Amrthadhaare ಜೈ ಜೊತೆ ಮದ್ವೆ ಖುಷಿಯ ನಡುವೆಯೇ ಲೈವ್​ನಲ್ಲಿ ದುಃಖ ತೋಡಿಕೊಂಡ ನಟಿ ರಾಧಾ ಭಗವತಿ

Amrthadhaare ಜೈ ಜೊತೆ ಮದ್ವೆ ಖುಷಿಯ ನಡುವೆಯೇ ಲೈವ್​ನಲ್ಲಿ ದುಃಖ ತೋಡಿಕೊಂಡ ನಟಿ ರಾಧಾ ಭಗವತಿ

Amrthadhaare ಜೈ ಜೊತೆ ಮದ್ವೆ ಖುಷಿಯ ನಡುವೆಯೇ ಲೈವ್​ನಲ್ಲಿ ದುಃಖ ತೋಡಿಕೊಂಡ ನಟಿ ರಾಧಾ ಭಗವತಿ

ನಟಿ ರಾಧಾ ಭಗವತಿ ಅವರ ‘ನಾನು ಕರುಣಾಕರ’ ಚಿತ್ರಕ್ಕೆ ಥಿಯೇಟರ್​ಗಳ ಕೊರತೆ ಎದುರಾಗಿದೆ. ಈ ಬಗ್ಗೆ ಲೈವ್​ನಲ್ಲಿ ಬೇಸರ ವ್ಯಕ್ತಪಡಿಸಿರುವ ಅವರು, ಪರಭಾಷಾ ಚಿತ್ರಗಳಿಂದ ಕನ್ನಡ ಸಿನಿಮಾಗಳಿಗೆ ಅನ್ಯಾಯವಾಗುತ್ತಿದೆ ಎಂದು ನೋವು ತೋಡಿಕೊಂಡಿದ್ದಾರೆ. ಕನ್ನಡ ಚಿತ್ರರಂಗವನ್ನು ಬೆಂಬಲಿಸುವಂತೆ ಅವರು ಮನವಿ ಮಾಡಿದ್ದಾರೆ

ಭಾರ್ಗವಿ ಎಲ್​ಎಲ್​ಬಿ ಮೂಲಕ ಮನೆ ಮಾತಾಗಿರುವ ನಟಿ ರಾಧಾ ಭಗವತಿ ಅವರು ಅಮೃತಧಾರೆ (Amruthadhaare Serial) ಜೈದೇವ್​ ಉರ್ಫ್​ ರಾಣವ್​ ಗೌಡ ಅವರ ಜೊತೆ ಶೀಘ್ರದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದಾಗಲೇ ಇವರಿಬ್ಬರ ಎಂಗೇಜ್​ಮೆಂಟ್​ ಆಗಿದೆ.

ಇದರ ನಡುವೆಯೇ ರಾಧಾ ಅವರು ʻನಾನು ಕರುಣಾಕರʼ ಸಿನಿಮಾದಲ್ಲಿಯೂ ನಟಿಸಿದ್ದಾರೆ. ಇದಾಗಲೇ ಈ ಬಗ್ಗೆ ಪತ್ರಿಕಾಗೋಷ್ಠಿಯನ್ನು ಮಾಡಿದ್ದರು ರಾಧಾ ಅವರು. ಈ ಸಿನಿಮಾದಿಂದ ಅವರು ಸಹಜವಾಗಿ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಆದರೆ, ಸಿನಿಮಾದವರಿಗೆ ದೊಡ್ಡ ಸಮಸ್ಯೆ ಆಗ್ತಿರೋದು ಸ್ಕ್ರೀನಿಂಗ್​ಗೆ ಥಿಯೇಟರ್​ಗಳು ಸಿಕ್ತಿಲ್ಲಾ ಎನ್ನುವ ಕೊರಗು. ಇದಾಗಲೇ ದುರಂಧರ್​-2 ಸೇರಿದಂತೆ ಕೆಲವು ಬಾಲಿವುಡ್​ ಸಿನಿಮಾಗಳು ಸಿಕ್ಕಾಪಟ್ಟೆ ಓಡ್ತಿರೋ ಕಾರಣ, ಬಹುತೇಕ ಥಿಯೇಟರ್​ಗಳು ಬುಕ್​ ಆಗಿ ಬಿಟ್ಟಿವೆ. ಇದೇ ಕಾರಣಕ್ಕೆ ಯಶ್​ ಅವರು ತಮ್ಮ ಟಾಕ್ಸಿಕ್​ ಚಿತ್ರವನ್ನೂ ಬಿಡುಗಡೆ ಮಾಡಲಿಲ್ಲ ಎನ್ನಲಾಗಿದೆ.

ಇದೀಗ ರಾಧಾ ಭಗವತಿ ಅವರು ಲೈವ್​ಗೆ ಬಂದು ಇದೇ ನೋವನ್ನು ತೋಡಿಕೊಂಡಿದ್ದಾರೆ. ನಿಮ್ಮೆಲ್ಲರ ಪ್ರೀತಿಗೆ ಧನ್ಯವಾದ. ನಾನು ಕರುಣಾಕರ ಸಿನಿಮಾ ಚೆನ್ನಾಗಿ ಓಡ್ತಿದೆ. ಆದರೆ ಸ್ಕ್ರೀನ್​ಗಳು ಸಿಕ್ತಾ ಇಲ್ಲ. ಇದು ತುಂಬಾ ಬೇಸರ ಆಗ್ತಿದೆ ಎಂದಿದ್ದಾರೆ.

ಬೇರೆ ಭಾಷೆಯ ಚಿತ್ರಗಳಿಗೆ ಸ್ಕ್ರೀನ್​ಗಳು ಸಿಕ್ತಿರುವುದರಿಂದ ಕನ್ನಡಕ್ಕೆ ಅನ್ಯಾಯ ಆಗ್ತಿದೆ. ಬೇರೆ ಭಾಷೆಗಳಿಗೂ ಅವಕಾಶ ಸಿಗಬೇಕು. ಆದರೆ ಕನ್ನಡದ ಬಗ್ಗೆ ಮಾತನಾಡುವ ನಾವು ಮೊದಲು ಕನ್ನಡಕ್ಕೆ ಆದ್ಯತೆ ನೀಡಬೇಕಿದೆ. ಆದರೆ ಈಗ ಹಾಗೆ ಆಗ್ತಿಲ್ಲ ಎಂದು ನೊಂದುಕೊಂಡು ನುಡಿದಿದ್ದಾರೆ ನಟಿ. ಕನ್ನಡವನ್ನು ಬೆಳೆಸಬೇಕು, ಉಳಿಸಬೇಕು ಎಂದು ಮಾತಾಡ್ತೀವೆ. ಅದು ಪ್ರಾಕ್ಟಿಕಲ್​ ಆಗಿ ಬರಬೇಕು. ದಯವಿಟ್ಟು ಎಲ್ಲರೂ ಇದರ ಬಗ್ಗೆ ದನಿ ಎತ್ತಿ, ಕನ್ನಡವನ್ನು ಉಳಿಸಿ, ಬೆಳೆಸಿ ಎಂದು ನಟಿ ರಾಧಾ ಭಗವತಿ ಕೋರಿಕೊಂಡಿದ್ದಾರೆ.

ಇದಾಗಲೇ ಅವರ ಭಾವಿ ಪತಿ, ಅಮೃತಧಾರೆ ಜೈದೇವ್​ ಅರ್ಥಾತ್​ ರಾಣವ್​ ಅವರು, ʻನಾನು ಕರುಣಾಕರʼ ಸಿನಿಮಾ ಬಗ್ಗೆ ಮಾತನಾಡಿ, ಸಿನಿಮಾ ತುಂಬಾ ಚೆನ್ನಾಗಿದೆ. ಫ್ಯಾಮಿಲಿ ಎಂಟರ್‌ಟೈನರ್‌ ಸಿನಿಮಾ. ಮೂರು ಜನರ ನಡುವೆ ನಡೆಯುವ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡೋದು ತುಂಬಾ ಕಷ್ಟ. ಶುರುವಿನಿಂದ ಕೊನೆಯವರೆಗೂ ಒಂದು ಟಾಪಿಕ್‌ನ ನೀಟಾಗಿ ಇಟ್ಟುಕೊಂಡು, ಅದರಲ್ಲೂ ಎಮೋಷನ್ಸ್‌ ಜೊತೆಗೆ ಕಾಮಿಡಿಯನ್ನ ಕ್ಯಾರಿ ಮಾಡೋದು ಸ್ವಲ್ಪ ಕಷ್ಟ ಇದೆ. ಅದನ್ನ ಈ ತಂಡ ಅಚ್ಚುಕಟ್ಟಾಗಿ ಮಾಡಿದೆ ಎಂದಿದ್ದರು.

ನಾನು ರಾಧಾಳ ಬಿಗ್‌ ಫ್ಯಾನ್‌. ತುಂಬಾ ಅದ್ಭುತವಾಗಿ ನಟಿಸಿದ್ದಾರೆ. ಎಮೋಷನ್‌ ಆಗಿರ್ಲಿ, ಫನ್‌ ಆಗಿರ್ಲಿ ಅಥವಾ ಒಂದು ಸೀರಿಯಸ್‌ ಆಗಿರ್ಲಿ. ಎಲ್ಲವನ್ನೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅವರು ವಂಡರ್‌ಫುಲ್‌ ಆಕ್ಟರ್.‌ ಸಿನಿಮಾ ತುಂಬಾ ಚೆನ್ನಾಗಿದೆ. ದಯವಿಟ್ಟು ಎಲ್ಲರೂ ಬಂದು ನೋಡಿ ಎಂದಿದ್ದರು.

Source link

Leave a Reply

Your email address will not be published. Required fields are marked *