ರಾವಣನ ಪಾತ್ರ ಮಾಡಲು ಒಪ್ಪಿದ್ದೇಕೆ ಯಶ್, ನಿರ್ದೇಶಕರು ಕೊಟ್ಟರು ಉತ್ತರ

ರಾವಣನ ಪಾತ್ರ ಮಾಡಲು ಒಪ್ಪಿದ್ದೇಕೆ ಯಶ್, ನಿರ್ದೇಶಕರು ಕೊಟ್ಟರು ಉತ್ತರ


ರಾವಣನ ಪಾತ್ರ ಮಾಡಲು ಒಪ್ಪಿದ್ದೇಕೆ ಯಶ್, ನಿರ್ದೇಶಕರು ಕೊಟ್ಟ ಉತ್ತರ

ರಣಬೀರ್ ಕಪೂರ್ (ರಣಬೀರ್ ಕಪೂರ್), ಯಶ್ ಮತ್ತು ಸಾಯಿ ಪಲ್ಲವಿ ನಟಿಸುತ್ತಿರುವ ‘ರಾಮಾಯಣ’ ಸಿನಿಮಾ ಭಾರತದ ಈ ವರ್ಷದ ಅತಿ ದೊಡ್ಡ ಬಜೆಟ್‌ನ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಎರಡು ಭಾಗಗಳ ನಿರ್ಮಾಣಕ್ಕೆ ಸುಮಾರು 4000 ಕೋಟಿ ಬಜೆಟ್ ಮೀಸಲಿಡಲಾಗಿದೆ. ಸಿನಿಮಾಕ್ಕೆ ವಿಶ್ವದರ್ಜೆಯ ವಿಎಫ್ ಎಕ್ಸ್ ತಂತ್ರಜ್ಞಾನವನ್ನು ಬಳಸಲಾಗಿದೆ. ಸಿನಿಮಾವನ್ನು ಐಮ್ಯಾಕ್ಸ್ ಗಾಗಿ ವಿಶೇಷವಾಗಿ ಚಿತ್ರೀಕರಿಸಲಾಗಿದೆ. ಸಿನಿಮಾದಲ್ಲಿ ರಣ್ ಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿಯೂ ರಾವಣನಾಗಿ ನಟ ಯಶ್ ನಟಿಸಿದ್ದಾರೆ. ಆದರೆ ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾದಿಂದ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಯಶ್, ರಾವಣನಂಥಹ ವಿಲನ್ ಪಾತ್ರದಲ್ಲಿ ನಟಿಸಲು ಒಪ್ಪಿದ್ದೇಕೆ? ನಿರ್ದೇಶಕ ನಿತೀಶ್ ತಿವಾರಿ ಉತ್ತರ ತಿಳಿಸಿದ್ದಾರೆ.

ಇತ್ತೀಚೆಗೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ನಿರ್ದೇಶಕ ನಿತೀಶ್ ತಿವಾರಿ, ‘ರಾವಣನದ್ದು ಬಹಳ ಸಂಕೀರ್ಣವಾದ ವ್ಯಕ್ತಿತ್ವ. ಆತನನ್ನು ಕೇವಲ ಒಬ್ಬ ‘ವಿಲನ್’ ಆಗಿಯೇ ನೋಡಲಾಗಿದೆ. ಆದರೆ ಆತ ಜ್ಞಾನವಂತನಾಗಿದ್ದಾಗ, ಸಂಗೀತಗಾರನಾಗಿದ್ದ, ವೈದ್ಯ ಜ್ಞಾನ ಪಾರಂಗತನಾಗಿದ್ದ, ಎಲ್ಲಾದರೂ ಮಿಗಿಲಾಗಿ ಆತ ಮಹಾನ್ ಶಿವಭಕ್ತನಾಗಿದ್ದ. ನಾವು ರಾವಣನನ್ನು ಒಬ್ಬ ದುಷ್ಟ ಎಂದು ಚಿತ್ರಿಸದೆ ಆತನ ಗುಣ-ಅವಗುಣ ಎರಡನ್ನು ತೋರಿಸಿದ್ದೇವೆ, ಇಂಥಹ ಪಾತ್ರಗಳನ್ನು ದೊಡ್ಡ ಸ್ಟಾರ್ ಡಮ್ ಮತ್ತು ಕಾನ್ಫಡೆನ್ಸ್ ಇರುವ ಯಶ್ ಅವರಿಂದಲೇ ಸಾಧ್ಯ’.

ಇದನ್ನೂ ಓದಿ:ಯಶ್ ‘ರಾಮಾಯಣ’ ಟೀಸರ್ ನೋಡಿ ಮಹೇಶ್ ಬಾಬು ಅಭಿಮಾನಿಗಳಿಗೆ ಹೊಟ್ಟೆಕಿಚ್ಚು?

ರಾವಣನ ಪಾತ್ರ ಸಂಕೀರ್ಣವಾಗಿರುವ ಕಾರಣ ಯಾರೆಂದು ಅವರು ಆ ಪಾತ್ರದಲ್ಲಿ ನಟಿಸುವುದು ನನಗೆ ಇಷ್ಟವಿರಲಿಲ್ಲ. ನಾವು ರಾವಣನನ್ನು ತೋರಿಸುವ ರೀತಿ ಇಷ್ಟವಾಗಿಯೇ ಯಶ್ ಅವರು ಆ ಪಾತ್ರವನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ, ಕತೆ ಕೇಳಿದ ಬಳಿಕ ರಣ್ ಬೀರ್ ಕಪೂರ್ ಅವರು ಸಹ, ‘ನಾವು ನೋಡಿರುವ ‘ರಾಮಾಯಣ’ಗಳಲ್ಲಿ ಅತ್ಯಂತ ಭಿನ್ನವಾಗಿ ರಾವಣನ ಪಾತ್ರವನ್ನು ಈ ಸಿನಿಮಾದಲ್ಲಿ ಪ್ರದರ್ಶಿಸಲಾಗಿದೆ’ ಎಂದು ಮೆಚ್ಚಿಕೊಂಡಿದ್ದಾಗಿಯೂ ಸಹ ನಿತೇಶ್ ತಿವಾರಿ ಹೇಳಿದ್ದಾರೆ.

ಯಶ್ ಅವರು ರಾವಣನ ಪಾತ್ರದಲ್ಲಿ ನಟಿಸುತ್ತಿರುವುದು ಮಾತ್ರವೇ ಅಲ್ಲದೆ ಸಿನಿಮಾದ ಸಹ ನಿರ್ಮಾಪಕ ಸಹ ಆಗಿದ್ದಾರೆ. ಸಿನಿಮಾದಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಸನ್ನಿ ಡಿಯೋಲ್ ಹನುಮಂತನಾಗಿ, ಕಾಜಲ್ ಅಗರ್ವಾಲ್ ಮಂಡೋದರಿಯಾಗಿ, ರವಿ ದುಬೆ ಲಕ್ಷ್ಮಣನಾಗಿ, ರಕುಲ್ ಪ್ರೀತ್ ಸಿಂಗ್ ಶೂರ್ಪಣಕಿ ಆಗಿ, ಲಾರಾ ದತ್ತ ಕೈಕೆಯಾಗಿ, ಕುನಾಲ್ ಕಪೂರ್ ಇಂದ್ರನ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾಕ್ಕೆ ಆಸ್ಕರ್ ವಿಜೇತರಾದ ಎಆರ್ ರೆಹಮಾನ್ ಮತ್ತು ಹಾನ್ಸ್ ಜೀಮರ್ ಅವರು ಸಂಗೀತ ನೀಡಿದ್ದಾರೆ. ಸಿನಿಮಾ ಇದೆ ದೀಪಾವಳಿಗೆ ಬಿಡುಗಡೆ ಆಗಲಿದೆ. ಸಿನಿಮಾದ ಎರಡನೇ ಭಾಗ ಮುಂದಿನ ವರ್ಷ ದೀಪಾವಳಿಗೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *