ಚಪ್ರಿ ರೀತಿ ಬಟ್ಟೆ ಹಾಕಿಕೊಂಡು ಬಂದ ಅಕ್ಷಯ್ ಕುಮಾರ್; ಹಿಗ್ಗಾಮುಗ್ಗಾ ಟ್ರೋಲ್

ಚಪ್ರಿ ರೀತಿ ಬಟ್ಟೆ ಹಾಕಿಕೊಂಡು ಬಂದ ಅಕ್ಷಯ್ ಕುಮಾರ್; ಹಿಗ್ಗಾಮುಗ್ಗಾ ಟ್ರೋಲ್


ಚಪ್ರಿ ರೀತಿ ಬಟ್ಟೆ ಹಾಕಿಕೊಂಡು ಬಂದ ಅಕ್ಷಯ್ ಕುಮಾರ್; ಹಿಗ್ಗಾಮುಗ್ಗಾ ಟ್ರೋಲ್

ಬಾಲಿವುಡ್ ನಟ ಅಕ್ಷಯ್ ಕುಮಾರ್ (ಅಕ್ಷಯ್ ಕುಮಾರ್) ಅವರು ಯಾವಾಗಲೂ ತಮ್ಮ ಶಿಸ್ತು ಮತ್ತು ಸ್ಟೈಲಿಶ್ ಉಡುಗೆಯಿಂದಲೇ ಗುರುತಿಸಿಕೊಳ್ಳುವವರು. ಆದರೆ, ಇದೇ ಮೊದಲ ಬಾರಿಗೆ ಅವರ ಫ್ಯಾಷನ್ ಆಯ್ಕೆ ತಪ್ಪಾಗಿದೆ. ಚಪ್ರಿ ರೀತಿ ಬಟ್ಟೆ ಹಾಕಿಕೊಂಡು ಬಂದ ಜನರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್‌ಗೆ ಒಳಗಾಗಿದ್ದಾರೆ. ಏಪ್ರಿಲ್ 6 ರಂದು ‘ಭೂತ್ ಬಂಗ್ಲ’ (ಭೂತ್ ಬಾಂಗ್ಲಾ) ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಅಕ್ಷಯ್ ಕುಮಾರ್ ಅವರನ್ನು ಈ ರೀತಿ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ.

ಅಕ್ಷಯ್ ಕುಮಾರ್ ಅವರು ಸಂಪೂರ್ಣವಾಗಿ ಹರಿದ ನೀಲಿ ಶರ್ಟ್ ಧರಿಸಿದ್ದರು. ಅದರ ಮೇಲೆ ಹರಿದ ಬ್ಲೇಜರ್ ಮತ್ತು ಕುತ್ತಿಗೆಗೆ ಎರಡು ಟೈಗಳನ್ನು ಧರಿಸಿ ವೇದಿಕೆ ಏರಿದ್ದರು. ಅವರ ಈ ಲುಕ್ ನೋಡಿ ಅಲ್ಲಿದ್ದ ಎಲ್ಲರಿಗೂ ಅಚ್ಚರಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅಕ್ಷಯ್ ಕುಮಾರ್ ಅವರ ಈ ಅವತಾರದ ವಿಡಿಯೋ ಮತ್ತು ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿವೆ.

ತಮ್ಮ ಈ ವಿಚಿತ್ರ ಅವತಾರದ ಬಗ್ಗೆ ವೇದಿಕೆ ಅಕ್ಷಯ್ ಕುಮಾರ್ ಅವರೇ ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಹಾರರ್-ಕಾಮಿಡಿ ಥೀಮ್‌ಗೆ ತಕ್ಕಂತೆ ಈ ಲುಕ್ ಚಿತ್ರ ಮಾಡಲಾಗಿತ್ತು, ‘ಈ ಬಟ್ಟೆಯನ್ನು ದೆವ್ವಗಳು ಈ ರೀತಿ ಹರಿದಿವೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು. ಆದರೆ, ನೆಟ್ಟಿಗರು ಮಾತ್ರ ಇವರನ್ನು ಸುಮ್ಮನೆ ಬಿಟ್ಟಿಲ್ಲ. ಮನಸ್ಸಿಗೆ ಬಂದಂತೆ ಟ್ರೋಲ್ ಮಾಡಿದ್ದಾರೆ.

 

Instagram ನಲ್ಲಿ ಈ ಪೋಸ್ಟ್ ಅನ್ನು ವೀಕ್ಷಿಸಿ

 

ಬಾಲಿವುಡ್ ಸೊಸೈಟಿ (@bollywoodsocietyy) ಹಂಚಿಕೊಂಡ ಪೋಸ್ಟ್

ಅಕ್ಷಯ್ ಕುಮಾರ್ ಅವರ ಈ ಹೊಸ ಫ್ಯಾಷನ್ ಪ್ರಯೋಗ ನೋಡಿದ ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ‘ಅತಿಯಾದ ಹಣ ಮನುಷ್ಯನನ್ನು ಹುಚ್ಚನನ್ನಾಗಿ ಮಾಡುತ್ತಿದ್ದಾರೆ’ ಎಂದು ಒಬ್ಬರು ಟೀಕಿಸಿದ್ದಾರೆ. ‘ಇವರು ಒಬ್ಬ ಜೋಕರ್‌ ರೀತಿ ಕಾಣುತ್ತಿದ್ದಾರೆ’ ಎಂಬ ಕಮೆಂಟ್ ಕೂಡ ಬಂದಿದೆ. ‘ಬಡವರು ಹೀಗೆ ಮಾಡಿದರೆ ಚಪ್ರಿ ಅಂತಾರೆ. ಶ್ರೀಮಂತರು ಹಾಕಿದರೆ ಅದು ಫ್ಯಾಷನ್’ ಎಂಬ ಟೀಕೆಗಳೂ ಇವೆ.

ಇದನ್ನೂ ಓದಿ: ಸಿನಿಮಾ ಬಿಡುಗಡೆಗೂ ಮುನ್ನ ದೇವರ ಮೊರೆಹೋಗಿ, ‘ಇಡೀ ದೇಶಕ್ಕಾಗಿ ಪ್ರಾರ್ಥಿಸಿದೆ’ ಎಂದ ಅಕ್ಷಯ್ ಕುಮಾರ್

‘ಸಾಮಾನ್ಯವಾಗಿ ಅಕ್ಷಯ್ ಕುಮಾರ್ ಅವರ ಬಟ್ಟೆಯನ್ನು ಪತ್ನಿ ಟ್ವಿಂಕಲ್ ಖನ್ನಾ ಆಯ್ಕೆ ಮಾಡುತ್ತಾರೆ. ಬಹುಶಃ ಹಿಂದಿನ ರಾತ್ರಿ ಇಬ್ಬರ ನಡುವೆ ಜಗಳ ನಡೆದಿದೆ. ಅದಕ್ಕೆ ಟ್ವಿಂಕಲ್ ಹೀಗೆ ಸೇಡು ತೀರಿಸಿಕೊಂಡಿದ್ದಾರೆ ಅನ್ನಿಸುತ್ತಿದೆ’ ಎಂದು ನೆಟ್ಟಿಗರು ಕಾಲೆಳೆದಿದ್ದಾರೆ. ಒಟ್ಟಿನಲ್ಲಿ, ‘ಭೂತ್ ಬಾಂಗ್ಲಾ’ ಸಿನಿಮಾದ ಪ್ರಚಾರವನ್ನು ಡಿಫರೆಂಟ್ ಆಗಿ ಮಾಡಲು ಪ್ರಯತ್ನಿಸಿದ ಅಕ್ಷಯ್ ಕುಮಾರ್ ಅವರು ಈ ರೀತಿ ಟ್ರೋಲ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.





Source link

Leave a Reply

Your email address will not be published. Required fields are marked *