
ಅಮ್ಮನಿಲ್ಲದ ಮೇಲೆ ಮಾಡಿದ ತಪ್ಪುಗಳು:
ಶ್ರೀದೇವಿ ಇದ್ದಾಗ ಜಾಹ್ನವಿ ಕಪೂರ್ ಪ್ರತಿಯೊಂದಕ್ಕೂ ಅಮ್ಮನ ಮೇಲೆಯೇ ಅವಲಂಬಿತರಾಗಿದ್ದರು. “ಯಾವ ಬಟ್ಟೆ ಧರಿಸಬೇಕು, ಏನು ಯೋಚಿಸಬೇಕು ಎಂಬ ಎಲ್ಲ ನಿರ್ಧಾರಗಳನ್ನು ಅಮ್ಮನೇ ತೆಗೆದುಕೊಳ್ಳುತ್ತಿದ್ದರು. ಅಮ್ಮ ಹೋದ ಮೇಲೆ ನಾನು ಏಕಾಏಕಿ ದೊಡ್ಡವಳಾಗಬೇಕಾಯಿತು. ಆ ಗೊಂದಲದಲ್ಲಿ ನಾನು ಕೆಲವು ತಪ್ಪು ನಿರ್ಧಾರಗಳನ್ನು ಮಾಡಿದೆ. ಸರಿಯಲ್ಲದ ಜನರನ್ನು ನನ್ನ ಜೀವನಕ್ಕೆ ಸೇರಿಸಿಕೊಂಡೆ. ಅವರು ನನ್ನನ್ನು ಬಳಸಿಕೊಂಡರು. ನನ್ನ ಮಾನಸಿಕ ಮತ್ತು ದೈಹಿಕ ಸುರಕ್ಷತೆಯ ಬಗ್ಗೆ ನಾನು ರಾಜಿ ಮಾಡಿಕೊಂಡಿದ್ದೆ” ಎಂದು ಜಾನ್ವಿ ಕಪೂರ್ ತಮ್ಮ ಹಳೆಯ ದಿನಗಳ ಕಹಿ ಸತ್ಯಗಳನ್ನು ಒಪ್ಪಿಕೊಂಡಿದ್ದಾರೆ.
ಇಂದು ಜಗತ್ತು ಶ್ರೀದೇವಿಯವರನ್ನು ದೇವತೆಯಂತೆ ಕೊಂಡಾಡುತ್ತಿರಬಹುದು, ಆದರೆ ಅವರು ಬದುಕಿದ್ದಾಗ ಅನುಭವಿಸಿದ ಟೀಕೆಗಳು ಮತ್ತು ‘ಹೋಮ್ ರೆಕ್ಕರ್’ ಎಂಬ ಹಣೆಪಟ್ಟಿ ಜಾಹ್ನವಿ ಕಪೂರ್ ಅವರ ಹೃದಯವನ್ನು ಇಂದಿಗೂ ಚುಚ್ಚುತ್ತಿದೆ. ಒಬ್ಬ ಯಶಸ್ವಿ ನಟಿಯಾಗಿ ಬೆಳೆಯುತ್ತಿರುವ ಜಾಹ್ನವಿ ಕಪೂರ್, ಇಂದು ತನ್ನ ಅಮ್ಮನ ಗೌರವಕ್ಕಾಗಿ ಮತ್ತು ತನ್ನ ಅಸ್ತಿತ್ವಕ್ಕಾಗಿ ಸಮಾಜದ ಕಣ್ಣುಗಳ ಎದುರು ಎದೆತುಂಬಿ ನಿಂತಿದ್ದಾರೆ.