ಟ್ರಗಳಲ್ಲಿನ ಆರ್ಥಿಕ ಮತ್ತು ಮೂಲಸೌಕರ್ಯ ಗುರಿಗಳ ಮೇಲೆ ಇರಾನ್ ದಾಳಿ ನಡೆಸಿದ ನಂತರವೂ, ಅದು ಹಿಂದೆ ಸರಿಯುವ ಯಾವುದೇ ಲಕ್ಷಣಗಳನ್ನು ತೋರಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಟ್ರಂಪ್ ಈ ಪೋಸ್ಟ್ ಮಾಡಿದ್ದಾರೆ. ಹಾರ್ಮುಜ್ ಜಲಸಂಧಿಯ ಮೇಲೆ ಇರಾನ್ ತನ್ನ ಹಿಡಿತವನ್ನು ಮುಂದುವರಿಸಿದ್ದು, ಸೋಮವಾರದೊಳಗೆ ಅದನ್ನು ತೆರವುಗೊಳಿಸದಿದ್ದರೆ ದಾಳಿ ನಡೆಸುವುದಾಗಿ ಟ್ರಂಪ್ ಈ ಹಿಂದೆಯೂ ಬೆದರಿಕೆ ಹಾಕಿದ್ದರು.

ಇರಾನ್, ಅಮೆರಿಕದ ಯುದ್ಧ ವಿಮಾನವನ್ನು ಹೊಡೆದುರುಳಿಸಿದ ನಂತರ ನಾಪತ್ತೆಯಾಗಿದ್ದ ಅಮೆರಿಕದ ಸೈನಿಕರೊಬ್ಬರನ್ನು ಯುಎಸ್ ವಿಶೇಷ ಪಡೆಗಳು ರಕ್ಷಿಸಿವೆ. ಈ ಘೋಷಣೆ ಹೊರಬಿದ್ದ ಬೆನ್ನಲ್ಲೇ ಟ್ರಂಪ್ ಈ ನಿಂದನಾತ್ಮಕ ಪೋಸ್ಟ್ ಹಾಕಿದ್ದಾರೆ. ಶುಕ್ರವಾರ F-15E ಸ್ಟ್ರೈಕ್ ಈಗಲ್ ವಿಮಾನ ಪತನಗೊಂಡಿತ್ತು. ಬಳಿಕ ನಡೆದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಈ ವಾಯುಪಡೆಯ ಅಧಿಕಾರಿಯನ್ನು ರಕ್ಷಿಸಲಾಗಿದೆ. ಅಧಿಕಾರಿಗೆ ಗಂಭೀರ ಗಾಯಗಳಾಗಿದ್ದರೂ, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

ಟ್ರಂಪ್ ತಮ್ಮ ಟ್ರೂತ್ ಸೋಶಿಯಲ್ ಪೋಸ್ಟ್‌ನಲ್ಲಿ ಈ ಬಗ್ಗೆ ವಿವರಿಸಿದ್ದಾರೆ. ‘ಗಂಭೀರವಾಗಿ ಗಾಯಗೊಂಡಿದ್ದ ನಮ್ಮ ಧೈರ್ಯಶಾಲಿ F-15 ಸಿಬ್ಬಂದಿಯನ್ನು ಇರಾನ್‌ನ ಪರ್ವತ ಪ್ರದೇಶದ ಒಳಗಿನಿಂದ ನಾವು ರಕ್ಷಿಸಿದ್ದೇವೆ. ಆ ಸಮಯದಲ್ಲಿ ಇರಾನಿನ ಸೈನಿಕರು ವೇಗವಾಗಿ ನಮ್ಮತ್ತ ಸಮೀಪಿಸುತ್ತಿದ್ದರು. ರಕ್ಷಿಸಲ್ಪಟ್ಟ ಅಧಿಕಾರಿ ಅತ್ಯಂತ ಗೌರವಾನ್ವಿತ ಕರ್ನಲ್ ಆಗಿದ್ದಾರೆ. ಇಂತಹ ಕಾರ್ಯಾಚರಣೆಗಳು ಬಹಳ ಅಪರೂಪ’ ಎಂದು ಟ್ರಂಪ್ ಹೇಳಿದ್ದಾರೆ. ವಿಮಾನದಲ್ಲಿದ್ದ ಎರಡನೇ ಯುಎಸ್ ವಾಯುಪಡೆಯ ಅಧಿಕಾರಿಯನ್ನು ಇದಕ್ಕೂ ಮೊದಲೇ ರಕ್ಷಿಸಲಾಗಿತ್ತು. ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್, ಇರಾನ್ ವಿರುದ್ಧ ಯುದ್ಧ ಆರಂಭಿಸಿದ ನಂತರ ಇರಾನ್ ಭೂಪ್ರದೇಶದಲ್ಲಿ ಪತನಗೊಂಡ ಮೊದಲ ಅಮೆರಿಕನ್ ವಿಮಾನ ಇದಾಗಿದೆ.



Source link

Leave a Reply

Your email address will not be published. Required fields are marked *