Tea break tragedy ಪ್ರವಾಸದ ನಡುವೆ ಟಿ ಕುಡಿಯುತ್ತಾ ನಿಂತಿದ್ದ ಸ್ನೇಹಿತರ ಮೇಲೆ ಯಮನಂತೆ ಬಂದ ಇನ್ನೋವಾ, ಓರ್ವ ಸಾವು | Trips Turns Horror Peeding Innova Ploughs Into Friends Taking A Break One Dead

ಪ್ರವಾಸದ ನಡುವೆ ಟಿ ಕುಡಿಯುತ್ತಾ ನಿಂತಿದ್ದ ಸ್ನೇಹಿತರ ಮೇಲೆ ಯಮನಂತೆ ಬಂದ ಇನ್ನೋವಾ, ಓರ್ವ ಸಾವು, 10 ಸ್ನೇಹಿತರು ವಾಹನ ನಿಲ್ಲಿಸಿ ವಿರಾಮ ಪಡೆಯುತ್ತಿದ್ದ ವೇಳೆ ಇನ್ನೋವಾ ಕಾರು ಡಿಕ್ಕಿಯಾಗಿದೆ.

ಹುಬ್ಬಳ್ಳಿ (ಏ.07) ಪ್ರವಾಸಕ್ಕೆ ಹೊರಟ 10 ಸ್ನೇಹಿತರು ತಮ್ಮದಲ್ಲದ ತಪ್ಪಿಗೆ ಓರ್ವನ ಕಳೆದುಕೊಂಡಿದ್ದಾರೆ. ಕಾರವಾರದ ದಾಂಡೇಲಿಗೆ 10 ಸ್ನೇಹಿತರು ಪ್ರವಾಸ ಹೊರಟಿದ್ದರು. ಟಿಟಿ ವಾಹನದ ಮೂಲಕ ತೆರಳಿದ ಸ್ನೇಹಿತರ ಗುಂಪು ಹಾವೇರಿಯ ತಡಸ್ ಬಳಿ ನಿಲ್ಲಿಸಿ ಟಿ ಕುಡಿಯಲು ಮುಂದಾಗಿದ್ದಾರೆ. ಟೀ ಕುಡಿಯತ್ತಾ ಮಾತನಾಡುತ್ತಾ ನಿಂತಿದ್ದ ಸ್ನೇಹಿತರ ಮೇಲೆ ಅತೀ ವೇಗವಾಗಿ ಬಂದ ಇನ್ನೋವಾ ಕಾರು ಡಿಕ್ಕಿಯಾಗಿದೆ. ಟಿಟಿ ವಾಹನದ ಹಿಂಬದಿಗೆ ಬಂದು ಇನ್ನೋವಾ ಡಿಕ್ಕಿಯಾಗಿದೆ. ಟಿಟಿ ವಾಹನ ಪಕ್ಕ ನಿಂತಿದ್ದ ಸ್ನೇಹಿತರ ಮೇಲೂ ಕಾರು ಹರಿದಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡರೆ, ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.

ದಾವಣಗೆರೆ ಮೂಲದ ಸುಮಾರು 10 ಜನ ಸ್ನೇಹಿತರ ಟ್ರಿಪ್

ದಾವಣೆಗೆರೆಯ ಮೂಲದ 10 ಮಂದಿ ಸ್ನೇಹಿತರು ರಾತ್ರಿ 2 ಗಂಟೆಗೆ ಟಿಟಿ ವಾಹನ ಮೂಲಕ ಪ್ರವಾಸ ಹೊರಟಿದ್ದರು.ಬೆಳಗಿನ ದಜಾವ 6 ಗಂಟೆಗೆ ಹಾವೇರಿಯ ತಡಸ್ ಬಳಿ ಟಿ ಶಾಪ್ ಬಳಿ ವಾಹನ ನಿಲ್ಲಿಸಿದ್ದಾರೆ. ಚಹಾ ಕುಡಿಯುತ್ತಾ ಕೆಲ ಹೊತ್ತು ಹರಟೆ ಮಾತುಕತೆ ನಡೆಸಿದ್ದಾರೆ. ಟಿ ಕುಡಿಯುತ್ತಾ ಟಿಟಿ ವಾಹನ ಅಕ್ಕ ಪಕ್ಕದಲ್ಲೇ ನಿಂತು ಮಾತನಾಡುತ್ತಾ ನಿಂತಿದ್ದಾರೆ. ಇದೇ ವೇಳೆ ಅತೀ ವೇಗವಾಗಿ ಬಂದ ಇನ್ನೋವಾ ಕಾರು ಟಿಟಿ ವಾಹನಕ್ಕೆ ಡಿಕ್ಕಿಯಾಗಿದೆ.

ಟಿಟಿ ವಾಹನ ಪಕ್ಕ 7 ರಿಂದ 8 ಮಂದಿ ನಿಂತಿದ್ದರು. 7 ಮಂದಿಗೆ ಗಾಯವಾಗಿದೆ. ಈ ಪೈಕಿ ಈ ವೇಳೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. 18 ವರ್ಷ ವಯಸ್ಸಿನ ಅಲಿ ಮಾಹಿನ್ ಎಂಬ ಯುವಕ ಮೃತಪಟ್ಟಿದ್ದಾನೆ. ದಾವಣಗೆರೆಯ ಭಗತ್ ಸಿಂಗ್ ನಗರ ನಿವಾಸಿ ಅಲಿ ಸಾವಿಗೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಅಲ್ತಾಫ್ ಹಾಗೂ ಜುನೆದ್ ಗೆ ಗಂಭೀರ ಗಾಯಗಳಾಗಿದೆ.

ಅಪಘಾತ ಸರಿಸುಮಾರು 6 ಗಂಟೆಗೆ ನಡೆದಿದೆ. 7 ಗಂಟೆ ವೇಳೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ಗಾಯಗೊಂಡವರನ್ನು ದಾಖಳಿಸಲಾಗಿದೆ. ಕಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಮೃತನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ತಡಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Source link

Leave a Reply

Your email address will not be published. Required fields are marked *