
‘ಪುಷ್ಪ’ ಮತ್ತು ‘ಪುಷ್ಪ 2’ ಸಿನಿಮಾದ ಬಳಿಕ ಅಲ್ಲು ಅರ್ಜುನ್ (ಅಲ್ಲು ಅರ್ಜುನ್) ಎದುರು ಹಲವಾರು ಅವಕಾಶಗಳು, ಆಯ್ಕೆಗಳು ಇದ್ದವು ಆದರೆ ಅರ್ಜುನ್ ಅವರು ತಮಿಳಿನ ಅಟ್ಲಿ ಜೊತೆಗೆ ಸಿನಿಮಾ ಮಾಡಲು ಮುಂದಾದರು. ಆರಂಭದಲ್ಲಿ ಅಲ್ಲು ಅರ್ಜುನ್ ಅಭಿಮಾನಿಗಳು ತಮ್ಮ ಮೆಚ್ಚಿನ ನಟನ ನಿರ್ಣಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಅಟ್ಲಿ, ಅಲ್ಲು ಅರ್ಜುನ್ಗಾಗಿ ಹಾಲಿವುಡ್ ಮಾದರಿ ಕಥೆ ಹೆಣೆದ, ಸಿನಿಮಾ ಹಾಲಿವುಡ್ನ ಹಲವು ಖ್ಯಾತನಾಮ ವಿಎಫ್ಎಕ್ಸ್ ಸಂಸ್ಥೆಗಳಲ್ಲಿ ಕೈಜೋಡಿಸಿದ್ದು, ಭಾರತೀಯ ಚಿತ್ರರಂಗದ ಪ್ರತಿಭಾವಂತ ನಟ-ನಟಿಯರ ಸಿನಿಮಾ ತಂಡಕ್ಕೆ ಸೇರಿದೆ. ಸಿನಿಮಾದ ಅಪ್ಡೇಟ್ ಒಂದು ಹೊರಬಿದ್ದಿದ್ದು, ಅರ್ಜುನ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಸಿನಿಮಾದ ಟೈಟಲ್ ಪೋಸ್ಟರ್ ನಾಳೆ ಅಂದರೆ ಏಪ್ರಿಲ್ 08ಕ್ಕೆ ಬಿಡುಗಡೆಯಾಗಲಿದೆ. ಸಿನಿಮಾದ ಪೋಸ್ಟರ್ ಬಿಡುಗಡೆ ಸುದ್ದಿ ನೀಡುವ ಸಲುವಾಗಿ ಅಲ್ಲು ಅರ್ಜುನ್ ಸೇರಿದಂತೆ ಚಿತ್ರತಂಡ ಇಂದು (ಏಪ್ರಿಲ್ 07) ಪೋಸ್ಟರ್ ಒಂದನ್ನು ಹಂಚಿಕೊಂಡಿದೆ. ಪೋಸ್ಟರ್ನಲ್ಲಿ ರಾಕ್ಷಸನ ಬೃಹತ್ ಕೈ ಕಾಣುತ್ತಿದೆ. ದೈತ್ಯ ರಾಕ್ಷಸನ ಮುಂಗೈನ ಚಿತ್ರ ಇದಾಗಿದ್ದರೆ, ಬೆರಳ ತುದಿಗಿರುವ ಚೂಪಾದ ದೊಡ್ಡ ಉಗುರುಗಳು ಭೀತಿ ಮೂಡಿಸುವಂತಿವೆ.
ಇದನ್ನೂ ಓದಿ: ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಸಿಗಲಿದೆ ಸರ್ಪ್ರೈಸ್? ಹೊಸ ಟೈಟಲ್ ಸಿನಿಮಾದ ಮೇಲೆ ಕಣ್ಣು
ಅಟ್ಲಿ ಮತ್ತು ಅಲ್ಲು ಅರ್ಜುನ್ ಅವರ ಈ ಸಿನಿಮಾ ಹಾಲಿವುಡ್ ನ ‘ಗಾರ್ಡಿಯನ್ಸ್ ಆಫ್ ದಿ ಗ್ಯಾಲೆಕ್ಸಿ’ ಮಾದರಿಯ ಕತೆಯನ್ನು ಹೊಂದಿರಲಿದೆ. ಸಿನಿಮಾದ ಕತೆ ನಡೆಯುವುದು ಭೂಮಿಯಲ್ಲಿ ಅಲ್ಲವಂತೆ ಬೇರೆ ಯಾವುದೋ ಲೋಕದಲ್ಲಂತೆ. ಅಲ್ಲಿ ಅತ್ಯಾಧುನಿಕ ವಾಹನಗಳು, ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಚಿತ್ರ, ವಿಚಿತ್ರ ಆಕಾರದ ದೈತ್ಯರು, ಪ್ರಾಣಿಗಳು ಇರಲಿ. ಇವುಗಳ ನಡುವೆ ಮನುಷ್ಯರು ಅಸ್ಥಿತ್ವಕ್ಕಾಗಿ ಹೋರಾಡುವ ಕಥೆ ಈ ಸಿನಿಮಾ ಸೇರಿದೆಯಂತೆ.
ಸಿನಿಮಾಕ್ಕಾಗಿ ಅಟ್ಲಿ, ಹಾಲಿವುಡ್ನ ಹಲವು ಪ್ರಸಿದ್ಧ ವಿಎಫ್ಎಕ್ಸ್ ಸಂಸ್ಥೆಗಳು, ಜನಪ್ರಿಯ ಸ್ಟುಡಿಯೋಗಳ ಜೊತೆಗೆ ಕೈಜೋಡಿಸಿದ್ದಾರೆ. ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಸಹ ಇದ್ದು, ಈ ಸಿನಿಮಾದಲ್ಲಿ ಅವರು ವಿಲನ್ ಆಗಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಸನ್ ನೆಟ್ ವರ್ಕ್ಸ್ ನ ಕಲಾನಿಧಿ ಮಾರನ್ ಅವರು ಬಂಡವಾಳ ಹೂಡಿದ್ದಾರೆ. ಇದು ಅವರ ಈ ಜೊತೆಗೆ ಅತಿ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ