ಕೋಲ್ಕತಾ: ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ನ್ಯಾಯಾಂಗ ಅಧಿಕಾರಿಗಳನ್ನು ಗಂಟೆಗಟ್ಟಲೆ ಘೇರಾವ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಡಳಿತಾರೂಢ ಟಿಎಂಸಿಗೆ ಭಾನುವಾರ ಚಾಟಿ ಬೀಸಿದ ಪ್ರಧಾನಿ ನರೇಂದ್ರ ಮೋದಿ, ಟಿಎಂಸಿ ಆಳ್ವಿಕೆಯಲ್ಲಿ ರಾಜ್ಯ ಮಹಾ ಜಂಗಲ್‌ರಾಜ್ ಆಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೋಚ್ ಬೆಹಾರ್ ಜಿಲ್ಲೆಯಲ್ಲಿ ಚುನಾವಣಾ ರ್‍ಯಾಲಿ ನಡೆಸಿ ಮಾತನಾಡಿದ ಅವರು, ‘ಮಾಲ್ಡಾದಲ್ಲಿ ನ್ಯಾಯಾಂಗ ಅಧಿಕಾರಿಗಳನ್ನು ಹೇಗೆ ಒತ್ತೆಯಾಳುಗಳಾಗಿ ಇರಿಸಲಾಯಿತು ಎಂಬುದನ್ನು ಇಡೀ ದೇಶವೇ ನೋಡಿದೆ. ಇಂತಹ ಸರ್ಕಾರ ಬಂಗಾಳದ ಜನರನ್ನು ಸುರಕ್ಷಿತವಾಗಿರಿಸುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ. ನ್ಯಾಯಾಂಗ ಅಧಿಕಾರಿಗಳೇ ಸುರಕ್ಷಿತವಾಗಿಲ್ಲದಿದ್ದರೆ, ಟಿಎಂಸಿ ಆಳ್ವಿಕೆಯಲ್ಲಿ ಸಾಮಾನ್ಯ ಜನರು ಸುರಕ್ಷಿತವಾಗಿರುತ್ತಾರೆ ಎಂದು ಹೇಗೆ ತಾನೇ ನಂಬಬಹುದು? ಮಾಲ್ಡಾದಲ್ಲಿ ನಡೆದದ್ದು ಟಿಎಂಸಿಯ ಮಹಾ ಜಂಗಲ್‌ರಾಜ್‌ಗೆ ಒಂದು ಉದಾಹರಣೆ’ ಎಂದು ಹರಿಹಾಯ್ದರು.

ಬಿಜೆಪಿ ಗೆದ್ರೆ ಶಬರಿಮಲೆ ಚಿನ್ನ ಕಳ್ಳರು 2 ತಿಂಗಳಲ್ಲಿ ಜೈಲಿಗೆ: ಅಮಿತ್

ಕೊಚ್ಚಿ: , ಕೇರಳದಲ್ಲಿ ಎನ್‌ಡಿಎ ಸರ್ಕಾರ ರಚಿಸಿದರೆ ಶಬರಿಮಲೆ ಚಿನ್ನ ಕಳವಿನ ಅಪರಾಧಿಗಳನ್ನು ಎರಡು ತಿಂಗಳೊಳಗೆ ಜೈಲಿಗೆ ಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದರು.

ಎರ್ನಾಕುಲಂನ ಕುನ್ನತುನಾಡು ಕ್ಷೇತ್ರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಶಾ ಮಾತನಾಡಿ ಈ ಮಾತು ಹೇಳಿದರು. ಇದೇ ವೇಳೆ, ಈಸ್ಟರ್ ಹಬ್ಬದ ಸಂದರ್ಭದಲ್ಲಿ ಕ್ರೈಸ್ತ ಸಮುದಾಯವನ್ನು ಸಂಪರ್ಕಿಸಿ ಕೇರಳದಲ್ಲಿ ಸರ್ಕಾರ ರಚಿಸಲು ಸಹಾಯ ಮಾಡುವಂತೆ ವಿನಂತಿಸಿದರು.

ಚುನಾವಣಾ ರಾಜ್ಯಗಳಲ್ಲಿ ₹650 ಕೋಟಿ ನಗದು, ವಸ್ತು ವಶ

ಚುನಾವಣೆಗೆ ಸಜ್ಜಾಗಿರುವ 4 ರಾಜ್ಯಗಳು ಮತ್ತು ಪುದುಚೇರಿಯಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 650 ಕೋಟಿ ರು. ಮೌಲ್ಯದ ನಗದು, ಮಾದಕವಸ್ತು ಮತ್ತು ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಅಂಕಿಅಂಶಗಳ ಪ್ರಕಾರ 319 ಕೋಟಿ ರು. ಮೌಲ್ಯದ ಈ ವಸ್ತುಗಳು ಪಶ್ಚಿಮ ಬಂಗಾಳವೊಂದರಲ್ಲೇ ವಶವಾಗಿವೆ. ಉಳಿದಂತೆ ತಮಿಳುನಾಡಿನಲ್ಲಿ 170 ಕೋಟಿ ರು., ಅಸ್ಸಾಂನಲ್ಲಿ 97 ಕೋಟಿ ರು., ಕೇರಳದಲ್ಲಿ 58 ಕೋಟಿ ರು., ಪುದುಚೇರಿಯಲ್ಲಿ 7 ಕೋಟಿ ರು. ಮೌಲ್ಯದ ನಗದು/ವಸ್ತುಗಳು ಸಿಕ್ಕಿವೆ.

ತಯಾರಿ ಹೇಗಿದೆ?

ಚುನಾವಣೆ ಸಯಮಯದಲ್ಲಿ ಅಕ್ರಮವಾಗಿ ಇಂತಹ ಸಾಗಾಟಗಳು ಸಾಮಾನ್ಯವಾದ ಕಾರಣ ಇದಕ್ಕೆ ಸಂಬಂಧಿಸಿದಂತೆ ದೂರು ದಾಖಲಾದ 100 ನಿಮಿಷಗಳ ಒಳಗಾಗಿ ಸ್ಥಳವನ್ನು ತಲುಪುವ ಸಲುವಾಗಿ 5,173 ಫ್ಲೈಯಿಂಗ್ ಸ್ಕ್ವಾಡ್‌ಗಳನ್ನು ರಚಿಸಲಾಗಿದೆ. ಇದರಲ್ಲಿ ಸರ್ಕಾರಿ ಅಧಿಕಾರಿಗಳು, ಪೊಲೀಸರು, ಫೋಟೋಗ್ರಾಫರ್‌ಗಳು ಇರುತ್ತಾರೆ.

Source link
ಮಮತಾ ಬ್ಯಾನರ್ಜಿ ಆಳ್ವಿಕೆಯಲ್ಲಿ ಜಡ್ಜ್‌ಗಳೂ ಸುರಕ್ಷಿತ ಅಲ್ಲ: ಪ್ರಧಾನಿ ಮೋದಿ ವಾಗ್ದಾಳಿ