
ನಾವು ಗ್ಯಾರಂಟಿಗಳನ್ನು ಏನು ಆಶ್ವಾಸನೆ ಕೊಟ್ಟಿದ್ದೆವೋ ಅದನ್ನು ನಾವು ಬಹಳ ಎಫೆಕ್ಟಿವ್ ಆಗಿ ಇಂಪ್ಲಿಮೆಂಟ್ ಕೂಡ ಮಾಡಿದ್ದೇವೆ. ಎರಡೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ತುಮಕೂರು (ಏ.07): ಕಾಂಗ್ರೆಸ್ಗೆ ಅದೃಶ್ಯ ಮತದಾರರಿದ್ದು ಎರಡೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷದ ಜೊತೆಗೆ ನಿಲ್ಲುವವರು ಎಲ್ಲರೂ ಬಡವರು. ಯಾವತ್ತು ಕೂಡ ಉಪಕಾರ ಸ್ಮರಣೆ ಇಟ್ಟುಕೊಂಡವರು. ನಾವು ಗ್ಯಾರಂಟಿಗಳನ್ನು ಏನು ಆಶ್ವಾಸನೆ ಕೊಟ್ಟಿದ್ದೆವೋ ಅದನ್ನು ನಾವು ಬಹಳ ಎಫೆಕ್ಟಿವ್ ಆಗಿ ಇಂಪ್ಲಿಮೆಂಟ್ ಕೂಡ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಎರಡು ಕಡೆನೂ ನಾವು ಗೆಲ್ಲುತ್ತೇವೆ ಎಂದರು.
ಜನರ ಮನಸ್ಸಿನಲ್ಲಿ ನಾವಿದ್ದೇವೆ, ಕಾಂಗ್ರೆಸ್ ಪಕ್ಷ ಸಿದ್ದರಾಮಯ್ಯನವರು ಇದ್ದಾರೆ ಎಂದರು. ಒಳಮೀಸಲಾತಿ ಒಂದು ರೀತಿನಲ್ಲಿ ಗೊಂದಲದ ಗೂಡಾಗಿದೆ. ಯಾರೊಬ್ಬರು ಕೂಡ ಅದರಿಂದ ಸಮಾಧಾನ ಪಟ್ಟಂಗೆ ಅನ್ನಿಸುತ್ತಿಲ್ಲ ಲೆಫ್ಟ್ ಆಗಲಿ, ರೈಟ್ ಆಗಲಿ ಅದರ್ಸ್ ಆಗಲಿ ಇನ್ನೊಬ್ಬರಾಗಲಿ ಗೊಂದಲ ಇದೆ ಎಂದರು. ಇನ್ನೆರೆಡು ವರ್ಷ ನಾನೇ ಸಿಎಂ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅಸೆಂಬ್ಲಿಯಲ್ಲೇ ಇನ್ನೆರೆಡು ಬಜೆಟ್ ಅನ್ನು ಹೈ ಕಮಾಂಡ್ ಒಪ್ಪಿದರೆ ಮಾಡುತ್ತೀನಿ ಅಂತ ಹೇಳಿದ್ದಾರೆ.
ಜನ ಕೂಡ ನಿರೀಕ್ಷೆ ಮಾಡಿದ್ದಾರೆ. ಹೈ ಕಮಾಂಡ್ ಆ ನಿರೀಕ್ಷೆಗೆ ಗೌರವ ಕೊಡುತ್ತಾರೆ ಅಂತ ನಾನು ಅಂದುಕೊಳ್ಳುತ್ತೇನೆ ಎಂದರು. ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮಾಡಬೇಕು ಅನ್ನುವುದು ಮೊದಲಿಂದಲೂ ನನ್ನ ವಾದ. ಗ್ರಾಮ ಪಂಚಾಯಿತಿ ಇರಲಿ, ಮುನ್ಸಿಪಾಲಿಟಿಗಳು ಇರಲಿ, ಕಾರ್ಪೊರೇಷನ್ ಇರಲಿ, ಜಿಲ್ಲಾ ಪಂಚಾಯಿತಿ ಇರಲಿ, ತಾಲೂಕು ಪಂಚಾಯಿತಿ ಇರಲಿ. ಯಾವತ್ತೂ ಕೂಡ ಜನಪ್ರತಿನಿಧಿಗಳು ಇದ್ದರೆ ಆ ಅಧಿಕಾರ ವಿಕೇಂದ್ರೀಕರಣಕ್ಕೆ ಅರ್ಥ ಬರುತ್ತದೆ ಎಂದರು.
ಯೋಚನೆ ಮಾಡುವುದಿಲ್ಲ
ಜನಪ್ರತಿನಿಧಿಗಳು ಇಲ್ಲದೆ ಬರಿ ಅಧಿಕಾರಿಗಳ ಕಡೆಯಿಂದ ನಾವು ಸರ್ಕಾರ ನಡೆಸುತ್ತೇವೆ. ಅಧಿಕಾರಿಗಳ ಮೂಲಕ ಸ್ಥಳೀಯ ಸಂಸ್ಥೆಗಳು ನಡೆಸುತ್ತೇವೆ ಅನ್ನೋ ಪ್ರಯತ್ನ ಸರಿಯಲ್ಲ ಎಂದರು. ಕ್ಯಾಬಿನೆಟ್ ವಿಸ್ತರಣೆ ಮಾಡಬಹುದು ಮಾಡದೆ ಇರಬಹುದು. ಚುನಾವಣಾ ಫಲಿತಾಂಶಗಳು ಬಂದ ನಂತರ ವಿಸ್ತರಣೆಯಾಗಬಹುದು ಎಂದ ಅವರು ನನಗೆ ಮಂತ್ರಿ ಸ್ಥಾನ ಬಂದರೆ ಬರ್ತದೆ, ಹೋದರೆ ಹೋಗುತ್ತದೆ. ಅದಕ್ಕೆ ನಾವೇನು ಯೋಚನೆ ಮಾಡುವುದಿಲ್ಲ ಎಂದರು.
ಪವರ್ ಇಸ್ ಪಾಯಿಸನ್ ಅಂತ ಒಂದು ಗಾದೆ ಕೇಳಿದ್ದೀನಿ. ಪಾಯಿಸನ್ ಅನ್ನು ಸರಿಯಾಗಿ ಬಳಸಿದರೆ ಔಷಧಿನೂ ಮಾಡಿಕೊಳ್ಳಬಹುದು. ಈಗ ಕ್ಯಾನ್ಸರ್ ಗೆ ಪಾಯಿಸನ್ ಇಂದಾನೆ ಔಷಧಿ ಮಾಡೋದು ಎಂದ ಅವರು ಹಾಗಾಗಿ ಆ ಪವರ್ ಅನ್ನು ಪಾಯಿಸನ್. ಅದನ್ನು ಬಳಸುದರ ಮೇಲೆ ಅದರ ಪರಿಣಾಮ, ದುಷ್ಪರಿಣಾಮ, ಸತ್ಪರಿಣಾಮಗಳು ಗೊತ್ತಾಗುತ್ತದೆ ಎಂದರು.