Headlines

Bengaluru Rent Shock ಬೆಂಗಳೂರು ನಿವಾಸಿಗೆ ಶಾಕ್ ಕೊಟ್ಟ ಬಾಡಿಗೆ, 1BHK ಮನೆಗೆ ತಿಂಗಳಿಗೆ 32 ಸಾವಿರ ರೂ | Bengaluru Rent Shock 1bhk Flat For Rs 32000 Sparks Outrage Online

Bengaluru Rent Shock ಬೆಂಗಳೂರು ನಿವಾಸಿಗೆ ಶಾಕ್ ಕೊಟ್ಟ ಬಾಡಿಗೆ, 1BHK ಮನೆಗೆ ತಿಂಗಳಿಗೆ 32 ಸಾವಿರ ರೂ | Bengaluru Rent Shock 1bhk Flat For Rs 32000 Sparks Outrage Online



Bengaluru Rent Shock ಬೆಂಗಳೂರು ನಿವಾಸಿಗೆ ಶಾಕ್ ಕೊಟ್ಟ ಬಾಡಿಗೆ, 1BHK ಮನೆಗೆ ತಿಂಗಳಿಗೆ 32 ಸಾವಿರ ರೂ | Bengaluru Rent Shock 1bhk Flat For Rs 32000 Sparks Outrage Online

ಬೆಂಗಳೂರು ನಿವಾಸಿಗೆ ಶಾಕ್ ಕೊಟ್ಟ ಬಾಡಿಗೆ, 1BHK ಮನೆಗೆ ತಿಂಗಳಿಗೆ 32 ಸಾವಿರ ರೂ, ಬೆಂಗಳೂರಲ್ಲಿ ಮನೆ ಹುಡಕುವುದು ಸುಲಭದ ಮಾತಲ್ಲ, ಇಷ್ಟೇ ಅಲ್ಲ ಬಜೆಟ್‌ಗೆ ಹೊಂದಿಕೊಳ್ಳುವ ಮನೆಯೂ ಸಿಗುವುದಿಲ್ಲ. 

ಬೆಂಗಳೂರು (ಏ.06) ಕಚೇರಿಗೆ ಹತ್ತಿರವಾಗುವಂತೆ ಮನೆ ಹುಡುಕಾಟಕ್ಕಿಳಿದ ಬೆಂಗಳೂರು ನಿವಾಸಿಗೆ ಬಾಡಿಗೆ ಕೇಳಿ ತಲೆ ತಿರುಗುದಿದೆ. ಹಾಗಂತೆ ಬೆಂಗಳೂರಿನ ಹೃದಯಭಾಗದಲ್ಲಿ ಮನೆ ಹುಡುಕಿಲ್ಲ. ಕಾಡುಬೀಸನಹಳ್ಳಿ ಸುತ್ತ ಮುತ್ತ ಮನೆ ಹುಡುಕಾಟ ನಡೆಸಿದ ಬೆಂಗಳೂರು ನಿವಾಸಿಗೆ ಶಾಕ್ ಮೇಲೆ ಶಾಕ್ ಎದುರಾಗಿದೆ. ಕಾರಣ ಎಲ್ಲೇ ಹೋದರೂ ತಿಂಗಳ ಬಾಡಿಗೆ 28 ಸಾವಿರ ರೂಪಾಯಿಯಿಂದ 32 ರೂಪಾಯಿ. ಇದಕ್ಕಿಂತ ಕಡಿಮೆ ದರದಲ್ಲಿ 1 ಬೆಡ್ ರೂಂ ಮನೆಗಳಿಲ್ಲ. ಹುಡುಕಾಡಿ ಸೋತ ನಿವಾಸಿ ತಿಂಗಳಿಗೆ 30,000 ರೂಪಾಯಿ ಬಾಡಿಗೆ ಮನೆಗೆ ಒಕೆ ಮಾಡಿದ್ದಾರೆ. ಅಷ್ಟಕ್ಕೆ ಈ ನಿವಾಸಿ ಸಮಸ್ಯೆ ಮುಗಿದಿಲ್ಲ.

ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಈತ ಕಚೇರಿಗೆ ಹತ್ತಿರವಾಗುವಂತೆ ಮನೆ ಹುಡುಕಾಟ ಆರಂಭಿಸಿದ್ದಾನೆ. ಕಾಡುಬೀಸನಹಳ್ಳಿಯಲ್ಲಿ 6 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮನೆ ಹುಡುಕಾಟ ಕಾರ್ಯ ಆರಂಭಗೊಂಡಿದೆ. ಬೆಳ್ಳಂದೂರು, ಹೆಎಸ್ಆರ್ ಲೇಔಟ್, ಮಾರತಹಳ್ಳಿ, AECS ಲೇಔಟ್, ಸರ್ಜಪುರ ಸೇರಿದಂತೆ ಹಲವು ಪ್ರಮುಖ ವಲಯಗಳಿಗೆ ಸಂಪರ್ಕ ಕಲ್ಪಿಸುವ ಕಾಡುಬೀಸನಹಳ್ಳಿಯಲ್ಲಿ ಯಾವುದೇ ಮನೆ ಕೇಳಿದರೂ ದುಬಾರಿ ಬಾಡಿಗಿ. ಕೇವಲ ಒಂದು ಬೆಡ್ ರೂಂ ಮನೆ ಹುಡುಕಾಡಿ ನಿವಾಸಿ ಸುಸ್ತಾಗಿದ್ದಾನೆ.

30 ಸಾವಿರ ಕೊಟ್ಟ ಮನೆ ಹೇಗಿದೆ

ಮನೆ ಹುಡುಕಾಟದಲ್ಲಿ ಸುಸ್ತಾದ ನಿವಾಸಿ ಕೊನೆಗೆ 1 ಬೆಡ್ ರೂಂ ಕೋಣೆಯ ಮನೆ ಒಕೆ ಮಾಡಿದ್ದಾರೆ. ಮತುಕತೆ, ಮನವಿ ಬಳಿಕ ತಿಂಗಳ ಬಾಡಿಗೆಯನ್ನು 30 ಸಾವಿರ ರೂಪಾಯಿಗೆ ನಿಗದಿ ಮಾಡಲಾಗಿದೆ. ಇನ್ನು ಹುಡುಕಲು ಸಾಧ್ಯವಿಲ್ಲ. ಇಷ್ಟೇ ಅಲ್ಲ ಎಲ್ಲೇ ಹೋದರೂ ಇದಕ್ಕಿಂತ ಹೆಚ್ಚಿನ ಬೆಲೆ ನೀಡಬೇಕಾಗುತ್ತದೆ ಎಂದು ಕೊನೆಗೆ ಒಪ್ಪಿಕೊಂಡಿದ್ದಾನೆ. ತಿಂಗಳಿಗೆ 30,000 ರೂಪಾಯಿ ನೀಡುತ್ತಿದ್ದರೂ ಈ ಮನೆಗೆ ಪಾರ್ಕಿಂಗ್ ಸೌಲಭ್ಯವಿಲ್ಲ. ಕಾರು ಇಲ್ಲವೇ ಇಲ್ಲ, ಬೈಕ್ ಪಾರ್ಕಿಂಗ್ ಕೂಡ ಜಾಗವಿಲ್ಲ. ಇಷ್ಟೇ ಅಲ್ಲ ಹೇಳಲು ಅಪಾರ್ಟ್‌ಮೆಂಟ್ ಆದರೆ ಬಾಲ್ಕನಿ ಸೌಲಭ್ಯವೂ ಇಲ್ಲ.

ಆದರೆ ಹಲವು ಮನೆಗಳನ್ನು ತಿರಸ್ಕರಿಸಿ ಈ ಮನೆಗೆ ಒಕೆ ಹೇಳಲಾಗಿತ್ತು. ಕಾರಣ ಹಲವು ಮನೆಗಳಲ್ಲಿ ಸಣ್ಣ ಅಡುಗೆ ಕೋಣೆ, ಅಲ್ಲೇ ಪಕ್ಕದಲ್ಲಿ ವಾಶಿಂಗ್ ಮಶಿನ್ ಜಾಗ ಸೇರಿದಂತೆ ಪ್ರತಿ ಮನೆಗಳಲ್ಲಿ ಒಂದೊಂದು ಸಮಸ್ಯೆಗಳಿತ್ತು. ಹೀಗಾಗಿ ಈ ಮನೆ ಒಕೆ ಮಾಡಲಾಗಿತ್ತು. ಈ ಮನೆಯಲ್ಲೂ ಹಲವು ಸಮಸ್ಯೆಗಳಿವೆ. ಆದರೆ ಅನಿವಾರ್ಯವಾಗಿ ಈ ಸಮಸ್ಯೆಗಳಿಗೆ ಒಗ್ಗಿಕೊಳ್ಳಬೇಕಿದೆ ಎಂದು ರೆಡ್ಡಿಟ್ ಮೂಲಕ ಬೆಂಗಳೂರು ನಿವಾಸಿ ಅಳಲು ತೋಡಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *