ಇರಾನ್‌ಗೆ ಡೊನಾಲ್ಡ್ ಟ್ರಂಪ್‌ ಕಟು ಎಚ್ಚರಿಕೆ ಸಂದೇಶ: ಮಂಗಳವಾರದತ್ತ ಇಡೀ ವಿಶ್ವದ ಚಿತ್ತ

ಇರಾನ್‌ಗೆ ಡೊನಾಲ್ಡ್ ಟ್ರಂಪ್‌ ಕಟು ಎಚ್ಚರಿಕೆ ಸಂದೇಶ: ಮಂಗಳವಾರದತ್ತ ಇಡೀ ವಿಶ್ವದ ಚಿತ್ತ

ಇರಾನ್‌ಗೆ ಡೊನಾಲ್ಡ್ ಟ್ರಂಪ್‌ ಕಟು ಎಚ್ಚರಿಕೆ ಸಂದೇಶ: ಮಂಗಳವಾರದತ್ತ ಇಡೀ ವಿಶ್ವದ ಚಿತ್ತ

ವಾಷಿಂಗ್ಟನ್‌: ಹೋರ್ಮುಜ್‌ ಜಲಸಂಧಿ ತೆರೆಯಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿಧಿಸಿದ್ದ ಗಡುವು ಸೋಮವಾರ ಮುಗಿಯಲಿದೆ. ಹೀಗಾಗಿ, ‘ಜಲಸಂಧಿಯನ್ನು ಮತ್ತೆ ತೆರೆಯದಿದ್ದರೆ ಮಂಗಳವಾರ ಇರಾನ್‌ನ ನಾಗರಿಕ ಮೂಲಸೌಕರ್ಯಗಳನ್ನು ಸಂಪೂರ್ಣ ನಾಶ ಮಾಡಿ ಅವರನ್ನು ನರಕಕ್ಕೆ ಅಟ್ಟುತ್ತೇವೆ ಹಾಗೂ ಎಲ್ಲ ತೈಲಾಗಾರಗಳನ್ನು ನಮ್ಮ ವಶಕ್ಕೆ ತೆಗೆದುಕೊಳ್ಳುತ್ತೇವೆ’ ಎಂದು ಭಾನುವಾರ ಟ್ರಂಪ್‌ ಗುಡುಗಿದ್ದಾರೆ.

ಅಶ್ಲೀಲ ಪದ ಬಳಕೆ

ಈ ಸಂಬಂಧ 2 ಅಶ್ಲೀಲ ಪದ ಬಳಸಿ ತಮ್ಮ ಟ್ರುತ್‌ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ ಹಾಗೂ ಬಳಿಕ ಫಾಕ್ಸ್‌ ನ್ಯೂಸ್‌ ಜತೆ ಮಾತನಾಡಿ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.

‘ಮಂಗಳವಾರ ಇರಾನ್‌ನಲ್ಲಿ ವಿದ್ಯುತ್ ಸ್ಥಾವರ ದಿನ ಮತ್ತು ಸೇತುವೆ ದಿನ, ಎಲ್ಲವೂ ಒಂದೇ ದಿನದಲ್ಲಿ ನಡೆಯಲಿದೆ. (ಅಂದರೆ ಎಲ್ಲ ನಾಶ ಮಾಡ್ತೇವೆ ಎಂದರ್ಥ). ಏ ಹುಚ್ಚರೇ… ಫ** ಜಲಸಂಧಿಯನ್ನು ತೆರೆಯಿರಿ, ಇಲ್ಲದಿದ್ದರೆ ನೀವು ನರಕದಲ್ಲಿ ವಾಸಿಸುವಿರಿ. ನೋಡ್ತಾ ಇರಿ’ ಎಂದಿದ್ದಾರೆ ಹಾಗೂ ತಮ್ಮ ಪೋಸ್ಟ್‌ನ ಕೊನೆಯಲ್ಲಿ ಅಲ್ಲಾಹುವಿನ ಹೆಸರು ಬರೆದಿದ್ದಾರೆ. ಬಳಿಕ ಫಾಕ್ಸ್‌ ನ್ಯೂಸ್ ಜತೆ ಮಾತನಾಡಿ, ‘ಅವರು ಬೇಗನೆ ಒಪ್ಪಂದ ಮಾಡಿಕೊಳ್ಳದಿದ್ದರೆ, ಎಲ್ಲವನ್ನೂ ಸ್ಫೋಟಿಸಿ ತೈಲವನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ನಾನು ಯೋಚಿಸುತ್ತಿದ್ದೇನೆ’ ಎಂದಿದ್ದಾರೆ.

ಮತ್ತೆ ಬೆಂಕಿಯ ಮಾತುಗಳನ್ನಾಡಿದ ಟ್ರಂಪ್

ಟ್ರಂಪ್ 2 ವಾರಗಳ ಹಿಂದೆಯೇ ದಾಳಿಗಳ ಬೆದರಿಕೆ ಹಾಕಿದ್ದರು, ಆದರೆ ಜಲಮಾರ್ಗವನ್ನು ಮತ್ತೆ ತೆರೆಯಲು ಇನ್ನೊಂದು ಬಾರಿ ಗಡುವನ್ನು ವಿಸ್ತರಿಸಿ, ಇರಾನ್‌ ಜತೆ ಮಾತುಕತೆಗಳಲ್ಲಿ ಸಕಾರಾತ್ಮಕ ಚಿಹ್ನೆಗಳು ಕಂಡುಬಂದಿವೆ ಎಂದಿದ್ದರು. ಆದರೆ ಮಾತುಕತೆಗೆ ಇರಾನ್‌ ಓಗೊಡದ ಕಾರಣ ಮತ್ತೆ ಬೆಂಕಿಯ ಮಾತು ಆಡಿದ್ದಾರೆ.

Source link

Leave a Reply

Your email address will not be published. Required fields are marked *