
ಹೆಚ್ಚಿನ ಮಹಿಳೆಯರು ವೈಯಕ್ತಿಕ ಆರೋಗ್ಯ, ನೈರ್ಮಲ್ಯ ಕುರಿತು ಬಹಿರಂಗವಾಗಿ ಮಾತನಾಡುವುದಿಲ್ಲ. ವಿಶೇಷವಾಗಿ ಪೀರಿಯಡ್ಸ್ ಅಥವಾ ಮುಟ್ಟಿನ ವಿಷಯವನ್ನು ಗುಟ್ಟು ಮಾಡುವುದು ಸಹ ಇದೆ. ಆದರೆ ಇತ್ತೀಚೆಗೆ ಕಾಲ, ಸಮಯ ಎಲ್ಲ ಬದಲಾಗುತ್ತಿದೆ. ಪೀರಿಯಡ್ಸ್ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ. ಆದರೆ ಇತ್ತೀಚೆಗೆ ತುಸು ಭಿನ್ನ ಸಮಸ್ಯೆ ಎದುರಾಗಿದೆ. ಕೆಲ ಮಹಿಳೆಯರು, ಪೀರಿಯಡ್ಸ್ ತಮ್ಮ ಯಶಸ್ಸಿಗೆ ಅಡ್ಡಿ ಎಂಬಂತೆ ಬಿಂಬಿಸುವದೂ ಸಹ ಇದೆ. ಆದರೆ ನಟಿ ಶ್ರೀಲೀಲಾ, ಇಂಥಹವರಿಗೆ ತಕ್ಕ ಉತ್ತರ ಹೇಳಿದೆ.
ಇನ್ನೂ ಯುವ ನಟಿಯಾದರೂ ಸಹ ಸ್ಪಷ್ಟ ಯೋಚನೆ, ಆಲೋಚನೆಗಳನ್ನು ಹೊಂದಿರುವ ಶ್ರೀಲೀಲಾ, ಇತ್ತೀಚೆಗೆ ಮಹಿಳಾ ನೈರ್ಮಲ್ಯ ಕುರಿತಾದ ಕಾರ್ಯಕ್ರಮದ ಭಾಗಿ ಆಗಿದ್ದರು. ಮೊದಲು ಮಹಿಳೆಯರೇ ಇದ್ದ ಕಾರ್ಯಕ್ರಮದಲ್ಲಿ ಶ್ರೀಲೀಲಾಗೆ ಪೀರಿಯಡ್ಸ್ ಕುರಿತಾದ, ವಿಶೇಷವಾಗಿ ಸಿನಿಮಾಗಳ ಚಿತ್ರೀಕರಣದಲ್ಲಿ ಪೀರಿಯಡ್ಸ್ ಅಡ್ಡಿಯಾಗುವುದಿಲ್ಲವೇ? ಎಂಬ ಪ್ರಶ್ನೆ ಎದುರಾಯ್ತು. ಅದಕ್ಕೆ ಶ್ರೀಲೀಲಾ ಕೊಟ್ಟ ಉತ್ತರ ಇದೀಗ ವೈರಲ್ ಆಗುತ್ತಿದೆ.
‘ನಾನು ಹಲವಾರು ಒಳ್ಳೆಯ ಹಾಡುಗಳಲ್ಲಿ ಡ್ಯಾನ್ಸ್ ಮಾಡಿದ್ದೇನೆ. ನನ್ನ ಹಿಟ್ ಆಗಿರುವ ಡ್ಯಾನ್ಸುಗಳೆಲ್ಲ ನನ್ನ ಪೀರಿಯಡ್ಸ್ ಸಮಯದಲ್ಲಿಯೇ ಚಿತ್ರೀಕರಣಗೊಂಡವು. ಆ ಸನ್ನಿವೇಶದಲ್ಲಿ ಚಿತ್ರೀಕರಿಸಿದ ಹಾಡುಗಳಿಗೆ ನನಗೆ ಹೆಚ್ಚು ಪ್ರಶಂಸೆ ದಕ್ಕಿದೆ. ಪೀರಿಯಡ್ಸ್ ಎಂಬುದು ಒಬ್ಬ ಮಹಿಳೆಗೆ ನೆಪ ಆಗಬಾರದು. ಅದು ಸವಾಲಾಗಬೇಕು’ ನಟಿ ಶ್ರೀಲೀಲಾ.
ಇದನ್ನೂ ಓದಿ:ನಟಿ ರಮ್ಯಾ ಬಗ್ಗೆ ಪ್ರೀತಿಯಿಂದ ಮಾತನಾಡಿದ ಶ್ರೀಲೀಲಾ: ಹೇಳಿದ್ದೇನು?
ಮುಂದುವರೆದು ಮಾತನಾಡಿ, ‘ನಾವು (ಮಹಿಳೆಯರು) ಸಮಾನವಾದ ಅವಕಾಶ, ಸಮಾನವಾದ ಶಕ್ತಿ, ಸಮಾನವಾದ ಹಕ್ಕುಗಳನ್ನು ಕೇಳುತ್ತಿರುವಾಗ ನಾವು ಪೀರಿಯಡ್ಸ್ ಅನ್ನು ನೆಪವಾಗಿ ಇರಿಸಿಕೊಂಡು ಹಿಂದುಳಿಯಲು ಹೇಗೆ ಸಾಧ್ಯ? ಮಹಿಳೆಯರಾದ ನಾವು ನಮ್ಮನ್ನು ಮೀರುವ ದೈಹಿಕವಾಗಿ, ಮಾನಸಿಕ ಮಿತಿಗಳನ್ನು ಹೊಂದಿರಬೇಕು. ನಮ್ಮನ್ನು ನಾವು ಪುಶ್ ಮಾಡಿಕೊಳ್ಳಬೇಕು. ನಮಗೆ ಪೀರಿಯಡ್ಸ್ ಎಂಬುದು ನೆಪ ಆಗಬಾರದು’ ನಟಿ ಶ್ರೀಲೀಲಾ.
ನಟಿ ಶ್ರೀಲೀಲಾ, ಖುದ್ದು ವೈದ್ಯರೇ ಸಹ ಆಗಿದ್ದಾರೆ. ಇಲ್ಲವೇ ಈ ವಿಷಯಗಳ ಬಗ್ಗೆ ಅವರಿಗೆ ಸ್ಪಷ್ಟತೆ ಇದೆ. ಮಾಹಿತಿ ಇದೆ, ಹಾಗೂ ಇಂಥಹ ವಿಷಯಗಳ ಬಗ್ಗೆ ಗಟ್ಟಿಯಾಗಿ ಮಾತನಾಡುವಷ್ಟು ಧೈರ್ಯವನ್ನು ಅವರಿಗೆ ತಿಳಿದಿದೆ. ಶ್ರೀಲೀಲಾರ ಮಾತುಗಳಿಗೆ ಮೆಚ್ಚುಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ