ನಟಿ ರಶ್ಮಿಕಾ ಮಂದಣ್ಣ ಅವರು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಾಲಿವುಡ್ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ. ಅವರು ನಟಿಸುತ್ತಿರುವ ‘ಕಾಕ್ಟೇಲ್ 2’ ಸಿನಿಮಾದ ಮೇಲೆ ಭಾರಿ ನಿರೀಕ್ಷೆ ಇದೆ.
‘ಕಾಕ್ಟೇಲ್ 2’ ಸಿನಿಮಾದ ಹೊಸ ಪೋಸ್ಟರ್ಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಿಂದ ಹೊಸ ಹಾಡು ರಿಲೀಸ್ ಆಗಲಿದೆ.
ರಶ್ಮಿಕಾ ಮಂದಣ್ಣ ಜೊತೆ ಬಾಲಿವುಡ್ ಬೆಡಗಿ ಕೃತಿ ಸನನ್ ಕೂಡ ನಟಿಸುತ್ತಿದ್ದಾರೆ. ಅವರ ಪಾತ್ರ ಕೂಡ ಸಖತ್ ಬೋಲ್ಡ್ ಆಗಿದೆ. ಪಡ್ಡೆ ಹುಡುಗರ ಕಣ್ಣು ಕುಕ್ಕವ ರೀತಿಯಲ್ಲಿ ಕೃತಿ ಸನನ್ ಕಾಣಿಸಿಕೊಂಡಿದ್ದಾರೆ.
ಕೃತಿ ಸನನ್ ಅವರ ಅಭಿಮಾನಿಗಳಲ್ಲಿ ‘ಕಾಕ್ಟೇಲ್ 2’ ಸಿನಿಮಾ ಬಗ್ಗೆ ಕೌತುಕ ಮೂಡಿದೆ. ಈ ಸಿನಿಮಾದಲ್ಲಿ ಡಿಫರೆಂಟ್ ಕಥೆ ಇರಲಿದೆ ಎಂದು ಫ್ಯಾನ್ಸ್ ನಿರೀಕ್ಷಿಸಿದ್ದಾರೆ. ಜೂನ್ ತಿಂಗಳಿನಲ್ಲಿ ಈ ಸಿನಿಮಾ ತೆರೆಕಾಣಲಿದೆ.
ಶಾಹಿದ್ ಕಪೂರ್ ಅವರು ‘ಕಾಕ್ಟೇಲ್ 2’ ಸಿನಿಮಾಗೆ ಹೀರೋ. ಈ ಚಿತ್ರದಲ್ಲಿ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ, ಕೃತಿ ಸನನ್ ಅವರ ಪಾತ್ರಗಳ ನಡುವಿನ ಕಹಾನಿ ಏನು ಎಂದು ಫ್ಯಾನ್ಸ್ ಕಾದಿದ್ದಾರೆ.




