
ಹುಬ್ಬಳ್ಳಿ, (ಏಪ್ರಿಲ್ 06): ಹುಬ್ಬಳ್ಳಿಯಲ್ಲಿ ಒಂದೊಂದೇ ಲವ್ ಜಿಹಾದ್ ಪ್ರಕರಣಗಳು (ಹುಬ್ಬಳ್ಳಿ ಲೈವ್ ಜಿಹಾದ್ ಪ್ರಕರಣಗಳು) ಬೆಳಕಿಗೆ ಬರುತ್ತಿವೆ. ಅದರಲ್ಲೂ ಜಿಮ್ ಟ್ರೈನರ್‌ಗಳು ಹಿಂದೂ ಯುವತಿಯರನ್ನ ಪುಸಲಾಯಿಸಿ ನಂತರ ಬ್ಲ್ಯಾಕ್ ಮೇಲ್ ಮಾಡುವ ಆರೋಪಗಳು ಕೇಳಿಬರುತ್ತಿವೆ. ಈ ಮೇಲಿನ ಟ್ರೈನರ್ ಸಮೀರ್ ಎಂಬ ಜಿಮ್, ಹಿಂದೂ ಯುವತಿಯರನ್ನೇ ಟಾರ್ಗೆಟ್ ಮಾಡಿ ಅವರ ಮೇಲೆ ದೌರ್ಜನ್ಯ ಎಸಗಿರುವವರು ಆರೋಪಿಸಿದ್ದಾರೆ, ಈ ಸಂಬಂಧ ಇಬ್ಬರು ಯುವತಿಯರು ಸಮೀರ್ ಮುಲ್ಲಾನ ವಿರುದ್ಧ ದೂರು ದಾಖಲಿಸಿದ್ದಾರೆ. ಇದರ ನಡುವೆ ಇದೀಗ ಸಮೀರ್ ಮುಲ್ಲಾನ ವಿರುದ್ಧ ಲವ್ ಜಿಹಾದ್ ಪ್ರಕರಣಕ್ಕೆ ನೇಹಾ ಹಿರೇಮಠ ಕೊಲೆ (ನೇಹಾ ಹಿರೇಮಠ ಕೊಲೆ ಪ್ರಕರಣ) ಲಿಂಕ್ ಇದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ನೇಹಾ ತಂದೆ ನಿರಂಜನ್ ಹಿರೇಮಠ ಸ್ಫೋಟಕ ವಿಚಾರಗಳನ್ನು ಬಹಿರಂಗಪಡಿಸಿದ್ದಾರೆ.
ನೇಹಾ ಹಿರೇಮಠ ತಂದೆ ನಿರಂಜನ ಹಿರೇಮಠ ಅವರ ವಿಡಿಯೋ ಹೇಳಿಕೆ’ ಬಿಡುಗಡೆ ಮಾಡಿದ್ದು, ನನ್ನ ಮಗಳ ಹತ್ಯೆಯಲ್ಲೂ ಈ ಸಮೀರ್ ಹಾಗೂ ಅತನ ಸಹೋದರಿ, ತಂದೆಯ ಕೈವಾಡ ಇರಬಹುದು ಎಂಬ ಸಂಶಯ ಬರುತ್ತಿದೆ. ಯಾಕಂದ್ರೆ, ನೇಹಾ ಹಿರೇಮಠ ಹಂತಕ ಫಯಾಜ್ ಇದೆ ಸಮಿರರ ಜಿಮ್ ಗೆ ಹೋಗುತ್ತಿದ್ದ. ಹೀಗಾಗಿ ಅದೇ ಜಿಮ್‌ನಲ್ಲಿ ಹಂತಕ ಫಯಾಜ್‌ಗೆ ತರಬೇತಿ ನೀಡಲಾಗಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಲವ್ ಜಿಹಾದ್ ಪ್ರಕರಣಕ್ಕೆ ಟ್ವಿಸ್ಟ್: ಯುವಕನ ವಿರುದ್ಧ ದೂರು ಬೆನ್ನಲ್ಲೇ ಯುವತಿಯ ವಿಡಿಯೋ ವೈರಲ್
ನೇಹಾಗೂ ಹತ್ಯೆ ಮುನ್ನ ತಂದೆಗೆ ಸ್ಕೆಚ್ ಹಾಕಿದ್ರಾ?
ನೇಹಾಗೂ ಹತ್ಯೆ ಮುನ್ನ ತಂದೆ ನಿರಂಜನ ಹಿರೇಮಠಕ್ಕೆ ಖೆಡ್ಡ ತೊಡಲುಸಮೀರ್ ಮುಲ್ಲಾನ ಕುಟುಂಬ ಮುಂದಾಗಿತ್ತಾ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಸಮೀರ್ ತಂದೆ ಆಗಾಗ ಕಾಲ್ ಮಾಡುತ್ತಿದ್ದರು. ನಿಮ್ಮ ಏರಿಯಾದಲ್ಲಿ ಬಾಡಿ ಬಿಲ್ಡಿಂಗ್ ಸ್ಪರ್ಧೆ ಏರ್ಪಡಿಸಲಾಗಿದೆ, ಅರ್ಥಿಕ ನೆರವು ನೀಡುವಂತೆ ಒತ್ತಾಯಿಸೋಣ. ಮನೆಗೆ ತಮ್ಮ ಮನೆಗೆ ಬರುವಂತೆ ಆಹ್ವಾನಿಸಿ. ನಾನು ಎಷ್ಟು ಕರೆದರೂ ಹೋಗಲಿಲ್ಲ. ಹೋಗಿದ್ರು ಟ್ರ್ಯಾಪ್ ಮಾಡುವ ಪ್ಲಾನ್ ಇದ್ದಿರಬಹುದು ಎಂದು ಸಂಶಯವಿರಲಿಲ್ಲ. ಹೀಗಾಗಿ ಹೋಗಿಲ್ಲ.
ಫಯಾಜ್ – ನೇಹಾ ಹಿರೇಮಠ 2020 ರಲ್ಲಿ ಹುಬ್ಬಳ್ಳಿಯ ಕಾಲೇಜೊಂದರಲ್ಲಿ ಬಿಸಿಎ ಓದುವಾಗ ಸಹಪಾಠಿಗಳಾಗಿದ್ದರು. ಇವರಿಬ್ಬರೂ ಮೊದಲು ಪರಸ್ಪರ ಸ್ನೇಹಿತರಾಗಿದ್ದರೆ, 2022 ರಲ್ಲಿ ಇಬ್ಬರು ಪ್ರೀತಿಸುತ್ತಾರೆ. ಆದರೆ, ಇಬ್ಬರ ನಡುವೆ ಅದೇನಾಯ್ತೋ ಏನೋ 2024 ರ ಮಾರ್ಚ್ ತಿಂಗಳಿನಲ್ಲಿ ಅವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ನೇಹಾ, ಫಯಾಜ್ನ ಜತೆ ಮಾತು ನಿಲ್ಲಿಸಿ ಅವನ ಸಂಪರ್ಕದಿಂದ ದೂರವಾಯಿತು. ಈ ಸಿಟ್ಟಿನಲ್ಲಿ ಆಕೆಯನ್ನು ಕೊಲೆ ಮಾಡಿದ್ದಾನೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.