Headlines

Manipur Attack: ಮಣಿಪುರದಲ್ಲಿ ಮನೆ ಮೇಲೆ ಬಾಂಬ್ ದಾಳಿ; 6 ತಿಂಗಳ ಕಂದಮ್ಮ, 5 ವರ್ಷದ ಬಾಲಕ ಬಲಿ, ತಾಯಿ ಸ್ಥಿತಿ ಗಂಭೀರ | Manipur Violence Two Children Killed In Brutal Bomb Attack On Residence Mother Critical

Manipur Attack ಮಣಿಪುರದಲ್ಲಿ ಮಂಗಳವಾರ ಮುಂಜಾನೆ ಮನೆಯೊಂದರ ಮೇಲೆ ದುಷ್ಕರ್ಮಿಗಳು ಬಾಂಬ್ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ತಾಯಿ ಜೊತೆ ಮಲಗಿದ್ದ 5 ವರ್ಷದ ಬಾಲಕ ಮತ್ತು 6 ತಿಂಗಳ ಹೆಣ್ಣು ಮಗು ಸಾವನ್ನಪ್ಪಿವೆ. ತಾಯಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ದೆಹಲಿ (ಏ.7): ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಮಂಗಳವಾರ ಮುಂಜಾನೆ ಮನೆಯೊಂದರ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ತಾಯಿ ಜೊತೆ ನಿದ್ದೆ ಮಾಡುತ್ತಿದ್ದ 5 ವರ್ಷದ ಬಾಲಕ ಮತ್ತು ಕೇವಲ 6 ತಿಂಗಳ ಹೆಣ್ಣು ಮಗು ಈ ದುರಂತದಲ್ಲಿ ಪ್ರಾಣ ಕಳೆದುಕೊಂಡಿವೆ. ಮಕ್ಕಳ ತಾಯಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬಿಷ್ಣುಪುರ್ ಜಿಲ್ಲೆಯ ಮೊಯಿರಾಂಗ್ ಟ್ರೋಂಗ್ಲಾವೊಬಿಯಲ್ಲಿ ಈ ಘಟನೆ ನಡೆದಿದೆ. ಇದು ಜನವಸತಿ ಪ್ರದೇಶವಾಗಿದ್ದು, ಗುಡ್ಡಗಾಡು ಪ್ರದೇಶವಾದ ಚುರಾಚಂದ್‌ಪುರ್‌ಗೆ ಹತ್ತಿರದಲ್ಲೇ ಇರುವ ತಗ್ಗು ಪ್ರದೇಶವಾಗಿದೆ. 

ಇದನ್ನೂ ಓದಿ: ಮಣಿಪುರ: ಕುಕಿ ಸಮುದಾಯದ ಪ್ರೇಯಸಿ ನೋಡಲು ಬಂದ ಮೈಥಿ ಸಮುದಾಯದ ಯುವಕನ ಕೊಲೆ

ಈ ಪ್ರದೇಶದಲ್ಲಿ ಈ ಹಿಂದೆಯೂ ಇಂತಹ ದಾಳಿಗಳು ನಡೆದಿದ್ದವು. 2023ರಿಂದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷದ ಮುಂದುವರಿದ ಭಾಗವೇ ಈ ದಾಳಿ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಘಟನೆಯ ನಂತರ, ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.

Source link

Leave a Reply

Your email address will not be published. Required fields are marked *