ಪಾಕ್ ಮಾತುಕತೆಗೆ ಮಣಿದ ಟ್ರಂಪ್! ಇರಾನ್ ಮೇಲೆ 2 ವಾರ ದಾಳಿ ಇಲ್ಲ, ಕೊನೆ ಕ್ಷಣದಲ್ಲಿ ಯುದ್ಧ ಆತಂಕ ದೂರ | Trump Announces Two Week Ceasefire With Iran After Pakistan Mediation

ಪಾಕ್ ಮಾತುಕತೆಗೆ ಮಣಿದ ಟ್ರಂಪ್! ಇರಾನ್ ಮೇಲೆ 2 ವಾರ ದಾಳಿ ಇಲ್ಲ, ಕೊನೆ ಕ್ಷಣದಲ್ಲಿ ಯುದ್ಧ ಆತಂಕ ದೂರ | Trump Announces Two Week Ceasefire With Iran After Pakistan Mediation



ಪಾಕ್ ಮಾತುಕತೆಗೆ ಮಣಿದ ಟ್ರಂಪ್! ಇರಾನ್ ಮೇಲೆ 2 ವಾರ ದಾಳಿ ಇಲ್ಲ, ಕೊನೆ ಕ್ಷಣದಲ್ಲಿ ಯುದ್ಧ ಆತಂಕ ದೂರ | Trump Announces Two Week Ceasefire With Iran After Pakistan Mediation

ಇರಾನ್ ಮೇಲಿನ ಬಾಂಬ್ ದಾಳಿ ಮತ್ತು ಇತರೆ ಸೇನಾ ಕಾರ್ಯಾಚರಣೆಗಳನ್ನು ಎರಡು ವಾರಗಳ ಕಾಲ ನಿಲ್ಲಿಸಲು ಒಪ್ಪಿಕೊಂಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.

ವಾಷಿಂಗ್ಟನ್ (ಏ.8): ಇರಾನ್ ವಿರುದ್ಧ ನೀಡಿದ್ದ ಗಡುವನ್ನು ವಿಸ್ತರಿಸಬೇಕೆಂಬ ಪಾಕಿಸ್ತಾನದ ಸಲಹೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊನೆಗೂ ಒಪ್ಪಿಗೆ ಸೂಚಿಸಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಟ್ರಂಪ್‌ಗೆ ಎರಡು ವಾರಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ, ಇರಾನ್‌ನಲ್ಲಿ ಎರಡು ವಾರಗಳ ಕಾಲ ಕದನ ವಿರಾಮಕ್ಕೆ ತಾನು ಒಪ್ಪಿರುವುದಾಗಿ ಡೊನಾಲ್ಡ್ ಟ್ರಂಪ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಟ್ರಂಪ್ ಹೇಳಿದ್ದೇನು?

‘ಇರಾನ್ ಮೇಲಿನ ಬಾಂಬ್ ದಾಳಿ ಮತ್ತು ಇತರ ಆಕ್ರಮಣಗಳನ್ನು ಎರಡು ವಾರಗಳ ಕಾಲ ನಿಲ್ಲಿಸಲು ನಾನು ಒಪ್ಪಿದ್ದೇನೆ’ ಎಂದು ಅಮೆರಿಕ ಅಧ್ಯಕ್ಷರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದೊಂದು ದ್ವಿಪಕ್ಷೀಯ ಕದನ ವಿರಾಮವಾಗಲಿದೆ ಎಂದು ಟ್ರಂಪ್ ವಿವರಿಸಿದ್ದಾರೆ.

ಅಮೆರಿಕದ ಸೇನಾ ಗುರಿಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಇರಾನ್ ಜೊತೆಗಿನ ದೀರ್ಘಾವಧಿಯ ಶಾಂತಿ ಒಪ್ಪಂದದ ಮಾತುಕತೆಯಲ್ಲಿ ಉತ್ತಮ ಪ್ರಗತಿ ಕಂಡುಬಂದಿದೆ ಎಂದು ಟ್ರಂಪ್ ಹೇಳಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವಿನ ಬಹುತೇಕ ಪ್ರಮುಖ ವಿವಾದಗಳನ್ನು ಬಗೆಹರಿಸಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಅವರೊಂದಿಗೆ ನಡೆಸಿದ ಮಾತುಕತೆಯ ನಂತರ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಟ್ರಂಪ್ ತಿಳಿಸಿದ್ದಾರೆ.

ಆದರೆ, ಹಾರ್ಮುಜ್ ಜಲಸಂಧಿಯನ್ನು ತಕ್ಷಣವೇ ಮತ್ತು ಸಂಪೂರ್ಣವಾಗಿ ಸುರಕ್ಷಿತವಾಗಿ ತೆರೆಯಲು ಇರಾನ್ ಸಿದ್ಧವಾಗಬೇಕು ಎಂಬ ಷರತ್ತಿನ ಮೇಲೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ. ತಾವೇ ನಿಗದಿಪಡಿಸಿದ್ದ ರಾತ್ರಿ 8 ಗಂಟೆಯ ಗಡುವಿಗೆ ಕೇವಲ ಒಂದು ಗಂಟೆ ಬಾಕಿ ಇರುವಾಗ ಈ ಮಹತ್ವದ ಘೋಷಣೆ ಹೊರಬಿದ್ದಿದೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಆವರಿಸಿದ್ದ ಹೊತ್ತಲ್ಲಿ ಬಂದ ಈ ಬೆಳವಣಿಗೆ, ಜಾಗತಿಕ ಮಟ್ಟದಲ್ಲಿ ದೊಡ್ಡ ಸಮಾಧಾನ ತಂದಿದೆ. ಇರಾನ್, ಅಮೆರಿಕ ಮತ್ತು ಇಸ್ರೇಲ್ ನಡುವಿನ ಈ ಸಂಘರ್ಷದಲ್ಲಿ ಪಾಕಿಸ್ತಾನವು ಮಧ್ಯವರ್ತಿಯ ಪಾತ್ರವನ್ನು ವಹಿಸುತ್ತಿದೆ. ಕದನ ವಿರಾಮಕ್ಕೆ ಕಾರಣವಾದ ಮಾತುಕತೆಗಳಲ್ಲಿ ತಾನು ಮಾತನಾಡಿದ ವ್ಯಕ್ತಿಗಳಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಒಬ್ಬರು ಎಂದು ಟ್ರಂಪ್ ಹೆಸರಿಸಿ ಹೇಳಿದ್ದಾರೆ.

ಡೊನಾಲ್ಡ್ ಟ್ರಂಪ್ ಘೋಷಿಸಿದ ಎರಡು ವಾರಗಳ ಕದನ ವಿರಾಮದಲ್ಲಿ ಇಸ್ರೇಲ್ ಕೂಡ ಭಾಗಿಯಾಗಿದೆ ಎಂದು ಶ್ವೇತಭವನದ ವಕ್ತಾರರು ಸಿಎನ್‌ಎನ್‌ಗೆ ಖಚಿತಪಡಿಸಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಇರಾನ್‌ನ ಮೂಲಸೌಕರ್ಯಗಳ ಮೇಲೆ ಭಾರಿ ಸೇನಾ ದಾಳಿ ನಡೆಸುವುದಾಗಿ ಟ್ರಂಪ್ ನೀಡಿದ್ದ ಗಡುವು ಮುಗಿಯಲು ಕೇವಲ ಒಂದೂವರೆ ಗಂಟೆ ಬಾಕಿ ಇರುವಾಗ ಈ ಮಾಹಿತಿ ಹೊರಬಿದ್ದಿದೆ.

ಮಾತುಕತೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ, ಇಸ್ರೇಲ್ ಕೂಡ ತನ್ನ ಬಾಂಬ್ ದಾಳಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಒಪ್ಪಿಕೊಂಡಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.



Source link

Leave a Reply

Your email address will not be published. Required fields are marked *