ನಟಿ ರಶ್ಮಿಕಾ ಮಂದಣ್ಣ ತಮ್ಮ 30ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು, ಈ ವಿಶೇಷ ದಿನದಂದು ಅವರ ಮುಂಬರುವ ‘ರಣಬಾಲಿ’ ಚಿತ್ರದ ಪಾತ್ರವನ್ನು ಪರಿಚಯಿಸಲಾಗಿದೆ. ವಿಜಯ್ ದೇವರಕೊಂಡ ಅವರು ‘ಜಯಮ್ಮ’ ಎಂದು ಕರೆಯುವ ಮೂಲಕ ಶುಭಕೋರಿದ್ದು, 19ನೇ ಶತಮಾನದ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ರಶ್ಮಿಕಾ ವೀರ ನಾರಿಯ ಡಿ-ಗ್ಲಾಮರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಮೊನ್ನೆ ಮೊನ್ನೆಯಷ್ಟೇ ವಿಜಯ್ ದೇವರಕೊಂಡ ಜೊತೆಗಿನ ಫೋಟೋ ಹಾಕಿ ನಾವು ಈಗ ಮೂರು ಜನ ಎಂದು ಪೋಸ್ಟ್ ಮಾಡಿದ್ರು. ಈ ಪೋಸ್ಟ್‌ಗೆ ಉತ್ತರ ಹುಡುಕುವಷ್ಟರಲ್ಲಿ ಗೀತಾ ಗೋವಿಂದನ ಫ್ಯಾನ್ಸ್ ಸುತ್ತಾಗಿದ್ರು. ಯಾರಿಗೆ ಯಾವ ಉತ್ತರ ಸಿಕ್ಕಿದೆಯೋ ಗೊತ್ತಿಲ್ಲ. ಅಷ್ಟರಲ್ಲಾಗ್ಲೆ ರಶ್ಮಿಕಾ ಹುಟ್ಟುಹಬ್ಬ ಬಂದುಬಿಟ್ಟಿದೆ. ವಿಜಯ್ ಬೇರೆ ರಶ್ಮಿಕಾಗೆ ಜಯಮ್ಮಾ ಅಂತ ಕರೆದುಬಿಟ್ಟಿದ್ದಾರೆ. ಹಾಗಾದ್ರೆ ರಶ್ಮಿಕಾ ಈಗ ಜಯಮ್ಮ ಆಗಿದ್ದು ಯಾಕೆ? ನೋಡೋಣ ಬನ್ನಿ.
30ರ ಹರೆಯದ ಖುಷಿಯಲ್ಲಿ ಶ್ರೀವಲ್ಲಿ ರಶ್ಮಿಕಾ ಮಂದಣ್ಣ.!
ರಶ್ಮಿಕಾ ಮಂದಣ್ಣ. ಸದ್ಯ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಫ್ಯಾನ್ಸ್ ಫಾಲೋಯಿಂಗ್ ಇರೋ ನಟಿ. ಸೂಪರ್ ಸ್ಟಾರ್ ನಟರ ಎದುರು ಸೂಪರ್ ಸ್ಟಾರ್ ನಟಿಯಾಗಿ, ಅವರಷ್ಟೇ ಸಂಭಾವನೆ ಪಡೆದ ಹೆಗ್ಗಳಿಕೆ ಶ್ರೀವಲ್ಲಿಯದ್ದು, ಈಗ ವಿಜಯ್ ದೇವರಕೊಂಡ ರನ್ನ ಕೈ ಹಿಡಿದು ಶ್ರೀಮತಿ ಆಗಿರೋ ರಶ್ಮಿಕಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ರಶ್ಮಿಕಾ ಈಗ 30ನೇ ವರ್ಷದ ಜನ್ಮದಿನ ಆಚರಿಸಿಕೊಂಡಿದ್ದಾರೆ.
ಯೆಸ್, ತನ್ನ 19ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ನೋಡ ನೋಡುತ್ತಿದ್ದಂತೆ ಸೂಪರ್ ಸ್ಟಾರ್ ನಟಿಯಾಗಿ ಬೆಳೆದು ನಿಂತಿದ್ದಾರೆ. ರಶ್ಮಿಕಾಗೆ ಗುಡಿ ಕಟ್ಟಿ ಆರಾಧಿಸೋ ಅದೆಷ್ಟೋ ಅಭಿಮಾನದ ಹೃದಯಗಳಿವೆ. ಇಂತಹ ಫ್ಯಾನ್ಸ್‌ಗೆ ಶ್ರೀವಲ್ಲಿ ಹುಟ್ಟುಹಬ್ಬ ತುಂಬಾನೆ ಸ್ಪೆಷಲ್. ಹೀಗಾಗೆ ವಿಜಯ್ ಪತ್ನಿ ಜನ್ಮದಿನದಕ್ಕೊಂದು ಸೂಪರ್ ಸರ್ಪ್ರೈಸ್ ಕೂಡ ಬಂದಿದೆ. ಅದೇ ರಶ್ಮಿಕಾ ಜಯಮ್ಮನ ಅವತಾರ.
ನ್ಯಾಷನಲ್ ಕ್ರಶ್‌ಗೆ ಪತಿ ವಿಜಯ್ ದೇವರಕೊಂಡ ಪ್ರೀತಿಯ ಶುಭಾಶಯ
ರಶ್ಮಿಕಾ ಮಂದಣ್ಣ ಮದುವೆ ಆಗಿ ಇನ್ನೂ ಒಂದೂವರೆ ತಿಂಗಳು ಕಳೆದಿಲ್ಲ. ಹಸಿ ಮೈ ಮದುಮಗಳು ರಶ್ಮಿಕಾ ಆದಾಗ್ಲೆ ರಣಬಾಲಿ ಶೂಟಿಂಗ್‌ಗೆ ಬಂದಿದ್ದಾರೆ. ರಶ್ಮಿಕಾ ವಿಜಯ್ ಕಾಂಬಿನೇಷನ್ನ ಈ ಸಿನಿಮಾ ಚಿತ್ರೀಕರಣಕ್ಕೆ ಒಟ್ಟಿಗೆ ಬಂದಾಗ ರಶ್ಮಿಕಾ ವಿಜಯ್‌ರನ್ನ ಆರತಿ ಎತ್ತಿ ಸ್ವಾಗತಿಸಿತ್ತು ಚಿತ್ರತಂಡ. ಈಗ ಶ್ರೀವಲ್ಲಿ ಹುಟ್ಟುಹಬ್ಬ ಆಗಿದ್ರಿಂದ ರಣಬಾಲಿಯಲ್ಲಿ ರಶ್ಮಿಕಾ ಪಾತ್ರದ ಟೀಸರ್ ಅನ್ನ ರಿಲೀಸ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ರಶ್ಮಿಕಾ ಜಯಮ್ಮ ಅನ್ನೋ ರೋಲ್ ಮಾಡಿದ್ದಾರೆ. ವಿಜಯ್ ದೇವರಕೊಂಡ ತನ್ನ ಪತ್ನಿಗೆ ಜಯಮ್ಮ ಎಂದು ಕೆರೆದಿದ್ದಾರೆ.
19ನೇ ಶತಮಾನದಲ್ಲಿ ಬ್ರಿಟೀಷ್ ಆಡಳಿತದ ಸಮಯದಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾ ರಣಬಾಲಿ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣನ ರೋಲ್ ಭಾರಿ ಕುತೂಹಲ ಮೂಡಿಸಿದೆ. ವಿಜಯ್ ದೇವರಕೊಂಡ ಸ್ವತಂತ್ರ್ಯ ಹೋರಾಟಗಾರನ ರೋಲ್ ಮಾಡಿದ್ರೆ, ವಿಜಯ್ ಪತ್ನಿಯ ಪಾತ್ರದಲ್ಲಿ ರಶ್ಮಿಕಾ ಮಿಂಚಿದ್ದಾರೆ. ಈ ಜಯಮ್ಮನ ಪಾತ್ರಕ್ಕೆ ರಶ್ಮಿಗೆ ಹೇಗೆ ಪರಕಾಯ ಪ್ರವೇಶ ಮಾಡಿದ್ರು ಅನ್ನೋ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿದ್ದಾರೆ.
ರಾಹುಲ್ ಸಂಕೃತ್ಯಾನ್ ನಿರ್ದೇಶನದ ರಣಬಾಲಿ ಬೇಲೆ ಭಾರಿ ನಿರೀಕ್ಷೆ ಇದೆ. ಯಾಕಂದ್ರೆ ಪುಷ್ಪ ಸಿನಿಮಾದ ಹಾಗೆ ಶ್ರೀವಲ್ಲಿ ಪಾತ್ರ ಇಂಟ್ರೆಸ್ಟಿಂಗ್ ಆಗಿದೆ. ಪುಷ್ಪ ಬಳಿಕ ರಶ್ಮಿಕಾ ಮತ್ತೆ ಡಿ ಗ್ಲಾಮರ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿರೋ ಸಿನಿಮಾ ಇದು. ವೀರ ನಾರಿಯಾಗಿ ನಟಿಸಿರೋ ರಶ್ಮಿಕಾಗು ಇದು ಗೆಲ್ಲಲೇ ಬೇಕಾದ ಸಿನಿಮಾ. ಯಾಕಂದ್ರೆ ವಿಜಯ್ ದೇವರಕೊಂಡ ಆದಾಗ್ಲೆ ಸತತ ಸೋಲುಗಳಿಂದ ಗಲುವು ಹುಡುಕುತ್ತಿದ್ದಾರೆ. ಹೀಗಾಗಿ ಈ ರಣಬಾಲಿ ಈ ತಾರಾ ದಂಪತಿಗೆ ಸಕ್ಸಸ್ ತಂದುಕೊಡುತ್ತಾ ಕಾದು ನೋಡಬೇಕು..
ವಿಜಯ್ ಪಟೆದಾರ್, ಏಷ್ಯಾನೆಟ್ ಸುವರ್ಣ ನ್ಯೂಸ್