
ಪದಾರ್ಥಗಳು
ಒಂದು ಕಪ್ ಉಳಿದ ಅನ್ನ, ಒಂದು ಕಪ್ ಅಕ್ಕಿ ಹಿಟ್ಟು, ಅರ್ಧ ಕಪ್ ಗೋಧಿ ಹಿಟ್ಟು, ಅರ್ಧ ಕಪ್ ಮೊಸರು, ಒಂದು ಚಮಚ ಜೀರಿಗೆ, ಚಿಟಿಕೆ ಅಡುಗೆ ಸೋಡಾ, ಉಪ್ಪು ಮತ್ತು ನೀರು.
ತಯಾರಿಸುವ ವಿಧಾನ
ಮೊದಲು ಮಿಕ್ಸಿ ಜಾರ್ಗೆ ಅನ್ನ, ಮೊಸರು, ಅಕ್ಕಿ ಹಿಟ್ಟು, ಗೋಧಿ ಹಿಟ್ಟು, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ನಂತರ ಈ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಜೀರಿಗೆ ಮತ್ತು ಅಡುಗೆ ಸೋಡಾ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಈಗ ದೋಸೆ ಹಂಚನ್ನು ಬಿಸಿ ಮಾಡಿ, ಎಣ್ಣೆ ಸವರಿ ದೋಸೆ ಹಿಟ್ಟನ್ನು ಹರಡಿ. ಎರಡು ಕಡೆ ಕೆಂಪಾಗುವವರೆಗೆ ಬೇಯಿಸಿದರೆ ಗರಿಗರಿ ದೋಸೆ ಸಿದ್ಧ!