ಕನ್ನಡ ಸೀರಿಯಲ್ಗಳಲ್ಲಿ ಪ್ರೇಮ ನಿವೇದನೆ ಮಾಡಲು ನಾಯಕಿಯರಿಗೆ ಮದ್ಯ ಕುಡಿಸುವ ಟ್ರೆಂಡ್ ಹೆಚ್ಚಾಗುತ್ತಿದೆ. ಅಮೃತಧಾರೆ ಸೀರಿಯಲ್ನಲ್ಲಿ ಭೂಮಿಕಾಗೆ ಕುಡಿಸಿದ ಪ್ರಸಂಗವು ಇದಕ್ಕೆ ಇತ್ತೀಚಿನ ಉದಾಹರಣೆಯಾಗಿದ್ದು, ಇಂತಹ ಕಥಾಹಂದರಕ್ಕೆ ನೆಟ್ಟಿಗರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.
ಪ್ರೇಮ ನಿವೇದನೆ ಮಾಡಿಕೊಳ್ಳಲು, ನೇರಾನೇರವಾಗಿ ಹೇಳುವ ಧೈರ್ಯ ಗಂಡ-ಹೆಂಡತಿಗೇ ಇಲ್ಲ ಎನ್ನುವುದು ಬಹುತೇಕ ಸೀರಿಯಲ್ಗಳ ತಿರುಳು. ಮದುವೆಯಾದರೂ ದಾಂಪತ್ಯ ಜೀವನ ನಡೆಸದೇ ಕೊನೆಗೆ ಪ್ರೀತಿ ಆಗಿದೆ ಎಂದು ಹೇಳಲು ಇಬ್ಬರಲ್ಲಿ ಒಬ್ಬರಿಗೆ ಕುಡಿಸುವುದು ಮಾಮೂಲಾಗಿಬಿಟ್ಟಿದೆ.

ಈ ಮೊದಲು ಎಲ್ಲಾ ಭಾಷೆಗಳ ಬಹುತೇಕ ಎಲ್ಲಾ ಸೀರಿಯಲ್ಗಳಲ್ಲಿಯೂ ಅಕ್ರಮ ಸಂಬಂಧಗಳೇ ರಾರಾಜಿಸುತ್ತಿದ್ದವು. ಈಗಲೂ ಅದು ಇಲ್ಲ ಎಂದೇನಲ್ಲ. ಒಂದೇ ರೀತಿಯ ಕಥೆಗಳನ್ನೇ ತಿರುವು ಮುರುವು ಮಾಡುವುದು ಮಾಮೂಲು. ಆದರೆ ಇದೀಗ ಹೆಂಗಸರನ್ನು ಕುಡುಕನ್ನಾಗಿ ಮಾಡುವುದು ಹೆಚ್ಚಾಗ್ತಿವೆ. ಈ ಹಿಂದೆ ಅಮೃತಧಾರೆ, ಬ್ರಹ್ಮಗಂಟು ಸೇರಿದಂತೆ ವಿವಿಧ ಸೀರಿಯಲ್ಗಳಲ್ಲಿ ಇದೇ ಥಿಯರಿ ಮಾಡಲಾಗಿತ್ತು. ಇದೀಗ ಮತ್ತೊಮ್ಮೆ ಅಮೃತಧಾರೆಯಲ್ಲಿ ಪುನಃ ಭೂಮಿಕಾಗೆ ಕುಡಿಸಲಾಗಿದೆ.

ಮಲ್ಲಿ ಮತ್ತು ಸುನಿಲ್ ಹನಿಮೂನ್ಗೆ ಹೋಗಿದ್ದು, ಅದಲ್ಲಿ ಭೂಮಿಕಾ-ಗೌತಮ್ ಮತ್ತು ಆನಂದ್-ಅಪರ್ಣಾ ಜೋಡಿಯೂ ಹೋಗಿದೆ. ಆಗ ಭೂಮಿಕಾ ತಮ್ಮ ಮನಸ್ಸಿನಲ್ಲಿ ಇರೋದನ್ನೆಲ್ಲಾ ಹೇಳಿಕೊಳ್ಳಬೇಕಲ್ಲ, ಅದಕ್ಕಾಗಿ ಅವಳಿಗೆ ಆನಂದ್ ಕೂಲ್ ಡ್ರಿಂಕ್ಸ್ನಲ್ಲಿ ಮದ್ಯ ಸೇರಿಸಿ ಕೊಟ್ಟಿದ್ದಾನೆ.

ಇದರಿಂದ ಗೌತಮ್ ದಿವಾನ್ ಭೂಮಿಕಾಗೆ ಮೋಸ ಮಾಡಿದ್ದಾರೆ ಎಂದು ಹೇಳಿರೋ ಭೂಮಿಕಾ ನನಗೆ ನ್ಯಾಯ ಬೇಕು ಎಂದು ಪಟ್ಟು ಹಿಡಿದು ಕೂತಿದ್ದಾಳೆ.

ಇದು ನೋಡಲು ಮಜಾ ಎನ್ನಿಸಬಹುದು, ವೀಕ್ಷಕರು ಇದನ್ನು ತಮಾಷೆಯಾಗಿಯೂ ತೆಗೆದುಕೊಳ್ಳಬಹುದು. ಆದರೆ ಪದೇ ಪದೇ ಈ ರೀತಿ ಹೆಂಗಸರಿಗೂ ಕುಡಿಸುವುದಕ್ಕೆ ಕೆಲವು ನೆಟ್ಟಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಒಂದೇ ಸಿದ್ಧಾಂತವನ್ನು ಪದೇ ಪದೇ ತೋರಿಸಿದರೆ ಅದು ಜೋಕ್ ಎನ್ನಿಸುವುದಿಲ್ಲ. ಸೀರಿಯಲ್ ನೋಡಿ ಅದರಿಂದ ಪ್ರಭಾವಿತರಾಗುವವರು ಅದೆಷ್ಟೋ ಮಂದಿ ಇದ್ದಾರೆ. ಇಂಥ ಅಹಸ್ಯ ನಿಲ್ಲಿಸಿ ಎಂದು ಕಿಡಿ ಕಾರುತ್ತಿದ್ದಾರೆ.

Source link
Amruthadhaare: ಅಕ್ರಮ ಸಂಬಂಧ ಸಾಕು, ಹೆಂಗಸ್ರೆಲ್ಲಾ ಕುಡುಕರಾಗಿ ಎಂದು ಸಾರುತಿವೆ ಸೀರಿಯಲ್ಗಳು?