“ಇದು ನಮ್ಮ ಮೈದಾನ, ನಮ್ಮ ಹವಾ!”: ಆರ್​ಸಿಬಿ ಅಭಿಮಾನಿ ಅಬ್ಬರಕ್ಕೆ ಸಿಎಸ್​​ಕೆ ಫ್ಯಾನ್ಸ್ ಗಪ್​​​​ಚುಪ್

“ಇದು ನಮ್ಮ ಮೈದಾನ, ನಮ್ಮ ಹವಾ!”: ಆರ್​ಸಿಬಿ ಅಭಿಮಾನಿ ಅಬ್ಬರಕ್ಕೆ ಸಿಎಸ್​​ಕೆ ಫ್ಯಾನ್ಸ್ ಗಪ್​​​​ಚುಪ್


ಬೆಂಗಳೂರು, ಏ. 6: ನಿನ್ನೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಪಂದ್ಯವು ಕೇವಲ ಮೈದಾನಕ್ಕಷ್ಟೇ ಸೀಮಿತವಾಗಿರಲಿಲ್ಲ, ಗ್ಯಾಲರಿಯಲ್ಲೂ ಅಭಿಮಾನಿಗಳ ನಡುವೆ ಭಾರಿ ಜಿದ್ದಾಜಿದ್ದಿಗೆ ಸಾಕ್ಷಿಯಾಯಿತು. ಪಂದ್ಯದ ವೇಳೆ ಆರ್‌ಸಿಬಿ ತಂಡವು ಭರ್ಜರಿ ಸಿಕ್ಸರ್ ಸಿಡಿಸಿದಾಗ ಕೆಂಪು ಜರ್ಸಿ ತೊಟ್ಟಿದ್ದ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಿಸಿದ ರೀತಿ ಈಗ ಯುವ ಇಂಟರ್ನೆಟ್‌ನಲ್ಲಿ ಸಖತ್ ಸೌಂಡ್ ಮಾಡುತ್ತಿದೆ. ತಮ್ಮ ಎದುರಿಗೇ ಕುಳಿತಿದ್ದ ಹಳದಿ ಜರ್ಸಿ ತೊಟ್ಟ ಸಿಎಸ್‌ಕೆ ಅಭಿಮಾನಿಗಳನ್ನು ನೋಡಿ ಆಕೆ ಬಿಂದಾಸ್ ಆಗಿ ಡ್ಯಾನ್ಸ್ ಮಾಡುವ ಮೂಲಕ ಆರ್‌ಸಿಬಿ ತಂಡದ ಪವರನ್ನು ಪ್ರದರ್ಶಿಸಿದ್ದಾರೆ. ವಿಡಿಯೋದಲ್ಲಿ ಕೇಳುವಂತೆ, ಸಿಎಸ್‌ಕೆ ಅಭಿಮಾನಿಗಳು ಮೌನವಾಗಿದ್ದರೂ, ಆರ್‌ಸಿಬಿ ಯುವತಿ ಎದೆಯುಬ್ಬಿಸಿ “ಆರ್‌ಸಿಬಿ.. ಆರ್‌ಸಿಬಿ..” ಎಂದು ಕೂಗುತ್ತಾ ಕುಣಿದಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ, ಆರ್‌ಸಿಬಿ ಅಭಿಮಾನಿಗಳು “ನಮ್ಮ ಬೆಂಗಳೂರು, ನಮ್ಮ ಹವಾ” ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದ ಗ್ಯಾಲರಿ ಇಡೀ ಕೆಂಪು ಬಣ್ಣದಿಂದ ತುಂಬಿಹೋಗಿದ್ದು, ಅಭಿಮಾನಿಗಳ ಕಿರುಚಾಟಕ್ಕೆ ಕ್ರೀಡಾಂಗಣವೇ ನಡುಗುತ್ತಿತ್ತು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *