Headlines

ಬಾರ್​​​ನಲ್ಲಿ ಕಿರಿಕ್; ನಟ ನಿರಂಜನ್​ ಮೇಲೆ ಬಿಯರ್ ಬಾಟಲ್​​ನಿಂದ ಹಲ್ಲೆ

ಬಾರ್​​​ನಲ್ಲಿ ಕಿರಿಕ್; ನಟ ನಿರಂಜನ್​ ಮೇಲೆ ಬಿಯರ್ ಬಾಟಲ್​​ನಿಂದ ಹಲ್ಲೆ


ಬಾರ್ನಲ್ಲಿ ಕಿರಿಕ್; ನಟ ನಿರಂಜನ್ ಮೇಲೆ ಬಿಯರ್ ಬಾಟಲ್ ನಿಂದ ಹಲ್ಲೆ

ಕನ್ನಡ ಚಿತ್ರರಂಗದಲ್ಲಿ ಈಗತಾನೇ ಗುರುತಿಸಿಕೊಳ್ಳುತ್ತಿರುವ ನಟ ನಿರಂಜನ್ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ಮಾಡಿದ್ದಾರೆ. ಬೆಂಗಳೂರಿನ ಬಾರ್ ಒಂದರಲ್ಲಿ ನಡೆದ ಕಿರಿಕ್ ಮಿತಿ ಮೀರಿದ್ದು, ಬಿಯರ್ ಬಾಟಲಿಯಿಂದ ನಟನ ಮೇಲೆ ಹಲ್ಲೆ ಮಾಡಲಾಗಿದೆ. ಘಟನೆ ಸಂಬಂಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಮಾರ್ಚ್ 28 ರಂದು ನಡೆದಿರುವ ಘಟನೆ ಇದಾಗಿದ್ದರೆ, ತಡವಾಗಿ ಬೆಳಕಿಗೆ ಬಂದಿದೆ.

ದರ್ಶನ್ ಅಭಿನಯದ ‘ಒಡೆಯ’ (2019) ಸಿನಿಮಾದಲ್ಲಿ ನಿರಂಜನ್ ನಟಿಸಿದ್ದರು. ಈ ಸಿನಿಮಾದಲ್ಲಿ ದರ್ಶನ್ ಸಹೋದರನ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಈ ಪಾತ್ರ ಅವರ ವೃತ್ತಿ ಜೀವನಕ್ಕೆ ಸಾಕಷ್ಟು ಮೈಲೇಜ್ ನೀಡಿತು. ಈಗ ಅವರು ವಿವಾದದ ಮೂಲಕ ಸುದ್ದಿಯಾಗಿದ್ದಾರೆ.

ಕೆಲಸದ ನಿಮಿತ್ತ ನಟ ಯಶಸ್ ಸೂರ್ಯ ನಿವಾಸಕ್ಕೆ ನಿರಂಜನ್ ತೆರಳಿದ್ದರು. ಭೇಟಿ ಬಳಿಕ ಮಂತ್ರಿ ಅಲೈಯನ್ಸ್ ಬಳಿಯ ಬಾರ್‌ಗೆ ನಿರಂಜನ್ ಬಂದಿದ್ದರು. ನೀರು ಕುಡಿಯಲೆಂದು ಬಾರ್‌ಗೆ ಬಂದಿದ್ದಾಗಿ ನಿರಂಜನ್ ಹೇಳಿದ್ದಾರೆ. ಈ ವೇಳೆ ಬಾರ್ ಅಲ್ಲಿ ಇದ್ದ ವ್ಯಕ್ತಿಯೋರ್ವ ನಿರಂಜನ್ ತಳ್ಳಿದ್ದಕ್ಕೆ ಗಲಾಟೆ ಶುರುವಾಗಿದೆ.

ಇದನ್ನೂ ಓದಿ: ಇದು ದರ್ಶನ್ ಕಥೆ ಅಲ್ಲ: ‘ಬಾಸ್’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಬಳಿಕ ನಿರ್ದೇಶಕರ ಸ್ಪಷ್ಟನೆ

ಈ ವೇಳೆ ನಿರಂಜನ್ ನಟ ಎಂಬ ವಿಷಯ ಅಪರಿಚಿತ ವ್ಯಕ್ತಿಗೆ ಗೊತ್ತಾಗಿದೆ. ‘ನೀನು ನಟನಾದರೆ ನನಗೇನು’ ಎಂದು ಅಪರಿಚಿತ ವ್ಯಕ್ತಿ ಬೈದಿದ್ದ. ಈ ವಿಷಯದ ಬಗ್ಗೆ ಬಾರ್ ಜೊತೆ ಮಾತನಾಡುವಾಗ ಬಂದ ನಾಲ್ವರು ನಿರಂಜನ್ ಜೊತೆ ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಬಿಯರ್ ಬಾಟಲಿಯಿಂದ ನಟನ ತಲೆಗೆ ಹೊಡೆದು ಹಲ್ಲೆ ಮಾಡುತ್ತಾರೆ. ಘಟನೆ ಸಂಬಂಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ.
2017ರ ‘ಜಲ್ಸಾ’ (2017) ಚಿತ್ರದ ಮೂಲಕ ನಿರಂಜನ್ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಕೆಲ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ‘ಒಡೆಯ’ ಚಿತ್ರದ ಪಾತ್ರಕ್ಕೆ ಮೆಚ್ಚುಗೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ.



Source link

Leave a Reply

Your email address will not be published. Required fields are marked *