Video: ಚಿಂತೆಯಿಲ್ಲದ ಬಾಲ್ಯ; ಅಡುಗೆಯಾಟ ಆಡಿ ಸಂಭ್ರಮಿಸಿದ ಪುಟಾಣಿಗಳು

Video: ಚಿಂತೆಯಿಲ್ಲದ ಬಾಲ್ಯ; ಅಡುಗೆಯಾಟ ಆಡಿ ಸಂಭ್ರಮಿಸಿದ ಪುಟಾಣಿಗಳು


Video: ಚಿಂತೆಯಿಲ್ಲದ ಬಾಲ್ಯ; ಅಡುಗೆಯಾಟ ಆಡಿ ಸಂಭ್ರಮಿಸಿದ ಪುಟಾಣಿಗಳು

ಈಗಿನ ಮಕ್ಕಳಿಗೆ (ಮಕ್ಕಳು) ಮೊಬೈಲ್ ಬಿಟ್ಟರೆ ಬೇರೆ ಪ್ರಪಂಚವೇ ಇಲ್ಲ ಎನ್ನುವಂತಾಗಿದೆ. ಆದರೆ ನಾವು ಸಣ್ಣವರು ಇದ್ದಾಗ ಆಡುತ್ತಿದ್ದ ಅದೆಷ್ಟೋ ಆಟಗಳ ಬಗ್ಗೆ ಈಗಿನ ಮಕ್ಕಳಿಗೆ ಗೊತ್ತೇ ಇಲ್ಲ. ಅಂದು ಶಾಲೆ ಬಿಟ್ಟ ಕೂಡಲೇ ಮನೆಗೆ ಬಂದು ನಾನಾ ರೀತಿಯ ಆಡುತ್ತಿದ್ದ ಕಾಲವೊಂದಿತ್ತು. ಸೊಪ್ಪಾಟ, ಚೊಂಕಾಟ, ಕೆರೆದಡ, ಹುಲಿದನ ಹಾಗೂ ಅಡುಗೆಯಾಟ ಹೀಗೆ ನಾನಾ ರೀತಿಯ ಆಟವಾಡಿ ಖುಷಿ ಪಡುತ್ತೇವೆ. ಹೆಣ್ಣು ಮಕ್ಕಳಿಗೆ ಅಡುಗೆಯಾಟವೇ ಮೆಚ್ಚಿನ ಆಟವಾಗಿತ್ತು. ಎಲೆ, ಸೊಪ್ಪು ಮಣ್ಣು ಹೀಗೆ ಸಿಕ್ಕ ಸಿಕ್ಕ ವಸ್ತುಗಳನ್ನು ಬಳಸಿ ಅಡುಗೆ ಮನೆ ಮಂದಿಯಂತೆ ಕುಳಿತು ಊಟ ಸವಿದು ಸಂಭ್ರಮಿಸುತ್ತಿದ್ದರು. ಇದೀಗ ಈ ವಿಡಿಯೋ ನೋಡಿದ್ರೆ ನಿಮಗೆ ಖಂಡಿತ ನಿಮ್ಮ ಬಾಲ್ಯ ನೆನಪಾಗುತ್ತದೆ. ಪುಟಾಣಿಗಳೆಲ್ಲಾ ಜೊತೆ ಸೇರಿ ಅಡುಗೆ ಆಟ ಆಡುವ ವಿಡಿಯೋ ವೈರಲ್ ಆಗಿದ್ದು, ಈ ದೃಶ್ಯ ನೆಟ್ಟಿಗರ ಗಮನ ಸೆಳೆದಿದೆ.

deepasakshi8217 ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಪುಟಾಣಿಗಳು ರಸ್ತೆ ಪಕ್ಕದಲ್ಲಿರುವ ಸಣ್ಣದಾದ ಜಾಗದಲ್ಲಿ ಕುಳಿತು ಅಡುಗೆ ಆಡುತ್ತಿದ್ದಾರೆ. ಸಾಲಾಗಿ ಕುಳಿತು ತಾವೇ ಮಾಡಿದ ಅಡುಗೆ ಸವಿಯುತ್ತಿದೆ, ಮನೆಯ ಮುಖ್ಯ ಗೃಹಿಣಿಯಂತಿರುವ ಪುಟ್ಟ ಹುಡುಗಿಯೂ ಎಲ್ಲರಿಗೂ ಊಟ ಬಡಿಸುವುದರಲ್ಲಿ ಬ್ಯೂಸಿಯಾಗಿರುವುದು ಕಂಡುಬಂದಿದೆ.

ವೈರಲ್ ವಿಡಿಯೋ ಇಲ್ಲಿದೆ

 

Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

 

ಕಾಲ್ ಮಿ…ಸಾಕ್ಷಿ (@deepasakshi8217) ಅವರು ಹಂಚಿಕೊಂಡ ಪೋಸ್ಟ್

ಇದನ್ನೂ ಓದಿ: ನಡುರಸ್ತೆಯಲ್ಲೇ ಕೋಪಿಸಿಕೊಂಡ ಮಗಳನ್ನು ರಮಿಸಿ ಸಮಾಧಾನ ಪಡಿಸಿದ ತಂದೆ

ಈ ಅಧಿಕ ವೀಕ್ಷಣೆಗಳನ್ನು ಸೇರಿಸಬಾರದು ಎಂದು ಹೇಳಿದ್ದು, ಒಬ್ಬ ಬಳಕೆದಾರ ಹಳೆ ದಿನಗಳು ಮತ್ತೆ ಮರಳಿ ಎಂದು ಹೇಳಿದ ವೀಡಿಯೊ, ಆ ಬಾಲ್ಯದ ದಿನಗಳಲ್ಲಿ ಸುಂದರ ಕಾಮೆಂಟ್ ಮಾಡಲಾಗಿದೆ. ಮತ್ತೊಬ್ಬರು, ಚಿಂತೆಗಳಿಲ್ಲದೇ ಸಂಭ್ರಮಿಸುತ್ತಿರುವ ಬಾಲ್ಯದ ದಿನಗಳು ಎಂದು ಹೇಳಿದರು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 





Source link

Leave a Reply

Your email address will not be published. Required fields are marked *