
ನಾವು ಮಾಡುವ ಎಲ್ಲಾ ಅಡುಗೆಯಲ್ಲೂ ಕರಿಬೇವಿನ ಎಲೆ (ಕರಿಬೇವು) ಅಥವಾ ಒಗ್ಗರಣೆ ಸೊಪ್ಪು ಹಾಕಿಯೇ ಹಾಕುತ್ತೇವೆ. ಅದಿಲ್ಲದಿದ್ದರೆ ಅಡುಗೆ ಆಗುವುದೇ ಇಲ್ಲ. ಕೇವಲ ರುಚಿಗಾಗಿ, ಅದರಲ್ಲಿರುವ ಔಷಧೀಯ ಗುಣಗಳ ಕಾರಣದಿಂದ ಆಯುರ್ವೇದದಲ್ಲಿ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಇಷ್ಟೆಲ್ಲಾ ಆರೋಗ್ಯಕರ ಗುಣಗಳಿದ್ದರೂ ಸಹ ಎಲೆ ಎಲ್ಲರಿಗೂ ಸೂಕ್ತವಲ್ಲ ಎಂಬುದು ನಿಮಗೆ ತಿಳಿದಿದೆಯೇ… ಹೌದು, ಕೆಲವು ಆರೋಗ್ಯ ಸಮಸ್ಯೆಗಳಿರುವವರು ಇದನ್ನು ಸೇವಿಸುವಾಗ ಜಾಗ್ರತೆ ವಹಿಸಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಈ ಕರಿಬೇವಿನ ಎಲೆ ಯಾರಿಗೆ ಒಳ್ಳೆಯದಲ್ಲ, ಯಾಕೆ ಸೇವನೆ ಮಾಡಬಾರದು, ಇದರಿಂದ ಯಾವ ರೀತಿಯ ಸಮಸ್ಯೆ ಉಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಈ ಕುರಿತು ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.
ಕಡಿಮೆ ಶುಗರ್ ಸಮಸ್ಯೆ ಇರುವವರಿಗೆ ಒಳ್ಳೆಯದಲ್ಲ:
ಕರಿಬೇವಿನ ಸೊಪ್ಪು ಸ್ವಾಭಾವಿಕವಾಗಿ ರಕ್ತದಲ್ಲಿನ ಗ್ಲೂಕೋಸ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಮಧುಮೇಹಿಗಳಿಗೆ ಲಾಭಕರವಾದರೂ, ಶುಗರ್ ಮಟ್ಟ ಕಡಿಮೆ ಇರುವವರು ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಹೈಪೋಗ್ಲೈಸೀಮಿಯಾ ಅಪಾಯ ಹೆಚ್ಚಾಗುತ್ತದೆ. ಇದರಿಂದ ತಲೆ ಸುತ್ತುವುದು, ದೌರ್ಬಲ್ಯ ಕಾಣಿಸಿಕೊಳ್ಳಬಹುದು.
ಆಹಾರ ಇರುವವರು ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು:
ಕೆಲವರಿಗೆ ಕೆಲವು ರೀತಿಯ ಸೊಪ್ಪು ಅಥವಾ ಮಸಾಲೆ ಸೇವನೆ ನಂತರ. ಹಾಗೆಯೇ ಕರಿಬೇವಿನ ಎಲೆ ಕೆಲವರಿಗೆ ಆಗುವುದಿಲ್ಲ. ಇದನ್ನು ತಿಂದ ನಂತರ ಚರ್ಮದಲ್ಲಿ ಉರಿ, ಊತ ಅಥವಾ ಉಸಿರಾಟಕ್ಕೆ ತೊಂದರೆ ಉಂಟಾಗುತ್ತದೆ. ಹಾಗಾದರೆ ಬಳಸುವುದನ್ನು ನಿಲ್ಲಿಸುವುದು ಒಳ್ಳೆಯದು.
ಇದನ್ನೂ ಓದಿ: ಪ್ರತಿನಿತ್ಯ ಈ ಎಲೆ ತಿನ್ನಿ ಹೃದಯದ ಆರೋಗ್ಯವೂ ಚೆನ್ನಾಗಿರುತ್ತೆ, ನಿಮ್ಮ ತ್ವಚೆಯೂ ಕಾಂತಿಯುತವಾಗುತ್ತೆ
ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ:
ಗರ್ಭಧಾರಣೆಯ ಸಮಯದಲ್ಲಿ ಹಾರ್ಮೋನ್ ಬದಲಾವಣೆಗಳಿಂದ ದೇಹವು ಹೆಚ್ಚು ಸಂವೇದನಾಶೀಲವಾಗಿರುತ್ತದೆ. ಕರಿಬೇವಿನ ಎಲೆಯ ರಸ ಅಥವಾ ಹೆಚ್ಚಿನ ಪ್ರಮಾಣದಲ್ಲಿ ಕರಿಬೇವಿನ ಸೊಪ್ಪಿನ ಪುಡಿಯನ್ನು ಸೇವಿಸುವುದರಿಂದ ಕೆಲವರಿಗೆ ವಾಂತಿ ಅಥವಾ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಮಿತವಾಗಿ ಸೇವಿಸುವುದು ಉತ್ತಮ.
ಜೀರ್ಣಕ್ರಿಯೆ ಸಮಸ್ಯೆಯಿರುವವರು:
ಕರಿಬೇವಿನ ಸೊಪ್ಪು ಸಾಮಾನ್ಯವಾಗಿ ಜೀರ್ಣಕ್ರಿಯೆಗೆ ಸಹಾಯಕವಾದರೂ, ಅಲ್ಸರ್ ಅಥವಾ ಗ್ಯಾಸ್ಟ್ರಿಕ್ ಸಮಸ್ಯೆ ಇರುವವರು ಹಸಿ ಎಲೆಯನ್ನು ನೇರವಾಗಿ ಜಗಿದು ತಿನ್ನುವುದರಿಂದ ಹೊಟ್ಟೆಯಲ್ಲಿ ಸಮಸ್ಯೆ ಉಂಟಾಗುತ್ತದೆ.
ಕಿಡ್ನಿ ಸಮಸ್ಯೆಯಿರುವವರು
ಕೆಲವು ಅಧ್ಯಯನಗಳ ಪ್ರಕಾರ, ಕಿಡ್ನಿ ಸೋಂಕು ಅಥವಾ ಡಯಾಲಿಸಿಸ್‌ನಲ್ಲಿರುವವರು ಯಾವುದೇ ಔಷಧೀಯ ಸಸ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯಬೇಕು. ಕರಿಬೇವಿನ ಎಲೆಯಲ್ಲಿರುವ ಕೆಲವು ಅಂಶಗಳ ಚಿಕಿತ್ಸೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ