Headlines

ಇರಾನ್‌ಗೆ ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಕುಸಿದ ಮಾರುಕಟ್ಟೆ: ಸೆನ್ಸೆಕ್ಸ್ 950, ನಿಫ್ಟಿ 288 ಅಂಕ ಕುಸಿತ! | Indian Market Falls As Trump Issues Last Warning To Iran Today Rav

ಇರಾನ್‌ಗೆ ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಕುಸಿದ ಮಾರುಕಟ್ಟೆ: ಸೆನ್ಸೆಕ್ಸ್ 950, ನಿಫ್ಟಿ 288 ಅಂಕ ಕುಸಿತ! | Indian Market Falls As Trump Issues Last Warning To Iran Today Rav



ಇರಾನ್‌ಗೆ ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಕುಸಿದ ಮಾರುಕಟ್ಟೆ: ಸೆನ್ಸೆಕ್ಸ್ 950, ನಿಫ್ಟಿ 288 ಅಂಕ ಕುಸಿತ! | Indian Market Falls As Trump Issues Last Warning To Iran Today Rav

ಮಧ್ಯಪ್ರಾಚ್ಯದ ಯುದ್ಧದ ಭೀತಿಯಿಂದಾಗಿ ಭಾರತೀಯ ಷೇರು ಮಾರುಕಟ್ಟೆ ಮಂಗಳವಾರ ತೀವ್ರ ಕುಸಿತ ಕಂಡಿದೆ. ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಎಚ್ಚರಿಕೆಯಿಂದ ಹೂಡಿಕೆದಾರರು ಆತಂಕಗೊಂಡು ಷೇರುಗಳನ್ನು ಮಾರಾಟ ಮಾಡಿದ್ದರಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ಭಾರೀ ನಷ್ಟ ಅನುಭವಿಸಿದವು

ಮುಂಬೈ: ಮಧ್ಯಪ್ರಾಚ್ಯ ಯುದ್ಧದ ಪರಿಣಾಮದಿಂದ ಜಾಗತಿಕ ರಾಜಕೀಯ ವಿದ್ಯಮಾನಗಳು ತೀವ್ರವಾಗಿ ಬದಲಾಗುತ್ತಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ನೀಡಿರುವ ಫೈನಲ್ ವಾರ್ನಿಂಗ್‌ನಿಂದಾಗಿ ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಮಂಗಳವಾರದ ವಹಿವಾಟಿನಲ್ಲಿ ಹೂಡಿಕೆದಾರರು ಪ್ಯಾನಿಕ್ ಆಗಿ ಸೆಲ್ಲಿಂಗ್ ಮಾಡಲು ಮುಂದಾದ ಕಾರಣ ಬಿಎಸ್‌ಇ ಸೆನ್ಸೆಕ್ಸ್ 950 ಪಾಯಿಂಟ್‌ಗಳ ಕುಸಿತ ಕಂಡು 73,150 ಮಟ್ಟಕ್ಕೆ ತಲುಪಿತು. ಅದೇ ರೀತಿ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ 288 ಅಂಕ ಕಳೆದುಕೊಂಡು 22,680 ಕ್ಕೆ ಕುಸಿಯಿತು. ಬ್ಯಾಂಕಿಂಗ್ ವಲಯದಲ್ಲೂ ಭಾರೀ ಹಿನ್ನಡೆಯಾಗಿದ್ದು, ಬ್ಯಾಂಕ್ ನಿಫ್ಟಿ ಶೇ. 1.11 ರಷ್ಟು ಕುಸಿದು 48,900 ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.

ಮಾರುಕಟ್ಟೆ ಕುಸಿಯಲು ಕಾರಣವೇನು?

ವಾರದ ಎರಡನೇ ದಿನದ ವಹಿವಾಟು ಆರಂಭದಲ್ಲೇ ಮಾರುಕಟ್ಟೆ ನಕಾರಾತ್ಮಕವಾಗಿದೆ. ಹಾರ್ಮುಜ್ ಜಲಸಂಧಿಯನ್ನು ತೆರೆಯಲು ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಅಂತಿಮ ಗಡುವು ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಇಂದು ರಾತ್ರಿಯೊಳಗೆ ಈ ಜಲಮಾರ್ಗವನ್ನು ಮುಕ್ತಗೊಳಿಸದಿದ್ದರೆ ಒಂದೇ ರಾತ್ರಿಯಲ್ಲಿ ಇರಾನ್ ಫಿನಿಶ್ ಮಾಡುವುದಾಗಿ ಟ್ರಂಪ್ ಬೆದರಿಕೆ ಹಾಕಿದ್ದಾನೆ. ಅಮೆರಿಕದ ಈ ಕಠಿಣ ಕ್ರಮದ ಎಚ್ಚರಿಕೆ ನೀಡಿರುವುದು ಜಾಗತಿಕವಾಗಿ ಮತ್ತೊಂದು ಭೀಕರ ಯುದ್ಧದ ಭೀತಿಯನ್ನು ಸೃಷ್ಟಿಸಿದೆ. ಈ ಅನಿಶ್ಚಿತತೆಯಿಂದಾಗಿ ಆರಂಭದಲ್ಲೇ ಸೆನ್ಸೆಕ್ಸ್ 700 ಅಂಕಗಳ ಕುಸಿತದೊಂದಿಗೆ ವಹಿವಾಟು ಆರಂಭಿಸಿತ್ತು.

ಇರಾನ್‌ಗೆ ಟ್ರಂಪ್ ಫೈನಲ್ ವಾರ್ನಿಂಗ್:

ಇರಾನ್ ವಶದಲ್ಲಿರುವ ಹಾರ್ಮುಜ್ ಜಲಸಂಧಿಯನ್ನು ಇಂದು ರಾತ್ರಿ 8 ಗಂಟೆಯೊಳಗೆ (ಅಮೆರಿಕ ಕಾಲಮಾನ) ಸಾರ್ವಜನಿಕ ವ್ಯಾಪಾರಕ್ಕೆ ಮುಕ್ತಗೊಳಿಸಬೇಕು ಎಂದು ಟ್ರಂಪ್ ಆದೇಶಿಸಿದ್ದಾರೆ. ಒಂದು ವೇಳೆ ಈ ಗಡುವು ಮೀರಿದರೆ ಇರಾನ್ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ಅವರ ಹೇಳಿಕೆಯು ಜಾಗತಿಕ ಮಾರುಕಟ್ಟೆಯನ್ನು ಬೆಚ್ಚಿಬೀಳಿಸಿದೆ. ಹೊಸ ಸಮರ ಆರಂಭವಾಗಬಹುದು ಎನ್ನುವ ಮುನ್ಸೂಚನೆಯಿಂದ ಹೂಡಿಕೆದಾರರು ತಮ್ಮ ಷೇರುಗಳನ್ನು ಮಾರಾಟ ಮಾಡಿ ಸುರಕ್ಷಿತ ಹೂಡಿಕೆಯತ್ತ ಮುಖ ಮಾಡುತ್ತಿದ್ದಾರೆ.

ಏಷ್ಯನ್ ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ

ಭಾರತೀಯ ಮಾರುಕಟ್ಟೆಯಲ್ಲಿ ಭಾರೀ ಕುಸಿತ ಕಂಡುಬಂದರೂ, ಮಂಗಳವಾರ ಬೆಳಿಗ್ಗೆ ಏಷ್ಯಾದ ಇತರ ಮಾರುಕಟ್ಟೆಗಳಲ್ಲಿ ಸ್ಥಿರತೆ ಕಂಡುಬಂದಿತ್ತು. ಜಪಾನ್‌ನ ನಿಕ್ಕಿ 225 ಮತ್ತು ಟೋಪಿಕ್ಸ್ ಸೂಚ್ಯಂಕಗಳು ಕ್ರಮವಾಗಿ ಶೇ. 0.35 ಮತ್ತು ಶೇ. 0.62 ರಷ್ಟು ಏರಿಕೆ ಕಂಡವು. ದಕ್ಷಿಣ ಕೊರಿಯಾದ ಕೋಸ್ಪಿ ಸೂಚ್ಯಂಕ ಕೂಡ ಶೇ. 1.5 ರಷ್ಟು ಚೇತರಿಕೆ ದಾಖಲಿಸಿತು. ಆದರೆ, ಈಸ್ಟರ್ ರಜಾದಿನದ ಹಿನ್ನೆಲೆಯಲ್ಲಿ ಹಾಂಗ್ ಕಾಂಗ್ ಮಾರುಕಟ್ಟೆಗಳು ಇಂದು ವಹಿವಾಟು ನಡೆಸಲಿಲ್ಲ.

ವಾಲ್ ಸ್ಟ್ರೀಟ್ ಫ್ಯೂಚರ್ಸ್‌ನಲ್ಲಿ ಇಳಿಕೆ: ಅಮೆರಿಕದ ಮೇಲೂ ಯುದ್ಧದ ನೆರಳು

ಟ್ರಂಪ್ ಅವರ ಎಚ್ಚರಿಕೆಯ ನಂತರ ಅಮೆರಿಕದ ಮಾರುಕಟ್ಟೆಗಳ ಭವಿಷ್ಯದ ಸೂಚ್ಯಂಕಗಳು (Futures) ಕುಸಿತ ಕಂಡಿವೆ. ಎಸ್‌ ಅಂಡ್ ಪಿ 500 ಮತ್ತು ನಾಸ್ಡಾಕ್ 100 ಸೂಚ್ಯಂಕಗಳು ಇಳಿಮುಖ ಹಾದಿಯಲ್ಲಿವೆ. ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುವ ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ಅಡ್ಡಿಯಾದಲ್ಲಿ ಅದು ಜಾಗತಿಕ ಆರ್ಥಿಕತೆಯ ಮೇಲೆ ಹೊಡೆತ ನೀಡಲಿದೆ ಎಂಬ ಭಯ ವಾಲ್ ಸ್ಟ್ರೀಟ್ ಹೂಡಿಕೆದಾರರನ್ನು ಕಾಡುತ್ತಿದೆ.

ಮತ್ತೆ ಗಗನಕ್ಕೇರಿದ ಕಚ್ಚಾ ತೈಲದ ಬೆಲೆ;ಭಾರತಕ್ಕೆ ಹೆಚ್ಚುವರಿ ಹೊರೆ

ಯುದ್ಧದ ಭೀತಿಯಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಗಗನಕ್ಕೇರುತ್ತಿದೆ. ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ $110 ದಾಟಿದ್ದರೆ, ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ (WTI) ಬೆಲೆ $113.47 ಕ್ಕೆ ಏರಿಕೆಯಾಗಿದೆ. ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು ಎಂಬ ಕಳವಳದಿಂದಾಗಿ ಬೆಲೆಗಳು ಶೇ. 1 ರಷ್ಟು ಏರಿಕೆ ಕಂಡಿದ್ದು, ಇದು ಭಾರತದಂತಹ ಆಮದು ಅವಲಂಬಿತ ದೇಶಗಳಿಗೆ ಆರ್ಥಿಕ ಸವಾಲಾಗಿ ಪರಿಣಮಿಸುವ ಸಾಧ್ಯತೆಯಿದೆ.



Source link

Leave a Reply

Your email address will not be published. Required fields are marked *