
ಜನವರಿ, ಏಪ್ರಿಲ್ 6: ದೇಶದ ಬೆಳವಣಿಗೆಗೆ ಬೇಕಾದ ಇನ್ಫ್ರಾಸ್ಟ್ರಕ್ಚರ್ನಲ್ಲಿ ರಸ್ತೆ ಸೌಕರ್ಯವೂ ಪ್ರಮುಖವಾದುದು. ವಿಶೇಷವಾಗಿ ದೂರದೂರುಗಳನ್ನು ನಗರಗಳನ್ನು ಸಂಪರ್ಕಿಸುವ ಉನ್ನತ ಗುಣಮಟ್ಟದ ಮುಖ್ಯ. ಇತ್ತೀಚೆಗೆ ಸರ್ಕಾರ ನಿರ್ಮಿಸುತ್ತಿರುವ ಎಕ್ಸ್ಪ್ರೆಸ್ ವೇಗಗಳು ಪ್ರಯಾಣದ ಅವಧಿಯನ್ನು ಗಣನೀಯವಾಗಿ ಕಡಿಮೆ ಮಾಡಲು ಶಕ್ಯಗೊಂಡಿವೆ. ಬೆಂಗಳೂರಿನ ಮೈಸೂರಿಗೆ ಗಂಟೆಯಲ್ಲೇ ಕಾರಿನಲ್ಲಿ ಹೋಗಬಹುದು. ಇದೀಗ ಪುಣೆ ಮತ್ತು ಬೆಂಗಳೂರು ನಡುವೆ ಎಕ್ಸ್ ಪ್ರೆಸ್ ವೇ (ಪುಣೆ-ಬೆಂಗಳೂರು ಎಕ್ಸ್ ಪ್ರೆಸ್ ವೇ) ನಿರ್ಮಿಸುವ ಯೋಜನೆ ಹಾಕಲಾಗಿದೆ.
700 ರಿಂದ 745 ಕಿಮೀ ಉದ್ದದ ಪುಣೆ-ಬೆಂಗಳೂರು ಗ್ರೀನ್ ಫೀಲ್ಡ್ ಎಕ್ಸ್‌ಪ್ರೆಸ್‌ವೇ ಅಂದರೆ 40,000 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುವ ಯೋಜನೆ ಪ್ರಸ್ತಾಪ ಸರ್ಕಾರದ ಬಳಿ ಇದೆ. ಸದ್ಯ ಬೆಂಗಳೂರಿನಿಂದ ಮುಂಬೈಗೆ ರಸ್ತೆ ಮೂಲಕ ಹೋಗಲು ಕನಿಷ್ಠ 12 ಗಂಟೆ ತೆಗೆದುಕೊಳ್ಳಲಾಗಿದೆ. ಎಕ್ಸ್ಪ್ರೆಸ್ವೇ ನಿರ್ಮಾಣವಾದ ನಂತರ ಪ್ರಯಾಣದ ಅವಧಿ 5.5 ಗಂಟೆಗೆ ಇಳಿಯುತ್ತದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ 12 ಜಿಲ್ಲೆಗಳಾದ್ಯಂತ ಹೋಗುವ ಈ ಎಕ್ಸ್‌ಪ್ರೆಸ್ ಮೂಲಕ ಕೇವಲ ಐದೂವರೆ ಗಂಟೆಗೆ ಬೆಂಗಳೂರಿನಿಂದ ಮುಂಬೈ ತಲುಪಬಹುದು.
ಇದನ್ನೂ ಓದಿ: ಜಿಡಿಪಿಯಲ್ಲಿ 4ನೇ ಸ್ಥಾನ, ತಲಾದಾಯದಲ್ಲಿ 126ನೇ ಸ್ಥಾನ; ಭಾರತದ ಆರ್ಥಿಕ ಅಂತರ ಎತ್ತಿತೋರಿಸಿದ ಸ್ಟೀವ್ ಹ್ಯಾಂಕ್
ಅಷ್ಟಪಥ ರಸ್ತೆ ಇದಾಗಿದ್ದರೆ, ಎಲ್ಲಿಯೂ ಫಿಕ್ ನಿಲ್ಲದಂತೆ ಬೈಪಾಸ್ ನಿರ್ಮಿಸಲಾಗಿದೆ. ಈ ರಸ್ತೆಯಲ್ಲಿ ಗಂಟೆಗೆ 120 ಕಿಮೀ ವೇಗದಲ್ಲಿ ಹೋಗಲು ಅವಕಾಶ ಇರುತ್ತದೆ. ಪುಣೆಯಿಂದ ಆರಂಭವಾಗಿ ಮಹಾರಾಷ್ಟ್ರದ ಸತಾರಾ, ಸಾಂಗ್ಲಿ ಜಿಲ್ಲೆಗಳನ್ನು ದಾಟಿ, ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ ಹೀಗೆ ಮಾರ್ಗದ ಪ್ರಸ್ತಾಪವಿದೆ.
ಈ ಎಕ್ಸ್ಪ್ರೆಸ್ವೇ ನಿರ್ಮಾಣ ಕಾರ್ಯ ಶೀಘ್ರದಲ್ಲೇ ಪ್ರಾರಂಭವಾಗುವ ಸಾಧ್ಯತೆಯಿದೆ, 228ಕ್ಕೆ ಮುಗಿಯುವ ನಿರೀಕ್ಷೆಯಿದೆ.
ವಿಮಾನ ಸಂಚಾರವೇ ಬಂದ್ ಆಗ್ತಿದೆ: ನಿತಿನ್ ಗಡ್ಕರಿ ತಮಾಷೆ
ಎಕ್ಸ್ಪ್ರೆಸ್ವೇ ನಿರ್ಮಾಣ ಮಾಡಿದ ಮಾರ್ಗದಲ್ಲಿ ವಿಮಾನ ಸಂಚಾರವನ್ನು ನಿಲ್ಲಿಸಲಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಬ್ಯುಸಿನೆಸ್ ಟುಡೇ ವಾಹಿನಿಗೆ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು ಬೆಂಗಳೂರು ಪುಣೆ ಎಕ್ಸ್ ಪ್ರೆಸ್ ವೇ ವಿಚಾರ ಮಾತನಾಡುತ್ತಾ ಆ ಮಾತುಗಳನ್ನಾಡಿದರು.
ನಿತಿನ್ ಗಡ್ಕರಿ ಮಾತನಾಡಿರುವ ವಿಡಿಯೋ
ಪುಣೆ-ಬೆಂಗಳೂರು ಎಕ್ಸ್ಪ್ರೆಸ್ವೇ 12 ಜಿಲ್ಲೆಗಳ ಮೂಲಕ ಹಾದು ಹೋಗುವ ಯೋಜನೆ.
ಇದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಕಲ್ಪನೆಯಂತೆ ಮುಂಬೈ ಮತ್ತು ಬೆಂಗಳೂರು ನಡುವಿನ ಪ್ರಯಾಣದ ಸಮಯವನ್ನು ~ 18 ಗಂಟೆಗಳಿಂದ ಕೇವಲ 5.5 ಗಂಟೆಗಳವರೆಗೆ ಕಡಿತಗೊಳಿಸುತ್ತದೆ.
– ವಿಶ್ಲೇಷಕ (ಸುದ್ದಿ ನವೀಕರಣಗಳು
) (@Indian_Analyzer) ಏಪ್ರಿಲ್ 5, 2026
ಇದನ್ನೂ ಓದಿ: ಟಾಟಾ ಟ್ರಸ್ಟ್ನ ಬಾಯ್ ಹಿರಾಬಾಯ್ ಟ್ರಸ್ಟ್ನಿಂದ ಹೊರಬಿದ್ದ ವೇಣು ಶ್ರೀನಿವಾಸನ್
ಮುಂಬೈ ಮತ್ತು ಪುಣೆ ಮಧ್ಯೆ ಜೆಟ್ ಏರ್ವೇಸ್ನ ಎಂಟು ವಿಮಾನಗಳು. ರಸ್ತೆ ಆದ ಬಳಿಕ ಎಲ್ಲಾ ಬಂದ್ ಆದವು. ಮುಂಬೈ ಪುಣೆ ಮಧ್ಯೆ ಜನರು ವಿಮಾನದಲ್ಲಿ ಹೋಗೋದಿಲ್ಲ. ಡಿಸಂಬರ್ ನಲ್ಲಿ ದಿಲ್ಲಿಯಿಂದ ಡೆಹ್ರಾಡೂನ್ ಗೆ ಫ್ಲೈಟ್ ಬಂದ್ ಆಗಿ ಹೋಗುತ್ತೆ. ದಿಲ್ಲಿಯಿಂದ ಜೈಪುರ ಫ್ಲೈಟ್ ಬಂದ್ ಆಗುತ್ತೆ ಎಂದು ಗಡ್ಕರಿ ತಮಾಷೆ ಮಾಡಿದರು.
ಹೆಚ್ಚಿನ ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಪುಣೆ-ಬೆಂಗಳೂರು ಎಕ್ಸ್ಪ್ರೆಸ್ವೇ 12 ಜಿಲ್ಲೆಗಳ ಮೂಲಕ ಹಾದು ಹೋಗುವ ಯೋಜನೆ.
) (@Indian_Analyzer)