Kitchen Tips : ಬೆಳ್ಳುಳ್ಳಿ ಸಿಪ್ಪೆ ತೆಗೆಯೋದು ಕಷ್ಟ ಎನ್ನುವವರಿದ್ದಾರೆ. ಅದು ಟೈಂ ಹಾಳು ಮಾಡುತ್ತೆ, ಬೇಗ ಅಡುಗೆ ಮಾಡೋಕಾಗಲ್ಲ. ಇದೊಂದು ದೊಡ್ಡ ಟೆಕ್ಷನ್ ಎನ್ನುವವರಿಗೆ ಇಲ್ಲಿದೆ ಟಿಪ್ಸ್.

ನಿತ್ಯ ಬೆಳ್ಳುಳ್ಳಿ ಸಿಪ್ಪೆ ತೆಗೆಯೋದೇ ಒಂದು ದೊಡ್ಡ ಸವಾಲು. ಇದು ನಮ್ಮ ಅಡುಗೆ ಸ್ಪೀಡ್ ಕಡಿಮೆ ಮಾಡುತ್ತೆ. ಸಣ್ಣ ಬೆಳ್ಳುಳ್ಳಿ ಎಸಳುಗಳ ಸಿಪ್ಪೆ ತೆಗೆಯೋದು ಕಷ್ಟ ಮಾತ್ರವಲ್ಲ ತಾಳ್ಮೆ ಜೊತೆ ಸಮಯ ಹಾಳು. ಅರ್ಜೆಂಟ್ ಅಡುಗೆ ಮುಗಿಸಬೇಕು ಎಂದಾಗ ಈ ಬೆಳ್ಳುಳ್ಳಿ ಸಿಪ್ಪೆಯೇ ದೊಡ್ಡ ಸಮಸ್ಯೆ ಆಗುತ್ತೆ. ಇನ್ಮುಂದೆ ನೀವು ಬೆಳ್ಳುಳ್ಳಿ ಸಿಪ್ಪೆ ತೆಗೆಯೋದು ದೊಡ್ಡ ಕೆಲ್ಸ ಅಂದ್ಕೊಳ್ಬೇಕಾಗಿಲ್ಲ. ಕೆಲ ಸರಳ ಟಿಪ್ಸ್ ಫಾಲೋ ಮಾಡುವ ಮೂಲಕ ಸುಪ್ಪೆಯನ್ನು ಕೆಲವೇ ನಿಮಿಷದಲ್ಲಿ ತೆಗೆಯಬಹುದು.

ಒಂದೇ ಟೈಂನಲ್ಲಿ ಹೆಚ್ಚು ಬೆಳ್ಳುಳ್ಳಿ ಸಿಪ್ಪೆ ತೆಗೆಯೋಕೆ ಈ ಟ್ರಿಕ್ಸ್ ಬೆಸ್ಟ್. ಮೊದಲು, ಬೆಳ್ಳುಳ್ಳಿ ಎಸಳುಗಳನ್ನು ಬೇರ್ಪಡಿಸಿ ಮುಚ್ಚಿದ ಬಾಕ್ಸ್ ನಲ್ಲಿ ಅಥವಾ ಉಕ್ಕಿನ ಪಾತ್ರೆಯಲ್ಲಿ ಇರಿಸಿ. ನಂತ್ರ ಅದ್ರ ಕ್ಯಾಪ್ ಮುಚ್ಚಿ. ಪಾತ್ರೆಯನ್ನು 10-15 ಸೆಕೆಂಡುಗಳ ಕಾಲ ಬಲವಾಗಿ ಅಲ್ಲಾಡಿಸಿ. ಅಲುಗಾಡಿಸುವುದರಿಂದ ಬೆಳ್ಳುಳ್ಳಿ ಎಸಳುಗಳು ಪರಸ್ಪರ ಟಚ್ ಆಗಿ ಸಿಪ್ಪೆ ಸಡಿಲಗೊಳ್ಳುತ್ತದೆ. ನಂತ್ರ ಕ್ಯಾಪ್ ತೆಗೆದು ಬೆಳ್ಳುಳ್ಳಿ ಸಿಪ್ಪೆ ತೆಗೆಯಬಹುದು. ಪ್ರತಿಯೊಂದು ಬೆಳ್ಳುಳ್ಳಿ ಸಿಪ್ಪೆ ಲೂಸ್ ಆಗೋದ್ರಿಂದ ಅದನ್ನು ತೆಗೆಯೋದು ಸುಲಭ.

ನಾಲ್ಕೈದು ಬೆಳ್ಳುಳ್ಳಿ ಎಸಳಿನ ಸುಪ್ಪೆ ತೆಗೆಯಬೇಕು ಅಂದ್ರೆ ನೀವು ಈ ಟ್ರಿಕ್ಸ್ ಫಾಲೋ ಮಾಡ್ಬಹುದು. ಬೆಳ್ಳುಳ್ಳಿ ಎಸಳನ್ನು ಚಾಪಿಂಗ್ ಬೋರ್ಡ್ ಮೇಲೆ ಇಡಿ. ಚಾಕುವಿನಿಂದ ಬೆಳ್ಳುಳ್ಳಿ ಚಪ್ಪಟೆ ಬದಿಯನ್ನು ನಿಧಾನವಾಗಿ ಪ್ರೆಸ್ ಮಾಡಿ. ಒತ್ತಿದ ತಕ್ಷಣ ಸಿಪ್ಪೆ ಹರಿದು ಸುಲಭವಾಗಿ ಬೇರ್ಪಡುತ್ತದೆ. ಹೆಚ್ಚು ಬಲ ಹಾಕಿದ್ರೆ ಬೆಳ್ಳುಳ್ಳಿ ಪುಡಿ ಆಗ್ಬಹುದು. ಹಾಗಾಗಿ ನಿಧಾನವಾಗಿ ಪ್ರೆಸ್ ಮಾಡಿ.

ಬೆಳ್ಳುಳ್ಳಿ ಸಿಪ್ಪೆ ತೆಗೆಯೋದು ಬಹಳ ಕಷ್ಟ ಅನ್ನೋರಿಗೆ ಈ ವಿಧಾನ ಬಹಳ ಬೆಸ್ಟ್. ಬೆಳ್ಳುಳ್ಳಿ ಎಸಳುಗಳನ್ನು 5 ನಿಮಿಷಗಳ ಕಾಲ ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿ. ಇದು ಸಿಪ್ಪೆಯನ್ನು ಮೃದುಗೊಳಿಸುತ್ತದೆ. ಅದ್ರ ಸಿಪ್ಪೆ ತೆಗೆಯೋದು ಸುಲಭವಾಗುತ್ತದೆ. ಹಳೆಯ ಹಾಗೂ ಒಣಗಿದ ಬೆಳ್ಳುಳ್ಳಿಯನ್ನು ನೀವು ಈ ವಿಧಾನದಲ್ಲಿ ಬೆಳಸಬಹುದು.

ಮೈಕ್ರೋವೇವ್ ಮನೆಯಲ್ಲಿದ್ರೆ ಈ ಟ್ರಿಕ್ಸ್ ನೀವು ಫಾಲೋ ಮಾಡ್ಬಹುದು. ಬೆಳ್ಳುಳ್ಳಿ ಎಸಳುಗಳನ್ನು ಮೈಕ್ರೋವೇವ್ನಲ್ಲಿ 10-15 ಸೆಕೆಂಡುಗಳ ಕಾಲ ಬಿಸಿ ಮಾಡಿ. ಇದು ಸಿಪ್ಪೆಯನ್ನು ಸಡಿಲಗೊಳಿಸುತ್ತೆ. ನಂತ್ರ ನಿಮಗೆ ಸಿಪ್ಪೆ ತೆಗೆಯೋದು ಸುಲಭ. ತುಂಬಾ ಟೈಂ ನೀವು ಬೆಳ್ಳುಳ್ಳಿಯನ್ನು ವೈಕ್ರೋವೇವ್ ನಲ್ಲಿ ಬೇಯಿಸಬೇಡಿ. ಇದ್ರಿಂದ ಬೆಳ್ಳುಳ್ಳಿ ಬೆಂದು ವಾಸನೆ ಹೋಗ್ಬಹುದು.

Source link
ಬೆಳ್ಳುಳ್ಳಿ ಸಿಪ್ಪೆ ತೆಗೆಯೋದು ಕಷ್ಟ ಅಲ್ವೇ ಅಲ್ಲ, ಅರೆ ಕ್ಷಣದಲ್ಲಿ ಮುಗಿಯುತ್ತೆ ಕೆಲ್ಸ