Headlines

Karna Serial ರೋಚಕ ಟ್ವಿಸ್ಸ್​: ಬಯಲಾಗೇ ಬಿಡ್ತು ಕರ್ಣನ ಜನ್ಮ ರಹಸ್ಯ! ತಿಪ್ಪೆಯಲ್ಲಿ ಸಿಕ್ಕ ಮಗು ಯಾರದ್ದು

Karna Serial ರೋಚಕ ಟ್ವಿಸ್ಸ್​: ಬಯಲಾಗೇ ಬಿಡ್ತು ಕರ್ಣನ ಜನ್ಮ ರಹಸ್ಯ! ತಿಪ್ಪೆಯಲ್ಲಿ ಸಿಕ್ಕ ಮಗು ಯಾರದ್ದು

Karna Serial ರೋಚಕ ಟ್ವಿಸ್ಸ್​: ಬಯಲಾಗೇ ಬಿಡ್ತು ಕರ್ಣನ ಜನ್ಮ ರಹಸ್ಯ! ತಿಪ್ಪೆಯಲ್ಲಿ ಸಿಕ್ಕ ಮಗು ಯಾರದ್ದು
ಕರ್ಣ ಸೀರಿಯಲ್ ಕುತೂಹಲಕಾರಿ ಘಟ್ಟ ತಲುಪಿದ್ದು, ತನ್ನೆಲ್ಲಾ ಸಂಕಷ್ಟಕ್ಕೆ ರಮೇಶ್ ಕಾರಣ ಎಂದು ತಿಳಿದ ಕರ್ಣ ಆತನನ್ನು ಕಾಡಿನಲ್ಲಿ ಬಿಟ್ಟು ಬರುತ್ತಾನೆ. ಇದೇ ವೇಳೆ, ಕರ್ಣನೇ ರಮೇಶ್‌ನ ಮಗ ಎಂಬ ಆಘಾತಕಾರಿ ಸತ್ಯವನ್ನು ನಯನತಾರಾ ಬಯಲು ಮಾಡುತ್ತಾಳೆ. ಇನ್ನೊಂದೆಡೆ, ನಿತ್ಯಾಳಿಗೆ ಕರ್ಣನ ಮೇಲೆ ಪ್ರೀತಿ ಮೂಡಿದೆ.
ಕರ್ಣ ಸೀರಿಯಲ್​ (Karna Serial) ಇದೀಗ ಕುತೂಹಲದ ಹಂತ ತಲುಪಿದೆ. ನಿಧಿ ಮತ್ತು ಕರ್ಣನನ್ನು ದೂರ ಮಾಡಲು ರಮೇಶ್​ ಇಲ್ಲಿಯವರೆಗೆ ಮಾಡಿದ ಪ್ಲ್ಯಾನ್​ ಎಲ್ಲವೂ ಸಕ್ಸಸ್​ ಆಗಿ ಹೋಗಿದೆ. ದೂರ ದೂರ ಇದ್ದು ನಿಧಿ ಮತ್ತು ಕರ್ಣ ವಿರಹ ವೇದನೆಯಿಂದ ಒದ್ದಾಡುತ್ತಿದ್ದಾರೆ.

ಆದರೆ ನಿಧಿಗೆ ಹೊಸ ಮನೆ ಕೊಟ್ಟು, ಅವರನ್ನು ಬೀದಿಗೆ ತಂದಿರುವುದು ರಮೇಶ್​ ಎಂದು ಕರ್ಣನಿಗೆ ತಿಳಿದಿದೆ. ಇದರ ಜೊತೆಗೆ, ಆಸ್ಪತ್ರೆಯಲ್ಲಿ ನಕಲಿ ಔಷಧ ಇಟ್ಟು ತನ್ನನ್ನು ಜೈಲಿಗೆ ಸೇರುವ ಹಾಗೆ ಮಾಡಿರುವ ಹಿಂದೆಯೂ ಆತನದ್ದೇ ಕೈವಾಡ ಇದೆ ಎನ್ನುವುದು ತಿಳಿದಿದೆ.

ಇದರ ನಡುವೆಯೇ, ಅತ್ತ ನಿಧಿ ಮತ್ತು ಶಾಂತಿಯನ್ನು ರಮೇಶ್​ನ ಕಿತಾಪತಿ ಮೇರೆಗೆ ಕಿಡ್​ನ್ಯಾಪ್​ ಮಾಡಲಾಗಿತ್ತು. ಈ ವಿಷಯ ಕರ್ಣನಿಗೆ ತಿಳಿದು ಅವರನ್ನು ರಕ್ಷಿಸಿದ್ದಾನೆ.

ಇನ್ನು ಸುಮ್ಮನೇ ಇರದ ಕರ್ಣ, ರಮೇಶ್​ನನ್ನು ಕರೆದುಕೊಂಡು ಕಾಡಿನ ಮಧ್ಯೆ ಹೋಗಿದ್ದಾನೆ. ನಿಮ್ಮೆಲ್ಲಾ ವಿಷಯವೂ ನನಗೆ ಗೊತ್ತಾಗಿದೆ. ಇನ್ನು ನಾನು ಆಡಿಸುತ್ತೇನೆ, ನೀವು ಆಡಬೇಕು ಎಂದಿರೋ ಕರ್ಣ, ಸುರಿಯುವ ಮಳೆಯ ನಡುವೆ ರಮೇಶ್​ನನ್ನು ಕಾಡಿನ ಮಧ್ಯೆ ಬಿಟ್ಟು ಬಂದಿದ್ದಾನೆ.

ಇಲ್ಲಿಯವರೆಗೆ ಕರ್ಣನನ್ನು ಅನಾಥ ಮಗು, ಡಸ್ಟ್​ಬಿನ್​ನಲ್ಲಿ ಸಿಕ್ಕ ಮಗು ಎಂದೇ ಹೇಳಲಾಗಿತ್ತು. ಆದರೆ ಈಗ ಅಸಲಿಯತ್ತನ್ನು ನಯನತಾರಾ ಬಯಲು ಮಾಡಿದ್ದಾಳೆ. ನೀನು ಇಂದು ಕಾಡಿನ ಮಧ್ಯೆ ನಿಲ್ಲುವುದಕ್ಕೆ ಕಾರಣ ನೀನು ಹೆತ್ತ ಮಗ ಕರ್ಣನೇ ಕಾರಣ ಎಂದಿದ್ದಾಳೆ. ಅಲ್ಲಿಗೆ ಕರ್ಣನ ಜನ್ಮ ರಹಸ್ಯ ಬಯಲಾಗಿದೆ.

ಕರ್ಣ ಅನಾಥ ಅಲ್ಲ. ಆತನ ನಿಜವಾದ ತಂದೆ ವಿಲನ್​ ರಮೇಶ್​ ಎನ್ನುವುದು ತಿಳಿದಿದೆ. ಆದರೆ ಈ ವಿಷಯ ಸದ್ಯ ಕರ್ಣನಿಗಾಗಲೀ, ರಮೇಶ್​ಗಾಗಲೀ ತಿಳಿದಿಲ್ಲ. ಇನ್ನು ಸೀರಿಯಲ್​ ಇನ್ನಷ್ಟು ಟ್ವಿಸ್ಟ್ ಪಡೆದುಕೊಳ್ಳಲಿದೆ.

ಅದೇ ಇನ್ನೊಂದೆಡೆ, ನಿತ್ಯಾಳಿಗೆ ಕರ್ಣ ತೋರಿಸ್ತಿರೋ ಪ್ರೀತಿಯಿಂದ ಆತನ ಮೇಲೆ ಲವ್​ ಶುರುವಾಗಿದೆ. ಪದೇ ಪದೇ ಕರ್ಣ ನಮ್ಮ ಮಗು ನಮ್ಮ ಮಗು ಅಂತಿರೋದ್ರಿಂದ ಎಲ್ಲೋ ಒಂದು ಕಡೆ ಕರ್ಣನಿಗೂ ತನ್ನ ಮೇಲೆ ಇಷ್ಟ ಇದೆ ಎಂದೇ ನಿತ್ಯಾ ಅಂದುಕೊಂಡಂತಿದೆ. ಇದು ಇನ್ಯಾವ ರೂಪ ಪಡೆಯುತ್ತದೆಯೋ ನೋಡಬೇಕಿದೆ.

Source link

Leave a Reply

Your email address will not be published. Required fields are marked *