
ಆಪ್ಟಿಕಲ್ ಇಲ್ಯೂಷನ್ಆಪ್ಟಿಕಲ್ ಇಲ್ಯೂಷನ್) ಒಗಟಿನ ಆಟಗಳು ದೃಷ್ಟಿ ಮತ್ತು ಮೆದುಳಿಗೆ ಕೆಲಸ ನೀಡುತ್ತವೆ. ನಿಮ್ಮ ಕಣ್ಣಿನ ತೀಕ್ಷ್ಣತೆಗೆ ಸವಾಲೊಡ್ಡುವ ಆಟಗಳನ್ನು ನೀವು ಹಿಂದೆ ಆಡಬಹುದು. ನೀವು ಒಗಟು ಬಿಡಿಸಿರುವುದರಲ್ಲಿ ಸೋತಿರಬಹುದು. ಈಗ ನಿಮಗೆ ಸವಾಲೊಡ್ಡುವ ಒಗಟಿನ ಚಿತ್ರವೊಂದು ವೈರಲ್ ಆಗಿದೆ. ಈ ಎರಡು ಚಿತ್ರಗಳಲ್ಲಿ ಮೂರು ವ್ಯತ್ಯಾಸಗಳನ್ನು ಗುರುತಿಸುವ ಸವಾಲು ಇಲ್ಲಿದೆ. ಈ ವ್ಯತ್ಯಾಸಗಳನ್ನು ಗುರುತಿಸಿ ಜಾಣರು ಎನಿಸಿಕೊಳ್ಳಲು ಇದೊಂದು ಒಳ್ಳೆಯ ಸಮಯ. 35 ಸೆಕೆಂಡುಗಳೊಳಗೆ ಈ ಒಗಟು ಬಿಡಿಸಲು ಸಾಧ್ಯವೇ ಎಂದು ಒಮ್ಮೆ ನೋಡಿ.
ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಕಾಣಿಸಿದ್ದೇನು?
ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ತಲೆ ಕೆರೆದುಕೊಳ್ಳುವಂತೆ ಮಾಡುತ್ತವೆ. ಈ ಚಿತ್ರ ನೋಡಿದ ಮೇಲೂ ನಿಮ್ಮ ತಲೆಗೆ ಹುಳ ಬಿಟ್ಟಂತೆ ಆಗಿದ್ದೀರ. ಈ ಚಿತ್ರದ ಮೇಜಿನ ಮೇಲಿನ ತಟ್ಟೆಯಲ್ಲಿ ಹಣ್ಣುಗಳಿವೆ. ಸೇಬು ಹಣ್ಣು, ಮ್ಯಾಗ್, ಟೀ ಕಪ್ ಹಾಗೂ ಬೌಲ್ ಇದೆ. ಈ ಎರಡು ಚಿತ್ರಗಳು ನೋಡಲು ಒಂದೇ ರೀತಿ ಇದೆ. ಆದರೆ, ಈ ಎರಡು ಫೋಟೋಗಳ ನಡುವೆ ಮೂರು ಸಣ್ಣ ವ್ಯತ್ಯಾಸಗಳಿವೆ. ನೀವು ಎಚ್ಚರಿಕೆಯಿಂದ ನೋಡಿದರೆ ಮಾತ್ರ, ಆ ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯ. ನೀವು 35 ಸೆಕೆಂಡ್‌ಗಳೊಳಗೆ ಆ ವ್ಯತ್ಯಾಸಗಳನ್ನು ಗುರುತಿಸಿದರೆ ನೀವು ಖಚಿತವಾಗಿ ತಿಳಿದುಕೊಳ್ಳುತ್ತೀರಿ.
ಇದನ್ನೂ ಓದಿ: ಈ ಚಿತ್ರದಲ್ಲಿ ಅಡಗಿ ಕುಳಿತಿರುವ ಕಳ್ಳ ಬೆಕ್ಕನ್ನು ಕಂಡು ಹಿಡಿಯಬಲ್ಲರಾ
ಮೂರು ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಯಿತೇ?
ಈ ಟೇಬಲ್ ಮೇಲೆ ಇಟ್ಟಿರುವ ಹಣ್ಣುಗಳ ನಡುವಿನ ಮೂರು ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ. ನೂರರಲ್ಲಿ ಹತ್ತು ಜನರಿಗೆ ಮಾತ್ರ ಇಂತಹ ಈ ಟ್ರಿಕ್ಕಿ ಒಗಟು ಬಿಡಿಸಲು ಸಾಧ್ಯ. ಈ ಕೆಳಗಿನ ಚಿತ್ರಗಳಲ್ಲಿ ಮೂರು ವ್ಯತ್ಯಾಸಗಳನ್ನು ಕೆಂಪು ಬಣ್ಣದಲ್ಲಿ ಗುರುತಿಸಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ