Headlines

ರಾತ್ರಿ ಗಸ್ತಿನಲ್ಲಿದ್ದ PSI ನಾಗಮ್ಮ, ಚಾಲಕನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಯತ್ನ, ಧಮ್ಕಿ | Chikkaballapur Chintamani Miscreants Attempt To Attack Psi Nagamma Driver While On Night Patrol Mrq

ಚಿಂತಾಮಣಿ ತಾಲೂಕಿನ ಚಿನ್ನಸಂದ್ರದಲ್ಲಿ ರಾತ್ರಿ ಗಸ್ತಿನಲ್ಲಿದ್ದ ಮಹಿಳಾ ಪಿಎಸ್‌ಐ ನಾಗಮ್ಮ ಮತ್ತು ಚಾಲಕ ವೇಣುಗೋಪಾಲ್ ಮೇಲೆ ಪುಂಡರ ಗುಂಪೊಂದು ಧಮ್ಕಿ ಹಾಕಿದೆ. ಹೋಟೆಲ್ ಮುಚ್ಚುವಂತೆ ಸೂಚಿಸಿದ್ದಕ್ಕೆ ಕೋಪಗೊಂಡ ದುಷ್ಕರ್ಮಿಗಳು, ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಯತ್ನಿಸಿದ್ದಾರೆ.

ಚಿಕ್ಕಬಳ್ಳಾಪುರ: ಕರ್ತವ್ಯನಿರತ ಮಹಿಳಾ ಪಿಎಸ್‌ಐ ಮತ್ತು ವಾಹನ ಚಾಲಕನ ಮೇಲೆ ಪುಂಡರ ಗುಂಪೊಂದು ಧಮ್ಕಿ ಹಾಕಿರುವ ಘಟನೆ ಚಿಂತಾಮಣಿ ತಾಲೂಕಿನ ಚಿನ್ನಸಂದ್ರದಲ್ಲಿ ನಡೆದಿದೆ.

ತಾಲೂಕಿನ ಚಿನ್ನಸಂದ್ರ ಗ್ರಾಮದಲ್ಲಿ ಪಿಎಸ್‌ಐ ನಾಗಮ್ಮ ಹಾಗೂ ಚಾಲಕ ವೇಣುಗೋಪಾಲ್ ಏಪ್ರಿಲ್ ೩ರ ರಾತ್ರಿ ಗಸ್ತಿನಲ್ಲಿದ್ದರು. ರಾತ್ರಿ 12:40ರ ಸಮಯದಲ್ಲೂ ಜಮ್ ಜಮ್ ಹೋಟೆಲ್ ತೆರೆದಿದ್ದನ್ನು ಗಮನಿಸಿದ ಕಾನೂನಿನ ನಿಯಮದಂತೆ ಹೋಟೆಲ್ ಮುಚ್ಚುವಂತೆ ಮಾಲೀಕ ಶಾಹಿದ್ ಖಾನ್‌ಗೆ ಸೂಚಿಸಿದರೆ ಅಲ್ಲೇ ಇದ್ದ ತಾಲೂಕಿನ ಆಲಂಬಗಿರಿಯ ನಾಗೇಂದ್ರ, ನವೀನ್, ನರೇಂದ್ರ ಯಲಹಂಕದ ಪುನೀತ್ ಯಾದವ್ ಧಮ್ಕಿ ಹಾಕಿರುವುದಲ್ಲದೆ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗೆ ಹಲ್ಲೆ ಮಾಡಲು ಮುಂದಾಗಿದ್ದು, ಈ ಹಿನ್ನೆಲೆಯಲ್ಲಿ 6 ಮಂದಿ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಪ್ಪಲಿ ಬಿಟ್ಟು ಬಂದ್ರೆ ಮಾತ್ರ ಚಿಕಿತ್ಸೆ? ಪ್ರಾಥಮಿಕ ಆರೋಗ್ಯ ಕೇಂದ್ರದ ವಿಚಿತ್ರ ನಿಯಮ

ಚಾಲಕ ವೇಣುಗೋಪಾಲ್ ಮೇಲೆ ಹಲ್ಲೆ:

ದುಷ್ಕರ್ಮಿಗಳು ಚಾಲಕ ವೇಣುಗೋಪಾಲ್ ತೀವ್ರ ವಾಗ್ವಾದ ಮಾಡುತ್ತಿದ್ದನ್ನು ಕಂಡು ಪಿಎಸ್‌ಐ ನಾಗಮ್ಮ ತಮ್ಮ ಮೊಬೈಲ್‌ನಲ್ಲಿ ದೃಶ್ಯಗಳನ್ನು ಸೆರೆಹಿಡಿಯಲು ಮುಂದಾದಾಗ, ನಾಗೇಂದ್ರ ಎಂಬಾತ ಮೊಬೈಲ್ ಕಿತ್ತುಕೊಂಡು ಅವರನ್ನು ಕೈಗಳಿಂದ ತಳ್ಳಿ ಧಮ್ಕಿ ಹಾಕಿದ್ದಾನೆ. ಉಳಿದ ಐವರು ಸಹಾ ಚಾಲಕ ವೇಣುಗೋಪಾಲ್ ಮೇಲೆಯೂ ಹಲ್ಲೆಗೆ ಯತ್ನಿಸಿದ್ದಾನೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರ: ಗಂಡು ದೆವ್ವದ ಕಾಟಕ್ಕೆ ಬೇಸತ್ತು ವಿಚಿತ್ರವಾಗಿ ವರ್ತಿಸಿ ಸಾವು ಕಂಡ ಮಹಿಳೆ!

Source link

Leave a Reply

Your email address will not be published. Required fields are marked *