Headlines

ಡಾಕ್ಟರೆಟ್‌ ಕೊಡುವ ವಿಚಾರದಲ್ಲಿ ವಿವಿಗಳು ಸ್ವತಂತ್ರ, ಹಸ್ತಕ್ಷೇಪ ಮಾಡೋಲ್ಲ ಎಂದ ಹೈಕೋರ್ಟ್‌ | Universities Are Free To Award Doctorates Says Karnaaka High Court Rav

ಡಾಕ್ಟರೆಟ್‌ ಕೊಡುವ ವಿಚಾರದಲ್ಲಿ ವಿವಿಗಳು ಸ್ವತಂತ್ರ, ಹಸ್ತಕ್ಷೇಪ ಮಾಡೋಲ್ಲ ಎಂದ ಹೈಕೋರ್ಟ್‌ | Universities Are Free To Award Doctorates Says Karnaaka High Court Rav



ಡಾಕ್ಟರೆಟ್‌ ಕೊಡುವ ವಿಚಾರದಲ್ಲಿ ವಿವಿಗಳು ಸ್ವತಂತ್ರ, ಹಸ್ತಕ್ಷೇಪ ಮಾಡೋಲ್ಲ ಎಂದ ಹೈಕೋರ್ಟ್‌ | Universities Are Free To Award Doctorates Says Karnaaka High Court Rav

ಡಾ. ಎಚ್.ಸಿ. ಸತ್ಯನ್ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯವು ನೀಡಿದ ನಾಡೋಜ ಪದವಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಪದವಿ ಪ್ರದಾನದಂತ ವಿಷಯಗಳಲ್ಲಿ ವಿಶ್ವವಿದ್ಯಾಲಯಗಳು ಸ್ವತಂತ್ರವಾಗಿವೆ ಮತ್ತು ಆಧಾರರಹಿತ ಆರೋಪ ಸಲ್ಲ ಎಂದಿದೆ.

ಬೆಂಗಳೂರು (ಏ.8): ಕರ್ನಾಟಕ ರಾಜ್ಯ ಮಾಹಿತಿ ಆಯೋಗದ ಪ್ರಭಾರ ಮುಖ್ಯ ಮಾಹಿತಿ ಆಯುಕ್ತರಾಗಿದ್ದು, ಈಗ‌ ನಿವೃತ್ತಿ ಹೊಂದಿರುವ ಡಾ.‌ಎಚ್‌.ಸಿ. ಸತ್ಯನ್ ಅವರಿಗೆ ಹಂಪಿ‌ ಕನ್ನಡ ವಿಶ್ವವಿದ್ಯಾಲಯವು ನಾಡೋಜ ಪದವಿ ಪ್ರದಾ‌ನ ಮಾಡಿರುವುದನ್ನು ಪ್ರಶ್ನಿಸಿ‌‌ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಈ ಕುರಿತಂತೆ ಕಮಿಟಿ ಫಾರ್ ಪಬ್ಲಿಕ್ ಅಕೌಂಟಬಿಲಿಟಿ ‌ಸಂಸ್ಥೆಯ ಅಧ್ಯಕ್ಷ ಎಸ್.ಶಿವಕುಮಾರ್ ಸಲ್ಲಿಸಿದ್ದ ಅರ್ಜಿ‌ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರ ಪೀಠ ಈ ಆದೇಶ ಮಾಡಿದೆ.

ವಿಚಾರಣೆ ವೇಳೆ‌ ಅರ್ಜಿದಾರರ ಪರ ವಕೀಲರು, ಸತ್ಯನ್‌ ಅವರ ಮೇಲೆ ಭ್ರಷ್ಟಾಚಾರದ ಆರೋಪ ಇದೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ಭ್ರಷ್ಟಾಚಾರ ಸಾಬೀತಾಗಿದೆಯೇ? ಇಲ್ಲವೆಂದಾದರೆ ಸುಮ್ಮನೆ ಆರೋಪ ಮಾಡಬೇಡಿ. ಇಲ್ಲದಿದ್ದರೆ ದೊಡ್ಡ ಮೊತ್ತದ ದಂಡ ವಿಧಿಸಬೇಕಾಗುತ್ತದೆ. ಆಗ ನೀವು (ಅರ್ಜಿದಾರ) ಸಂಕಷ್ಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿತು.

ಅಲ್ಲದೇ, ಯಾರಿಗೆ ಯಾವ ಪದವಿ ಕೊಡಬೇಕು ಎಂಬ ಬಗ್ಗೆ ನಿರ್ಧರಿಸಲು ವಿಶ್ವವಿದ್ಯಾಲಯ ಸ್ವತಂತ್ರವಾಗಿದೆ. ಇಂತಹ ವಿಷಯದಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲು ಬಯಸುವುದಿಲ್ಲ. ಅಷ್ಟಕ್ಕೂ ಈ ಪ್ರಕರಣದಲ್ಲಿ ಅರ್ಜಿದಾರರ ಮೂಲಭೂತ ಹಕ್ಕುಗಳು, ಸಾಂವಿಧಾ‌ನಿಕ ಹಕ್ಕುಗಳ ಉಲ್ಲಂಘನೆ ಆಗುತ್ತಿಲ್ಲ. ಇಂತಹ ಅರ್ಜಿಗಳ ಸಲ್ಲಿಕೆ ನ್ಯಾಯಾಲಯದ ಅಮೂಲ್ಯ ಸಮಯ ಹಾಳು ಮಾಡುವುದು ಬಿಟ್ಟರೆ ಮತ್ತೇನೂ ಇಲ್ಲ‌ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿತು.

2026ರ ಫೆ.24ರಂದು ನಡೆದಿದ್ದ ಹಂಪಿ ‌ಕನ್ನಡ ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರು ಡಾ.ಎಚ್.ಸಿ‌.ಸತ್ಯನ್ ಅವರಿಗೆ ನಾಡೋಜ ಪ್ರದಾ‌ನ ಮಾಡಿದ್ದರು.‌ ಅದನ್ನು ಅರ್ಜಿದಾರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.



Source link

Leave a Reply

Your email address will not be published. Required fields are marked *