
ಬೆಂಗಳೂರು, ಏಪ್ರಿಲ್ 07: ಪೊಲೀಸರ ಹದ್ದಿನ ಕಣ್ಣಿನ ನಡುವೆಯೂ ರಾಜ್ಯದಲ್ಲಿ ಡ್ರಗ್ಸ್ ಹಾವಳಿ ಮುಂದುವರಿದಿದೆ. ಖಾಕಿ ಚಾಪೆ ಕೆಳಗೆ ತೂರಿದರೆ ದಂಧೆಕೋರರು ರಂಗೋಲಿ ಕೆಳಗೆ ನುಗ್ಗುವ ಕೆಲಸ ಮಾಡುತ್ತಿದ್ದಾರೆ. ಈ ನಡುವೆ ಡ್ರಗ್ಸ್ ಪೆಡ್ಲರ್ಗಳಿಗೆ ಬೆಂಗಳೂರು ಪೊಲೀಸರು ಭರ್ಜರಿ ಶಾಕ್ ಕೊಟ್ಟಿದ್ದಾರೆ. 12 ವರ್ಷಗಳಿಂದ ಡ್ರಗ್ಸ್ ಪೆಡ್ಲಿಂಗ್ ನಡೆಸುತ್ತಿದ್ದ ಆರೋಪಿಗಳು ವಿವಿಧ ಪ್ರಕರಣಗಳಲ್ಲಿ ಒಟ್ಟು ಐವರನ್ನು ಬಂಧಿಸಿದ್ದಾರೆ. ಆರೋಪಿ ಕೋಟ್ಯಾಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ನೈಜೀರಿಯಾ ಪ್ರಜೆಯ ಬಂಧನ
ಭಾರತೀಯ ಮಹಿಳೆ ಮದುವೆಯಾಗಿ 12 ವರ್ಷಗಳಿಂದ ಡ್ರಗ್ಸ್ ಪೆಡ್ಲಿಂಗ್ ನಡೆಸುತ್ತಿದ್ದ ನೈಜೀರಿಯಾ ಪ್ರಜೆ ಇಮ್ಯಾನ್ಯುಯಲ್ ಎಂಬಾತನನ್ನು ಬೆಂಗಳೂರಿನ ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. 2014ರಲ್ಲಿ ಬ್ಯುಸಿನೆಸ್ ವೀಸಾದಡಿ ಭಾರತಕ್ಕೆ ಬಂದಿದ್ದ ಇಮ್ಯಾನ್ಯುಯಲ್, ಬೆಂಗಳೂರಿಗೆ ಬಂದು ಇಲ್ಲಿಯ ಮಹಿಳೆಯನ್ನೇ ಮದುವೆ ಕೂಡ ಆಗಿದ್ದ. 4-5 ಮನೆಗಳನ್ನು ಬಾಡಿಗೆ ಪಡೆದು ಡ್ರಗ್ ಪೆಡ್ಲಿಂಗ್ ನಡೆಸ್ತಿದ್ದ ಈತ, ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ಸಬ್ ಪೆಡ್ಲರ್ ಗಳಿಗೆ ಡ್ರಗ್ ಮಾರಾಟ ಮಾಡ್ತಿದ್ದ. ಖಚಿತ ಮಾಹಿತಿ ಆಧಾರದ ಮೇಲೆ ಹೆಬ್ಬಗೋಡಿ ಆರೋಪಿಯನ್ನು ಬಂಧಿಸಿ ಎಮ್.ಡಿ.ಎಂ.ಎ, ಎಲ್.ಎಸ್.ಡಿ, ಮಾದರಿಯ ಸಿಂಥೆಟಿಕ್ ಡ್ರಗ್ಸ್ ಸೇರಿ 14 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಸೀಜ್ ಮಾಡಲಾಗಿದೆ. ಡ್ರಗ್ಸ್ ಸೀಜ್ ಪ್ರಕರಣದಲ್ಲಿ ಇನ್ನುಳಿದವರಿಗಾಗಿ ಶೋಧ ಮುಂದುವರಿದಿದೆ.
ಇದನ್ನೂ ಓದಿ: “ನೀವು ವೇಶ್ಯಾವಾಟಿಕೆ ನಡೆಸುತ್ತೀರಾ?”; ಮನೆಯಿಂದ ಹೊರಗೆ ಎಳೆದು ತಂದು ಮಹಿಳೆಯ ಮೇಲೆ ಅಮಾನವೀಯ ಹಲ್ಲೆ!
ಇಬ್ಬರು ಗಾಂಜಾ ಪೆಡ್ಲರ್‌ಗಳ ಬಂಧನ
ಯಲಹಂಕ ಉಪನಗರ ಪೊಲೀಸರು ಗಾಂಜಾ ಪೆಡ್ಲರ್‌ಗಳಾದ ಕೇರಳದ ಆದೇಶ(19), ಮೊಹಮ್ಮದ್ ನಿಶಾದ್(24) ಎಂಬವರನ್ನು ಬಂಧಿಸಿದ್ದಾರೆ. ಮೂರು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದ ಆರೋಪಿಗಳು, ಒಡಿಶಾದಿಂದ ಗಾಂಜಾ ತಂದು ಮಾರಾಟ ಮಾಡುತ್ತಿದ್ದರು. ಬಂಧಿತರಿಂದ 10 ಲಕ್ಷ 50 ಸಾವಿರ ಮೌಲ್ಯದ 21 ಕೆಜಿ ತೂಕದ ಗಾಂಜಾ ಜಪ್ತಿ ಮಾಡಲಾಗಿದ್ದು, ಸದ್ಯ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ.
ಆಟೋ ಡ್ರೈವಿಂಗ್ ನೆಪದಲ್ಲಿ ಗಾಂಜಾ ಪೆಡ್ಲಿಂಗ್
ಡೆಲಿವರಿ ಬಾಯ್, ಆಟೋ ಡ್ರೈವಿಂಗ್ ನೆಪದಲ್ಲಿ ಗಾಂಜಾ ಪೆಡ್ಲಿಂಗ್ ಆರೋಪಿಗಳನ್ನು ಪರಪ್ಪನ ಅಗ್ರಹಾರ ಪೊಲೀಸರು ಬಂಧಿಸಿದ್ದಾರೆ. ರಾಹುಲ್ ಮತ್ತು ಪ್ರೇಮ್ ಬಂಧಿತರಾಗಿದ್ದರೆ, ಇವರು ತಮಿಳುನಾಡಿನಿಂದ ಗಾಂಜಾ ತರಿಸಿ ಮಾರಾಟ ಮಾಡುತ್ತಿದ್ದಾರೆ. ರಾಹುಲ್ ಡೆಲಿವರಿ ಬಾಯ್ ಆಗಿದ್ರೆ, ಪ್ರೇಮ್ ಆಟೋ ಡ್ರೈವರ್ ಆಗಿದ್ದ. ಬಂಧಿತರಿಂದ 3 ಲಕ್ಷ ಮೌಲ್ಯದ 7 ಕೆಜಿ 500 ಗ್ರಾಂ ಗಾಂಜಾ ಸೀಜ್ ಮಾಡಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.