
ಬೆಳಗಾವಿ, ಏ.6 : ಬೆಳಗಾವಿಯ ಶಹಾಪುರ ಪೊಲೀಸ್ ಠಾಣಾ ನಿರ್ಮಾಣ ಅತ್ಯಂತ ಅಮಾನವೀಯ ವಂಚನೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪ್ರೀತಿ ಹಾಗೂ ಮದುವೆ ಹೆಸರಿನಲ್ಲಿ ಯುವತಿಯನ್ನು ನಂಬಿಸಿ, ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನಾಭರಣ ಲೂಟಿ ಮಾಡಿದ ಆರೋಪ ಕೇಳಿಬಂದಿದೆ.
ಬೆಳಗಾವಿಯ ಮಾಧವ ಕಾಲೋನಿ ನಿವಾಸಿ ಈಶ್ವರಸಿಂಗ್ ಪ್ರೇಮಸಿಂಗ್ ಬಡಗೂಜರ್ ಎಂಬಾತ ಈ ವಂಚನೆಯ ಸೂತ್ರಧಾರನೇ. ಫೇಸ್‌ಬುಕ್ ಮೂಲಕ ಯುವತಿಯ ಪರಿಚಯ ಮಾಡಿಕೊಂಡಿದ್ದ ಈತ, ಬಳಿಕ ಅದನ್ನು ಪ್ರೀತಿಗೆ ತಿರುಗಿಸಿದ್ದಾನೆ. ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸದೆ, ಯುವತಿಗೆ ತಿಳಿಯದಂತೆ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿದೆ ಯುವತಿಯಿಂದ ಭಾರಿ ಪ್ರಮಾಣದ ಹಣ ವಸೂಲಿ ಮಾಡಿದ್ದಾನೆ. ಸಂತ್ರಸ್ತೆಯ ತಾಯಿಯ ಚಿನ್ನ ಹಾಗೂ ತಂದೆಯ ಎಫ್‌ಡಿ (ಎಫ್‌ಡಿ) ಹಣವನ್ನೂ ಈತ ಲೂಟಿ ಮಾಡಿದ್ದಾನೆ. ಸುಮಾರು 150 ಗ್ರಾಂ ಚಿನ್ನಾಭರಣ ಹಾಗೂ 19 ಲಕ್ಷ ರೂಪಾಯಿಗಳನ್ನು ಗೂಗಲ್ ಪೇ ಮೂಲಕ ವರ್ಗಾಯಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಆರೋಪಿ ಯುವಕನ ತಾಯಿ “3 ಕೋಟಿ ರೂಪಾಯಿ ಕೊಟ್ಟರೆ ಮಾತ್ರ ಮದುವೆ ಮಾಡಿಕೊಳ್ಳುತ್ತೇವೆ” ಎಂದು ಡಿಮ್ಯಾಂಡ್ ಇಟ್ಟಿರುವುದು ಯುವತಿಯನ್ನು ಕಂಗಾಲಾಗುವಂತೆ ಮಾಡಿದೆ.
ಇದನ್ನೂ ಓದಿ: “ನೀವು ವೇಶ್ಯಾವಾಟಿಕೆ ನಡೆಸುತ್ತೀರಾ?”: ಮನೆಯಿಂದ ಹೊರಗೆ ಎಳೆದು ತಂದು ಮಹಿಳೆಯ ಮೇಲೆ ಅಮಾನವೀಯ ಹಲ್ಲೆ!
ಈ ಪ್ರಕರಣದಲ್ಲಿ ಶಹಾಪುರ ಪೊಲೀಸರ ನಡೆ ಸಂಶಯಾಸ್ಪದವಾಗಿದೆ ಎಂದು ಯುವತಿ ಆರೋಪಿಸಿದ್ದಾರೆ. ಬ್ಯಾಂಕ್‌ನಿಂದ ರಿಕವರಿ ಮಾಡಿದ್ದ ಚಿನ್ನವನ್ನು ಮರಳಿ ಯುವಕನಿಗೆ ಕೊಟ್ಟು ಕಳುಹಿಸಿದ್ದಾರೆ ಹಾಗೂ ಆರೋಪಿಗಳ ಜೊತೆ ಪೊಲೀಸರು ಶಾಮೀಲಾಗಿದ್ದಾರೆ ಎಂದು ಸಂತ್ರಸ್ತೆ ದೂರಿದ್ದಾರೆ. ನ್ಯಾಯಕ್ಕಾಗಿ ಇಂದು ಕಮಿಷನರ್ ಕಚೇರಿಗೆ ಆಗಮಿಸಿದ ಯುವತಿ, ಕಣ್ಣೀರು ಹಾಕುತ್ತಾ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ