ಕಾಲೇಜು ಅರ್ಧಕ್ಕೆ ಬಿಟ್ಟ ಹುಡುಗಿ, 24ನೇ ವಯಸ್ಸಿಗೆ ಮೋದಿ ಜುಕರ್‌ಬರ್ಗ್ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ. ಮೆಟಾದ ಹೊಸ ವಾಟ್ಸಾಪ್ ಸ್ಟಿಕ್ಕರ್ ಫೀಚರ್‌ಗಾಗಿ ನಟ ವಿಜಯ್ ದೇವರಕೊಂಡ ಜೊತೆ ಅಮಲಾ ಕೂಡ ಆಯ್ಕೆಯಾಗಿದ್ದಾರೆ.

ಸೋಶಿಯಲ್ ಮೀಡಿಯಾ ಬಳಸೋರಿಗೆ ಅಮಲಾ ಶಾಜಿ ಹೆಸರು ಚಿರಪರಿಚಿತ. ಇವರು ಮೂಲ ಕೇರಳ ಆಧರೂ ತಮಿಳುನಾಡು ಸೇರಿದಂತೆ ಇತರ ರಾಜ್ಯಗಳಲ್ಲಿ ಭಾರಿ ಜನಪ್ರಿಯತೆ ಪಡೆದಿದ್ದಾರೆ.ರೀಲ್ಸ್, ಪೋಸ್ಟ್, ವಿಡಿಯೋಗಳ ಮೂಲಕ ಅಪಾರ ಅಭಿಮಾನಿಗಳ ಬಳಗ ಸೃಷ್ಟಿಸಿರುವ ಅಮಲಾ ಇದೀಗ ತಮ್ಮ 24ನೇ ವಯಸ್ಸಿಗೆ ಸಾಧನೆ ಮಾಡಿದ್ದಾರೆ.

ವಾಟ್ಸಾಪ್ ಚಾನೆಲ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವವರ ಲಿಸ್ಟ್‌ನಲ್ಲಿ ಅಮಲಾ ಕೂಡ ಒಬ್ಬರು. ವ್ಯಾಟ್ಸಾಪ್ ಚಾನೆಲ್‌ನಲ್ಲಿ ಗರಿಷ್ಠ ಫಾಲೋವರ್ಸ್ ಹೊಂದಿದವರ ಪಟ್ಟಿಯಲ್ಲಿ ಅಮಲಾಗೆ 29ನೇ ಸ್ಥಾನ. ವಿಶೇಷ ಅಂದರೆ ಅತೀ ಹೆಚ್ಚು ಫಾಲೋವರ್ಸ್ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಪಟ್ಟಿಯಲ್ಲಿ ಅಮಲಾ ಕೂಡ ಸ್ಥಾನ ಪಡೆದಿದ್ದಾರೆ.

ವಾಟ್ಸಾಪ್‌ನ ಒಂದು ಹೊಸ ಫೀಚರ್‌ಗಾಗಿ ಅಮಲಾ ಕ್ಯಾಂಪೇನ್ ಮಾಡುತ್ತಿದ್ದಾರೆ. ಅದುವೇ ಸ್ಟಿಕ್ಕರ್ಸ್. ಭಾರತದಿಂದ ಈ ಅವಕಾಶ ಸಿಕ್ಕಿರುವುದು ಇಬ್ಬರಿಗೆ ಮಾತ್ರ. ಒಬ್ಬರು ಅಮಲಾ, ಇನ್ನೊಬ್ಬರು ನಟ ವಿಜಯ್ ದೇವರಕೊಂಡ ಎಂದು ಅಮಲಾ ಅವರೇ ಹೇಳಿದ್ದಾರೆ. ಪಾಡ್‌ಕಾಸ್ಟ್‌ನಲ್ಲಿ ಅವರು ಈ ವಿಷಯ ಹಂಚಿಕೊಂಡಿದ್ದಾರೆ.

ವಾಟ್ಸಾಪ್ ಚಾನೆಲ್ ಶುರು ಮಾಡಿದ ತಕ್ಷಣ 5 ಮಿಲಿಯನ್ ಫಾಲೋವರ್ಸ್ ಆಯ್ತು. ಯೂಟ್ಯೂಬ್, ಇನ್‌ಸ್ಟಾದಲ್ಲಿ ನಾನು ತುಂಬಾ ಕ್ಯಾಂಪೇನ್ ಮಾಡಿದ್ದೀನಿ. ಅದೇ ರೀತಿ ವಾಟ್ಸಾಪ್‌ನಲ್ಲೂ ಮಾಡಿದೆ. ಫೋನ್‌ನಲ್ಲಿ ಎಮೋಜಿ ಬದಲು ಸ್ಟಿಕ್ಕರ್ಸ್ ಬರುತ್ತೆ. ಅಂಥದ್ದೊಂದು ಫೀಚರ್ ಮೆಟಾ ಕಂಪನಿ ರೆಡಿ ಮಾಡ್ತಿದೆ. ನನ್ನ ಸುಮಾರು 20 ಫೋಟೋಗಳನ್ನ ಎಮೋಜಿ ತರ ಮಾಡಿ ಅಪ್‌ಲೋಡ್ ಮಾಡ್ತಾರೆ. ಮುಂದೆ ಇದು ಎಲ್ಲರಿಗೂ ಸಿಗುತ್ತೆ. ಇಂಡಿಯಾದಲ್ಲಿ ನನಗೂ, ನಟ ವಿಜಯ್ ದೇವರಕೊಂಡಗೆ ಮಾತ್ರ ಈ ಚಾನ್ಸ್ ಸಿಕ್ಕಿರೋದು. ಇದು ಯುಎಸ್‌ಡಿ ಪೇಮೆಂಟ್, ಇಂಟರ್‌ನ್ಯಾಷನಲ್ ಪ್ರಾಜೆಕ್ಟ್" ಅಂತ ಅಮಲಾ ವಿವರಿಸಿದ್ದಾರೆ.

ಕಾಲೇಜಿನಲ್ಲಿ ಎರಡನೇ ವರ್ಷ ಓದುತ್ತಿದ್ದಾಗ ಅಮಲಾ ಓದು ನಿಲ್ಲಿಸಿದ್ದರು. ಈಗ ತಮ್ಮದೇ ಆದ ಟಿ-ಶರ್ಟ್ ಬ್ರ್ಯಾಂಡ್ ನಡೆಸುತ್ತಿದ್ದಾರೆ. "ನಾನು ಕಾಲೇಜಲ್ಲಿ ಸೆಕೆಂಡ್ ಇಯರ್‌ವರೆಗೆ ಹೋದೆ. ಯಾವ ಟ್ರೆಂಡ್ ಬಂದ್ರೂ ಅದನ್ನ ನಾನು ರೀ-ಕ್ರಿಯೇಟ್ ಮಾಡ್ತಿದ್ದೆ. ಆದ್ರೆ ಜನರಿಗೆ ಅದು ಇಷ್ಟ ಆಗ್ತಿರಲಿಲ್ಲ. ಸಿಕ್ಕಾಪಟ್ಟೆ ಟ್ರೋಲ್ ಮಾಡೋರು. ಹುಡುಗರೆಲ್ಲಾ ನೇರವಾಗಿ ಬಂದು ಒಂಥರಾ ಮಾತಾಡೋರು. ನನ್ನ ಬಣ್ಣದ ಬಗ್ಗೆ ಮಾತಾಡೋರು. ಅದು ಸರಿ ಅಲ್ಲ. ಯಾರನ್ನೂ ಹಾಗೆ ಹೇಳಬಾರದು. ಅದೆಲ್ಲಾ ನನ್ನ ಮೇಲೆ ತುಂಬಾ ಪರಿಣಾಮ ಬೀರಿತು. ಟೀಚರ್ ಹತ್ರ ಹೇಳಿದಾಗ, ಡಿಸ್ಟೆನ್ಸ್ ಎಜುಕೇಶನ್ ಮಾಡು ಅಂದ್ರು. ಆದ್ರೆ ನನಗೆ ಇಂಟರೆಸ್ಟ್ ಇರಲಿಲ್ಲ. ಕೊನೆಗೆ ನಾನೇ ಒಂದು ಫ್ಯಾಷನ್ ಹಬ್ ಶುರು ಮಾಡಿದೆ. ಒಂದು ಟಿ-ಶರ್ಟ್ ಬ್ರ್ಯಾಂಡ್ ಶುರು ಮಾಡಿದೆ. ಅದು ಚೆನ್ನಾಗಿ ನಡೀತಿದೆ" ಅಂತ ಅಮಲಾ ಹೇಳಿಕೊಂಡಿದ್ದಾರೆ.

ಇನ್‌ಸ್ಟಾಗ್ರಾಂ – 4.3 ಮಿಲಿಯನ್

ವಾಟ್ಸಾಪ್ ಚಾನೆಲ್ – 7.1 ಮಿಲಿಯನ್

ಯೂಟ್ಯೂಬ್ – 1.19 ಮಿಲಿಯನ್

ಟಿಕ್‌ಟಾಕ್‌ನಲ್ಲಿ 5 ಮಿಲಿಯನ್ ಇತ್ತು (ಭಾರತದಲ್ಲಿ ಟಿಕ್‌ಟಾಕ್ ಲಭ್ಯವಿಲ್ಲ)

ಅಮಲಾ ಶಾಜಿ ಅವರ ಸದ್ಯದ ಫಾಲೋವರ್ಸ್

Source link
ಕಾಲೇಜು ಅರ್ಧಕ್ಕೆ ಬಿಟ್ಟ ಹುಡುಗಿ, 24ನೇ ವಯಸ್ಸಿಗೆ ಮೋದಿ ಜುಕರ್‌ಬರ್ಗ್ ಪಟ್ಟಿಯಲ್ಲಿ ಸ್ಥಾನ