ಖಾಸಗಿ ಅಂಗ ಜೂಮ್ ಹಾಕೋದಕ್ಕೆ ಜಾನ್ವಿ ಖಂಡನೆ; ಕನ್ನಡದ ಬಳಿಕ ಬಾಲಿವುಡ್​​ನಲ್ಲೂ ಆಂದೋಲನ

ಖಾಸಗಿ ಅಂಗ ಜೂಮ್ ಹಾಕೋದಕ್ಕೆ ಜಾನ್ವಿ ಖಂಡನೆ; ಕನ್ನಡದ ಬಳಿಕ ಬಾಲಿವುಡ್​​ನಲ್ಲೂ ಆಂದೋಲನ


ಖಾಸಗಿ ಅಂಗ ಜೂಮ್ ಹಾಕೋದಕ್ಕೆ ಜಾನ್ವಿ ಖಂಡನೆ; ಕನ್ನಡದ ಬಳಿಕ ಬಾಲಿವುಡ್‌ನಲ್ಲೂ ಆಂದೋಲನ

ನಟಿ ಸಪ್ತಮಿ ಗೌಡ ಅವರು ಇತ್ತೀಚೆಗೆ ಒಂದು ಆಂದೋಲನವನ್ನು ಪ್ರಾರಂಭಿಸಿದ್ದರು. ಪಾರಾಜಿಗಳು ಒಪ್ಪಿಗೆ ಇಲ್ಲದೆ ಬೇಕಾಬಿಟ್ಟಿ ವಿಡಿಯೋ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ವೈರಲ್ ಮಾಡಿದರು. ಇದನ್ನು ಸಪ್ತಮಿ ಗೌಡ ಅವರು ಖಂಡಿಸಿದ್ದರು. ಇದಕ್ಕೆ ಅನೇಕ ನಟಿಯರು ಬೆಂಬಲ ಸೂಚಿಸಿದ್ದರು. ಈಗ ಬಾಲಿವುಡ್ ಅಲ್ಲಿ ಇದೇ ರೀತಿ ಆಂದೋಲನ ಶುರುವಾಗುವ ಸೂಚನೆ ಸಿಕ್ಕಿದೆ.

ಕನ್ನಡಕ್ಕಿಂತ ಹಿಂದಿಯಲ್ಲಿ ಪಾಪರಾಜಿ ಸಂಸ್ಕೃತಿ ಮೊದಲು ಬಂದಿದೆ. ಅಲ್ಲಿನ ನಟಿಯರು ಅನೇಕ ಬಾರಿ ಈ ಬಗ್ಗೆ ತಕರಾರರು ತೆಗೆದಿದ್ದಾರೆ. ಈಗ ಜಾನ್ವಿ ಕಪುರ್ ಅವರು ಈ ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ. ದೇಹದ ಕೆಲವು ಭಾಗಗಳನ್ನು ಜೂಮ್ ಮಾಡೋದು ಸರಿ ಅಲ್ಲ ಎಂದು ಅವರು ನೇರವಾಗಿ ಹೇಳಿದ್ದಾರೆ.

‘ಪಾಪರಾಜಿ ಜೊತೆ ಇತ್ತೀಚೆಗೆ ನಾನು ಮಾತನಾಡಿದೆ. ನಾವು ಒಂದು ನಿರ್ದಿಷ್ಟ ರೀತಿಯಲ್ಲಿ ಉಡುಗೆ ತೊಟ್ಟಿರುತ್ತೇವೆ. ಹಾಗಂದ ಮಾತ್ರಕ್ಕೆ ಅವರ ನಿರ್ದಿಷ್ಟ ದೇಹದ ಭಾಗಗಳನ್ನು ಮಾತ್ರ ಜೂಮ್ ಮಾಡಬೇಕೆಂದು ನಾವು ನಿರೀಕ್ಷಿಸುವುದಿಲ್ಲ. ಅವರು ಹಣ ಮಾಡಿಕೊಳ್ಳಲು, ವೀವ್ಸ್ ಪಡೆದುಕೊಳ್ಳಲು ಮಹಿಳೆಯ ದೇಹವನ್ನು ಮಾರಾಟ ಮಾಡುತ್ತಿದ್ದಾರೆ’ ಎಂದು ಜಾನ್ವಿ ಆಕ್ರೋಶ ವ್ಯಕ್ತಪಡಿಸಿದರು.

‘ಗ್ರಾಹಕರಂತೆ ಕಾಣುತ್ತಿಲ್ಲ, ಆದರೆ ವಿಷಯವು ದೊಡ್ಡದಾಗಿದೆ – ಇದು ಬಳಕೆಯ ಬಗ್ಗೆ. ಜಾಗತಿಕವಾಗಿ, ಮಹಿಳೆಯರನ್ನು ವಸ್ತುನಿಷ್ಠವಾಗಿ ಚಿತ್ರಿಸುವ ವಿಷಯವು ಹೆಚ್ಚು ಬಳಕೆಯಲ್ಲಿದೆ. ಅದಕ್ಕಾಗಿಯೇ ಅದು ನಿರಂತರವಾಗಿ ಪ್ರಸಾರವಾಗುತ್ತಿದೆ. ನೀವು ಗ್ಲಾಮರ್ನಲ್ಲಿ ಸಾರ್ವಜನಿಕ ವ್ಯಕ್ತಿಯಾಗಿರುವುದರಿಂದ, ಅದು ನಿಮಗೆ ಹೆಚ್ಚು ಅನುಕೂಲಕರವಾಗಿದೆ.

‘ಮಹಿಳೆಯರನ್ನು ಕೆಟ್ಟದಾಗಿ ತೋರಿಸೋದು ವಿಶ್ವ ಮಟ್ಟದಲ್ಲಿ ನಡೆಯುತ್ತಿದೆ. ಇದನ್ನು ನೋಡುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಅದು ಪ್ರಸಾರ ಆಗುತ್ತಲೇ ಇರುತ್ತದೆ. ಅದರಲ್ಲೂ ಸೆಲೆಬ್ರಿಟಿ ಆದರೆ, ಈ ರೀತಿಯ ತೊಂದರೆ ಹೆಚ್ಚು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಟ್ರೈಲರ್ ಬಿಡುಗಡೆಗೆ ಆಹ್ವಾನಿಸಿದ ಸಪ್ತಮಿ ಗೌಡ, ನೀನಾಸಂ ಸತೀಶ್

‘ನಾನು ಯಾವುದಕ್ಕೆ ಒಪ್ಪಿಗೆ ನೀಡಿದ್ದೇನೆ ಪ್ರತಿ ಹಂತದಲ್ಲೂ ನೀವು ಕೇಳಬೇಕು. ನಾನು ‘ಭೀಗಿ ಸಾದಿ’ ಎಂಬ ಹಾಡನ್ನು ಮಾಡಿದ್ದೇನೆ. ಅಲ್ಲಿ ನಾನು ಒದ್ದೆಯಾದ ಸೀರೆಯಲ್ಲಿ ಡ್ಯಾನ್ಸ್ ಮಾಡಿದ್ದೇನೆ. ಯಾರಾದರೂ ಅದನ್ನು ಆಕರ್ಷಕ ಎಂದುಕೊಂಡರೆ ನನಗೆ ತೊಂದರೆ ಇಲ್ಲ. ಆದರೆ ಸಮ್ಮತಿಯಿಲ್ಲದೆ ಯಾರನ್ನಾದರೂ ತಪ್ಪಾಗಿ ತೋರಿಸುವುದು ಸರಿ ಅಲ್ಲ’ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *