Headlines

ಭಾರತದಲ್ಲಿ ವಿಶ್ವದ ಮೊದಲ ‘ಪ್ರೋಟಿನ್ ಕಾಂಡೋಮ್’ ಬಿಡುಗಡೆ; ಮಾರುಕಟ್ಟೆಯಲ್ಲಿ ಸಂಚಲನ | World S First Beast Life S Protein Condom Launched In India Creates A Stir In The Market Mrq

ಭಾರತದಲ್ಲಿ ವಿಶ್ವದ ಮೊದಲ ‘ಪ್ರೋಟಿನ್ ಕಾಂಡೋಮ್’ ಬಿಡುಗಡೆ; ಮಾರುಕಟ್ಟೆಯಲ್ಲಿ ಸಂಚಲನ | World S First Beast Life S Protein Condom Launched In India Creates A Stir In The Market Mrq



ಭಾರತದಲ್ಲಿ ವಿಶ್ವದ ಮೊದಲ ‘ಪ್ರೋಟಿನ್ ಕಾಂಡೋಮ್’ ಬಿಡುಗಡೆ; ಮಾರುಕಟ್ಟೆಯಲ್ಲಿ ಸಂಚಲನ | World S First Beast Life S Protein Condom Launched In India Creates A Stir In The Market Mrq

ಭಾರತದ ಬೀಸ್ಟ್‌ಲೈಫ್ ಕಂಪನಿಯು ವಿಶ್ವದ ಮೊದಲ ಪ್ರೋಟೀನ್ ಕಾಂಡೋಮ್ ಬಿಡುಗಡೆ ಮಾಡಿದೆ ಎಂದು ಹೇಳಿಕೊಂಡಿದೆ. ಅಲರ್ಜೆನಿನ್‌ ಎಂಬ ಅಮೈನೋ ಆಸಿಡ್ ಅನ್ನು ಒಳಗೊಂಡಿದೆ ಎನ್ನಲಾದ ಈ ಉತ್ಪನ್ನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.

ನವದೆಹಲಿ: ಭಾರತದ ಕಂಪನಿಯೊಂದು ಕಾಂಡೋಮ್ ಮಾರುಕಟ್ಟೆಯಲ್ಲಿ ಸಂಚಲನವನ್ನು ಸೃಷ್ಟಿಸಿದೆ. Beast Life ಕಂಪನಿ ತನ್ನನ್ನು ವಿಶ್ವದ ಮೊದಲ ಪ್ರೋಟೀನ್ ಕಾಂಡೋಮ್ ಉತ್ಪಾದಕ ಎಂದು ಹೇಳಿಕೊಂಡಿದೆ. ಈ ಹೇಳಿಕೆಯನ್ನು ಇನ್‌ಸ್ಟಾಗ್ರಾಂನಲ್ಲಿ ತಮಾಷೆಯ ಟ್ಯಾಗ್‌ಲೈನ್ ಜೊತೆ ಶೇರ್ ಮಾಡಿಕೊಳ್ಳಲಾಗಿದೆ. ನಿಮ್ಮ ರಾತ್ರಿಯ ಆಟವನ್ನು ಅಪ್‌ಗ್ರೇಡ್ ಮಾಡಲು ನಾವು ಬರುತ್ತಿದ್ದೇವೆ ಎಂದು ಕಂಪನಿ ಹೇಳಿಕೊಂಡಿದೆ. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ವೈರಲ್ ಆಗುತ್ತಿದ್ದು, ಜನರು ತರೇಹವಾರಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ಕಾಂಡೋಮ್ ಬಗ್ಗೆ ಬೀಸ್ಟ್‌ಲೈಫ್ ಹೇಳಿದ್ದೇನು? ಇದಕ್ಕೆ ಪ್ರೋಟೀನ್ ಕಾಂಡೋಮ್ ಅಂತ ಕರೆದಿದ್ಯಾಕೆ ಎಂಬುದನ್ನು ನೋಡೋಣ ಬನ್ನಿ.

ಒಂದೇ ಮಾಹಿತಿ ನೀಡಿರುವ ಬೀಸ್ಟ್‌ಲೈಫ್

ವೈರಲ್ ಆಗಿರುವ ಜಾಹೀರಾತಿನಲ್ಲಿ ಒಂದೇ ಒಂದು ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ. ಇದನ್ನು ಅಲರ್ಜೆನಿನ್‌ ಎಂದು ಕರೆದಿದ್ದು, ಇದು ದೇಹದೊಳಗೆ ಪ್ರವೇಶಿಸುತ್ತಿದ್ದಂತೆ ರಕ್ತದ ಚಲನೆಯನ್ನು ಸುಧಾರಿಸುವ ಕೆಲಸವನ್ನು ಮಾಡುತ್ತದೆ. ಇದರು ಜೊತೆಗೆ ರಕ್ತನಾಳಗಳ ಆರೋಗ್ಯ ಸುಧಾರಿಸುತ್ತದೆ. ಅಲರ್ಜೆನಿನ್‌ ಅನ್ನೋದು ಒಂದು ರೀತಿಯ ಅಮಿನೋ ಆಸಿಡ್. ಹಾಗಾಗಿ ಇದನ್ನು ಪ್ರಿ ವರ್ಕೌಟ್‌ನ ಸಪ್ಲಿಮೆಂಟ್ಸ್‌ನಲ್ಲಿ ಬಳಕೆ ಮಾಡಬಹುದಾಗಿದೆ.

ಪ್ರೋಟೀನ್ ಕಾಂಡೋಮ್ ಎಂಬ ಹೆಸರು ಕೇಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಜನರು ಟ್ರೋಲ್ ಮಾಡಲಾರಂಭಿಸಿದ್ದಾರೆ. ಬೀಸ್ಟ್‌ಲೈಫ್ ಪೋಸ್ಟ್‌ಗೆ ಕಮೆಂಟ್ ಮಾಡಿರುವ ನೆಟ್ಟಿಗರು, ಇದು ಐಸೋಲೇಟ್ ಅಥವಾ ನಾರ್ಮಲ್ ಆಗಿದೆಯಾ? ಮೊದಲ ಬಾರಿಗೆ ಪ್ರೋಟೀನ್ ಕಾಂಡೋಮ್ ಎಂಬ ಹೆಸರು ಕೇಳುತ್ತಿದ್ದೇವೆ. ಇದನ್ನು ಹೇಗೆ ಬಳಕೆ ಮಾಡೋದು? ಇದು ಆ ಸಮಸ್ಯೆಗಳನ್ನು ದೂರ ಮಾಡುತ್ತಾ? ಯಾರಿಗಾಗಿ ಈ ಉತ್ಪನ್ನ ಎಂದು ಪ್ರಶ್ನೆ ಮಾಡಿದ್ದಾರೆ.

ಈ ಎಲ್ಲಾ ಕಮೆಂಟ್‌ಗಳ ನಡುವೆ ಕೆಲವರು ಇದು ಏಪ್ರಿಲ್ ತಿಂಗಳು ಆಗಿದ್ರಿಂದ ನಮ್ಮನ್ನು ಫೂಲ್ ಮಾಡಲು ಪ್ರಯತ್ನಿಸುತ್ತಿದ್ದೀರಾ? ನಿಮ್ಮ ಮಾತುಗಳನ್ನು ನಂಬಲು ನಾವು ಮೂರ್ಖರಲ್ಲ. ಸರಿಯಾಗಿ ಯೋಚಿಸಿ ಏಪ್ರಿಲ್ ಫೂಲ್ ಮಾಡಿ. ಪ್ರಚಾರಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ಸಿಗುವ ಲೈಕ್ಸ್, ಫಾಲೋವರ್ಸ್‌ಗಾಗಿ ಸುಳ್ಳು ವದಂತಿ ಹರಡಬೇಡಿ. ಇದು ಸಂಪೂರ್ಣವಾಗಿ ಏಪ್ರಿಲ್ ಫೂಲ್ ಮಾಡುವ ಪ್ಲಾನ್ ಆಗಿದೆ ಎಂದು ಬಳಕೆದಾರರು ಅನುಮಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಯುದ್ಧ ಭೂಮಿಯಲ್ಲಿ ಕಾಂಡೋಮ್; ಎಲ್ಲೇ ವಾರ್ ಶುರುವಾದ್ರೂ ಹೆಚ್ಚಾಗೋದ್ಯಾಕೆ ಬೇಡಿಕೆ?

ಪ್ರೋಟೀನ್ ಕಾಂಡೋಮ್ ಬಗ್ಗೆ ಜನರು ತೀವ್ರವಾಗಿ ಅನುಮಾನ ವ್ಯಕ್ತಪಡಿಸುತ್ತಿದ್ರೂ ಬೀಸ್ಟ್‌ಲೈಫ್ ಮಾತ್ರ ಯಾವುದೇ ಸ್ಪಷ್ಟನೆಯನ್ನು ನೀಡಿಲ್ಲ. ಈ ಉತ್ಪನ್ನದ ಸತ್ಯಾಸತ್ಯತೆಯನ್ನು ದೃಢಪಡಿಸಿಲ್ಲ ಅಥವಾ ನಿರಾಕರಿಸಿಲ್ಲ. ಬೀಸ್ಟ್‌ಲೈಫ್ ಕಂಪನಿಯ ಈ ಮೌನವು ಜನರಲ್ಲಿನ ಹಿತಾಸಕ್ತಿ ಮತ್ತು ಊಹಾಪೋಹಗಳಿಗೆ ಉತ್ತೇಜನ ನೀಡುತ್ತಿದೆ. ಹಾಗೆಯೇ ಈ ಪೋಸ್ಟ್‌ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮುಂದುವರಿದಿದೆ. ಮೂರು ಪ್ಯಾಕ್‌ನ ಪ್ರೋಟೀನ್ ಕಾಂಡೋಮ್‌ಗೆ 169 ರೂಪಾಯಿ ಎಂದು ಹೇಳಿದೆ. ಹಾಗೇ ಇದನ್ನು ಎಲ್ಲಿ ಖರೀದಿ ಮಾಡಬೇಕು ಎಂಬುದರ ಲಿಂಕ್ ಸಹ ಶೇರ್ ಮಾಡಿಕೊಳ್ಳಲಾಗಿದೆ.

ಕಾಂಡೋಮ್ ಮಾರುಕಟ್ಟೆಯಲ್ಲಿ ವಿಚಿತ್ರವಾದ ಜಾಹೀರಾತುಗಳು ವೈರಲ್ ಆಗುತ್ತಿರುತ್ತವೆ. ಕೆಲ ಕಾಂಡೋಮ್ ಕಂಪನಿಗಳು ಸದ್ಯದ ಪರಿಸ್ಥಿತಿಯನ್ನು ಬಳಸಿಕೊಂಡು ಕ್ರಿಯೇಟಿವ್‌ ಪೋಸ್ಟ್ ಮಾಡಿಕೊಳ್ಳುತ್ತಿರುತ್ತವೆ. 2024ರಲ್ಲಿ ಜರ್ಮನಿಯ Billy Boy ಹೆಸರಿನ ಕಂಪನಿಯೊಂದು Camdom ಎಂಬ ಡಿಜಿಟಲ್ ಸಾಧನವನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಉತ್ಪನ್ನವೂ ಮಾರುಕಟ್ಟೆಯಲ್ಲಿ ಸಂಚಲನವನ್ನು ಸೃಷ್ಟಿಸಿತ್ತು. ಇದು ಅನುಮತಿಯಿಲ್ಲದೇ ರೆಕಾರ್ಡಿಂಗ್ ತಡೆಯಲಿದೆ ಎಂದು ಕಂಪನಿ ಹೇಳಿಕೊಂಡಿತ್ತು.

ಇದನ್ನು ಓದಿ: ಭಾರತೀಯರ ಬೆಡ್ ರೂಂಗೆ ತಟ್ಟಿದ ಇರಾನ್ ಯುದ್ಧ ಬಿಸಿ, ಕಾಂಡೋಮ್ ಕೊರತೆಗೆ ಕಂಗಾಲು



Source link

Leave a Reply

Your email address will not be published. Required fields are marked *