ಪತ್ನಿಯ ಕೊಲ್ಲಲು ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ಟೆಕ್ಕಿ ಪತಿ ಮುರುಗನ್ | Techie Husband Murugan Took Shooting Training To Kill His Wife

ಪತ್ನಿಯ ಕೊಲ್ಲಲು ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ಟೆಕ್ಕಿ ಪತಿ ಮುರುಗನ್ | Techie Husband Murugan Took Shooting Training To Kill His Wife



ಪತ್ನಿಯ ಕೊಲ್ಲಲು ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ಟೆಕ್ಕಿ ಪತಿ ಮುರುಗನ್ | Techie Husband Murugan Took Shooting Training To Kill His Wife

Husband shooting training to kill wife: ಬೆಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿ ಪತ್ನಿಯನ್ನು ಗುಂಡಿಕ್ಕಿ ಕೊಂದ ಪತಿ ಬಾಲಮುರುಗನ್, ಈ ಹತ್ಯೆಗಾಗಿಯೇ ವೈಟ್‌ಫೀಲ್ಡ್‌ನ ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ಎಂದು ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಪತ್ನಿಯ ಕೊಲ್ಲಲು ಶೂಟಿಂಗ್ ತರಬೇತಿ ಪಡೆದಿದ್ದ ಟೆಕ್ಕಿ:

ಬೆಂಗಳೂರು: ಬ್ಯಾಂಕ್ ಉದ್ಯೋಗಿಯಾಗಿದ್ದ ಪತ್ನಿಯನ್ನು ನಡುರಸ್ತೆಯಲ್ಲಿಯೇ ಗುಂಡಿಕ್ಕಿ ಹತ್ಯೆಗೈದಿದ್ದ ಪತಿ ಬಾಲಮುರುಗನ್, ಬೆಂಗಳೂರಿನ ವೈಟ್‌ಫೀಲ್ಡ್‌ನ ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದ ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.

ಈ ಪ್ರಕರಣದ ಸಂಬಂಧ ತನಿಖೆ ಪೂರ್ಣಗೊಳಿಸಿದ್ದ ಮಾಗಡಿ ರಸ್ತೆ ಠಾಣೆ ಪೊಲೀಸರು ಇತ್ತೀಚೆಗೆ ಕೋರ್ಟ್‌ಗೆ ಚಾರ್ಜ್‌ ಶೀಟ್ ಸಲ್ಲಿಸಿದ್ದರು. ಅದರಲ್ಲಿ ಆರೋಪಿ ಬಾಲಮುರುಗನ್ ಪತ್ನಿಯನ್ನು ಕೊಲೆ ಮಾಡುವ ಉದ್ದೇಶದಿಂದ ವೈಟ್‌ಫೀಲ್ಡ್ ನಲ್ಲಿರುವ ಶೂಟಿಂಗ್ ಅಕಾಡೆಮಿಯೊಂದರಲ್ಲಿ ಟ್ರೈನಿಂಗ್ ಪಡೆದಿದ್ದ ಎಂದು ಪೊಲೀಸರು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದ್ದು, ಅದರ ಪ್ರತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ.

ಇದನ್ನೂ ಓದಿ: ಎಲ್‌&ಟಿಯ ₹57 ಕೋಟಿ ಹಣ ಕೆ-ರೈಡ್‌ನಿಂದ ಮುಟ್ಟುಗೋಲು

ಬಾಲಮುರುಗನ್, ಇತರೆ ಆರೋಪಿಗಳಾದ ಮೌಳೀಶ್ ಕುಮಾರ್, ಪೆರಿಯಸ್ವಾಮಿ, ರಾಹುಲ್, ಹರಿ ಹಾಗೂ ಸೂರ್ಯ ಅವರೊಂದಿಗೆ ಮೆಜೆಸ್ಟಿಕ್‌ನಲ್ಲಿರುವ ಲಾಡ್ಜ್ ವೊಂದರಲ್ಲಿ ಸಭೆ ಮಾಡಿ, ಭುವನೇಶ್ವರಿ ಅವರನ್ನು ಹತ್ಯೆ ಮಾಡಲು ಒಳಸಂಚು ರೂಪಿಸಿ ಕೊಲೆ ಮಾಡಲು ಸ್ಥಳವನ್ನು ನಿಗದಿ ಮಾಡಿಕೊಂಡಿದ್ದರು. ಆರೋಪಿ ಬಾಲಮುರುಗನ್ ಬಿಹಾರಕ್ಕೆ ತೆರಳಿ 80 ಸಾವಿರ ಕೊಟ್ಟು ಎರಡು ಪಿಸ್ತೂಲ್ ಖರೀದಿ ಮಾಡಿಕೊಂಡು ಬಂದಿದ್ದ. ಆ ಎರಡು ಪಿಸ್ತೂಲ್‌ಗಳನ್ನು ತನ್ನ ಬಳಿ ಇಟ್ಟುಕೊಂಡರೆ ಅನುಮಾನ ಬರುತ್ತದೆ ಎಂದು ಅದರಲ್ಲಿ ಒಂದು ಪಿಸ್ತೂಲ್ ಅನ್ನು ಮತ್ತೊಬ್ಬ ಆರೋಪಿಗೆ ನೀಡಿದ್ದ ಆತ ಅದನ್ನು ತಮಿಳುನಾಡಿಗೆ ತೆಗೆದುಕೊಂಡು ಹೋಗಿದ್ದ ಎಂಬುದು ತನಿಖೆ ವೇಳೆ ಪತ್ತೆಯಾಗಿದೆ.

2015ರ ಡಿಸೆಂಬರ್‌ನಲ್ಲಿ ನಡೆದಿದ್ದ ಕೊಲೆ ಪ್ರಕರಣ:

ಪ್ರಕರಣದ ವಿವರ: 2025ರ ಡಿ.23ರಂದು ತನ್ನ 39 ವರ್ಷದ ಪತ್ನಿ ಭುವನೇಶ್ವರಿ ಅವರನ್ನು ಹತ್ಯೆ ಮಾಡಿದ ಆರೋಪದಡಿ ಪತಿ ತಮಿಳುನಾಡು ಮೂಲದ ಸೆಲ್ವ ಬಾಲಮುರುಗನ್, ಆತನ ಸಹಚರರಾದ ಅಭಿಮನ್ಯು ಸಿಂಗ್, ಮೌಲೇಶ್ ಕುಮಾರ್, ಪೆರಿಯಾಸ್ವಾಮಿಯನ್ನು ಬಂಧಿಸಲಾಗಿತ್ತು. ಇನ್ನು ಪ್ರಕರಣದಲ್ಲಿ ರಾಹುಲ್, ಹರೀಶ್ ಮತ್ತು ಸೂರ್ಯ ತಲೆಮರೆಸಿಕೊಂಡಿದ್ದಾರೆ. ಈ ಎಲ್ಲಾ ಆರೋಪಿಗಳ ವಿರುದ್ಧ 24ನೇ ಎಸಿಎಂಎಂ ನ್ಯಾಯಾಲಯಕ್ಕೆ 495 ಪುಟಗಳ ಚಾರ್ಜ ಶೀಟ್ ಸಲ್ಲಿಸಲಾಗಿದೆ. ಮಾಗಡಿ ಸಮೀಪ ಈ ಕೊಲೆ ನಡೆದಿತ್ತು.

ಇದನ್ನೂ ಓದಿ: 80% ಖಾಸಗಿ ಆಟೋ ಗ್ಯಾಸ್‌ ಬಂಕ್‌ಗಳು ಬಂದ್‌



Source link

Leave a Reply

Your email address will not be published. Required fields are marked *