ಈ ಎಣ್ಣೆ ಹಚ್ಚಿ.. 129 ದಿನದಲ್ಲಿ 4 ಇಂಚು ಉದ್ದದ ಕಪ್ಪಾದ ಕೂದಲು ಬೆಳೆಯುತ್ತೆ; ರುಚಿ ಶೇರ್ ಮಾಡಿದ ಸೀಕ್ರೆಟ್ ಇಲ್ಲಿದೆ | Grow 4 Inches Of Hair In 129 Days The Secret Oil Of Kanpurs Rapunze

ಈ ಎಣ್ಣೆ ಹಚ್ಚಿ.. 129 ದಿನದಲ್ಲಿ 4 ಇಂಚು ಉದ್ದದ ಕಪ್ಪಾದ ಕೂದಲು ಬೆಳೆಯುತ್ತೆ; ರುಚಿ ಶೇರ್ ಮಾಡಿದ ಸೀಕ್ರೆಟ್ ಇಲ್ಲಿದೆ | Grow 4 Inches Of Hair In 129 Days The Secret Oil Of Kanpurs Rapunze



ಈ ಎಣ್ಣೆ ಹಚ್ಚಿ.. 129 ದಿನದಲ್ಲಿ 4 ಇಂಚು ಉದ್ದದ ಕಪ್ಪಾದ ಕೂದಲು ಬೆಳೆಯುತ್ತೆ; ರುಚಿ ಶೇರ್ ಮಾಡಿದ ಸೀಕ್ರೆಟ್ ಇಲ್ಲಿದೆ | Grow 4 Inches Of Hair In 129 Days The Secret Oil Of Kanpurs Rapunze

Fast Hair Growth Tips: ಕಾನ್ಪುರದ ‘ರೂಪಾಂಜೆಲ್’ ಖ್ಯಾತಿಯ ರುಚಿ ಅವರ ಉದ್ದನೆಯ ಕೂದಲಿನ ರಹಸ್ಯ ಈಗ ಬಯಲಾಗಿದೆ! ಕೇವಲ 129 ದಿನಗಳ ಕಾಲ ವಾರಕ್ಕೊಮ್ಮೆ ಈ ನೈಸರ್ಗಿಕ ಎಣ್ಣೆಯನ್ನು ಬಳಸುವುದರಿಂದ ಅವರ ಕೂದಲು 4 ಇಂಚುಗಳಷ್ಟು ಉದ್ದವಾಗಿ ಬೆಳೆದಿದೆ. ಆ ಮ್ಯಾಜಿಕ್ ಎಣ್ಣೆ ಮತ್ತು ಶಾಂಪೂ ತಯಾರಿಸುವ ಸರಳ ವಿಧಾನ ಇಲ್ಲಿದೆ.

ಪ್ರತಿಯೊಬ್ಬ ಹೆಣ್ಮಕ್ಕಳಿಗೂ ಮಂಡಿವರೆಗೆ ಬೆಳೆಯುವ, ದಟ್ಟವಾದ ಮತ್ತು ಕಪ್ಪಾದ ಕೂದಲು ಹೊಂದಬೇಕೆಂಬ ಕನಸಿರುತ್ತದೆ. ಆದರೆ ಇಂದಿನ ಮಾಲಿನ್ಯ ಮತ್ತು ಕೆಮಿಕಲ್ ಯುಗದಲ್ಲಿ ಕೂದಲು ಉದುರುವುದು ಹಾಗೂ ಚಿಕ್ಕ ವಯಸ್ಸಿನಲ್ಲೇ ಬಿಳಿಯಾಗುವುದು ದೊಡ್ಡ ಸಮಸ್ಯೆಯಾಗಿದೆ. ಇಂತಹ ಸಮಯದಲ್ಲಿ ಕಾನ್ಪುರದ ಗುಜೈನಿ ನಿವಾಸಿ ರುಚಿ (ರೂಪಾಂಜೆಲ್) ಅವರ ಕೂದಲು ಎಲ್ಲರನ್ನೂ ಬೆರಗಾಗಿಸುವಂತಿದೆ. ಅವರ ಕೂದಲು ಕೇವಲ ಮಂಡಿವರೆಗಲ್ಲ, ಬದಲಿಗೆ ನೆಲವನ್ನೇ ಮುಟ್ಟುತ್ತದೆ! ಕಳೆದ 15 ವರ್ಷಗಳಿಂದ ಅವರು ತಮ್ಮ ಕೂದಲನ್ನು ಅತ್ಯಂತ ಆರೋಗ್ಯಕರವಾಗಿ ಮತ್ತು ದಟ್ಟವಾಗಿ ಕಾಪಾಡಿಕೊಂಡಿದ್ದಾರೆ. ಅವರ ಈ ಉದ್ದನೆಯ ಕೂದಲಿನ ಗುಟ್ಟು ಮತ್ತು ಅವರು ಬಳಸುವ ವಿಶೇಷ ಎಣ್ಣೆ ಹಾಗೂ ಶಾಂಪೂ ತಯಾರಿಸುವ ಸಂಪೂರ್ಣ ವಿಧಾನ ಇಲ್ಲಿದೆ.

ಮನೆಯಲ್ಲೇ ತಯಾರಿಸಿದ ವಿಶೇಷ ಎಣ್ಣೆ (Home-made Hair Oil)

ರುಚಿ ಅವರು ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಸುವಾಸಿತ ಅಥವಾ ಕೆಮಿಕಲ್ ಮಿಶ್ರಿತ ಎಣ್ಣೆಯನ್ನು ಬಳಸುವುದಿಲ್ಲ. ಬದಲಿಗೆ ಅತ್ಯಂತ ಸರಳವಾಗಿ ಮನೆಯಲ್ಲೇ ಎಣ್ಣೆ ತಯಾರಿಸುತ್ತಾರೆ.
ಎಣ್ಣೆ ತಯಾರಿಸಲು ಅಗತ್ಯವಿರುವ ಪದಾರ್ಥಗಳು
ಶುದ್ಧ ಸಾಸಿವೆ ಎಣ್ಣೆ(ಸುಮಾರು 1 ಕಪ್), ಮೆಂತೆ ಕಾಳು (2 ದೊಡ್ಡ ಚಮಚ) ಮತ್ತು ತಾಜಾ ಕರಿಬೇವಿನ ಎಲೆಗಳು (ಒಂದು ಹಿಡಿಯಷ್ಟು)

ತಯಾರಿಸುವ ವಿಧಾನ

ಒಂದು ಕಬ್ಬಿಣದ ಬಾಂಡ್ಲಿಯಲ್ಲಿ ಸಾಸಿವೆ ಎಣ್ಣೆಯನ್ನು ಹಾಕಿ ಅದಕ್ಕೆ ಮೆಂತೆ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ಎಲೆಗಳು ಕಪ್ಪಾಗುವವರೆಗೆ ಕಾಯಿಸಿ ನಂತರ ಆರಿಸಿ ಸೋಸಿಕೊಳ್ಳಿ.

ಬಳಕೆ
ಈ ಎಣ್ಣೆಯನ್ನು ವಾರಕ್ಕೆ ಕನಿಷ್ಠ ಎರಡು ಬಾರಿ ಕೂದಲಿನ ಬುಡಕ್ಕೆ ಹಚ್ಚಿ ಮಸಾಜ್ ಮಾಡಬೇಕು. ಈ ವಿಧಾನವನ್ನು ಸತತವಾಗಿ ಸುಮಾರು 129 ದಿನಗಳು (ಅಂದರೆ 4 ತಿಂಗಳಿಗಿಂತ ಹೆಚ್ಚು) ಬಳಸುವುದರಿಂದ ಕೂದಲಿನ ಉದ್ದ ಸುಮಾರು 4 ಇಂಚುಗಳಷ್ಟು ಹೆಚ್ಚಾಗುತ್ತದೆ. ಸಾಸಿವೆ ಎಣ್ಣೆಯು ಕೂದಲಿನ ಬುಡಕ್ಕೆ ಪೋಷಣೆ ನೀಡಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ.

ನೈಸರ್ಗಿಕ ಹರ್ಬಲ್ ಶಾಂಪೂ (Natural Shampoo)
ರಾಸಾಯನಿಕ ಯುಕ್ತ ಶಾಂಪೂಗಳ ಬದಲು ರುಚಿ ಅವರು ಪ್ರಕೃತಿ ದತ್ತವಾದ ಪದಾರ್ಥಗಳನ್ನು ಬಳಸುತ್ತಾರೆ. ಇವು ಕೂದಲಿನ ನೈಸರ್ಗಿಕ ತೈಲವನ್ನು ನಾಶಪಡಿಸುವುದಿಲ್ಲ.

ಶಾಂಪೂಗೆ ಅಗತ್ಯವಿರುವ ಪದಾರ್ಥಗಳು 
ಆಮ್ಲಾ ಪುಡಿ (2 ಚಮಚ), ಅಂಟುವಾಳದ ಪುಡಿ (4 ಚಮಚ), ಶಿಕಾಕಾಯಿ ಪುಡಿ (2 ಚಮಚ), ದಾಸವಾಳದ ಹೂವಿನ ಪುಡಿ (2 ಚಮಚ), ಮುಲ್ತಾನಿ ಮಿಟ್ಟಿ (2 ಚಮಚ), ಭೃಂಗರಾಜ ಪುಡಿ (2 ಚಮಚ) ಮತ್ತು 2-4 ಹನಿ ರೋಸ್‌ಮೆರಿ ಎಸೆನ್ಷಿಯಲ್ ಆಯಿಲ್.

ತಯಾರಿಸುವ ವಿಧಾನ
ಈ ಎಲ್ಲಾ ಪುಡಿಗಳನ್ನು ಒಂದು ಬಟ್ಟಲಿನಲ್ಲಿ ಹಾಕಿ, ಎಸೆನ್ಷಿಯಲ್ ಆಯಿಲ್ ಸೇರಿಸಿ ನೀರು ಬೆರೆಸಿ ದ್ರಾವಣದಂತೆ ಮಾಡಿಕೊಳ್ಳಿ. ಇದನ್ನು ತಲೆಗೆ ಹಚ್ಚಿ 5 ನಿಮಿಷ ಬಿಟ್ಟು ನಂತರ ತೊಳೆದರೆ, ಕೂದಲು ಒಳಗಿನಿಂದ ಸದೃಢವಾಗಿ, ಹೊರಗಿನಿಂದ ರೇಷ್ಮೆಯಂತೆ ಮೃದುವಾಗಿ ಹೊಳೆಯುತ್ತದೆ.

ವಿಶೇಷ ಟಿಪ್ಸ್
ರುಚಿ ಅವರ ಪ್ರಕಾರ, ಕೂದಲನ್ನು ತೊಳೆಯುವಾಗ ಅತಿಯಾದ ಬಿಸಿ ನೀರನ್ನು ಬಳಸಬಾರದು. ಯಾವಾಗಲೂ ಉಗುರು ಬೆಚ್ಚಗಿನ ಅಥವಾ ತಣ್ಣೀರಿನಿಂದ ಸ್ನಾನ ಮಾಡುವುದು ಕೂದಲಿನ ಆರೋಗ್ಯಕ್ಕೆ ಉತ್ತಮ.

ಗಮನಿಸಿ..
ಈ ಮನೆಮದ್ದನ್ನು ನಿಯಮಿತವಾಗಿ ಬಳಸುವುದರಿಂದ ಕೂದಲು ಉದುರುವುದು ನಿಲ್ಲುವುದಲ್ಲದೆ, ಅಕಾಲಿಕ ಬಿಳಿ ಕೂದಲಿನ ಸಮಸ್ಯೆಯೂ ದೂರವಾಗುತ್ತದೆ. ನೀವು ಕೂಡ ರಾಸಾಯನಿಕ ಮುಕ್ತ ಕೂದಲನ್ನು ಪಡೆಯಲು ಈ ನೈಸರ್ಗಿಕ ವಿಧಾನವನ್ನು ಇಂದೇ ಪ್ರಯತ್ನಿಸಿ ನೋಡಿ! ನಿಮ್ಮ ಕೂದಲು ಕೂಡ ಕೆಲವೇ ದಿನಗಳಲ್ಲಿ ಹೊಸ ಕಳೆ ಪಡೆಯುವುದು ಖಚಿತ. 



Source link

Leave a Reply

Your email address will not be published. Required fields are marked *