ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆ ಮುಕ್ತಗೊಳಿಸಲು ಬಿಗ್ ಪ್ಲಾನ್: 35 ಫ್ಲೈಓವರ್, 25 ಅಂಡರ್‌ಪಾಸ್

ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆ ಮುಕ್ತಗೊಳಿಸಲು ಬಿಗ್ ಪ್ಲಾನ್: 35 ಫ್ಲೈಓವರ್, 25 ಅಂಡರ್‌ಪಾಸ್


ಸಿಲಿಕಾನ್ ಸಿಟಿಯಲ್ಲಿ ಸಂಚಾರ ದಟ್ಟಣೆಯನ್ನು ಮುಕ್ತಗೊಳಿಸಲು ದೊಡ್ಡ ಯೋಜನೆ: 35 ಫ್ಲೈಓವರ್, 25 ಅಂಡರ್‌ಪಾಸ್

ಬೆಂಗಳೂರು, ಏ. 8: ಬೆಂಗಳೂರಿನ ರಸ್ತೆಗಳಲ್ಲಿ ಪ್ರತಿದಿನ ಸುಮಾರು 2,000 ಹೊಸ ವಾಹನಗಳು ಸೇರ್ಪಡೆಯಾಗುತ್ತಿವೆ. ಈ ಹೆಚ್ಚುತ್ತಿರುವ ಒತ್ತಡವನ್ನು ನಿಭಾಯಿಸಲು ಬೆಂಗಳೂರು ಸಂಚಾರ ನಿಲ್ದಾಣ 35 ಫ್ಲೈಓವರ್‌ಗಳು, 25 ಅಂಡರ್‌ಪಾಸ್‌ಗಳು ಮತ್ತು 101 ಸ್ಕೈವಾಕ್‌ಗಳನ್ನು ಒಳಗೊಂಡ ಬೃಹತ್ ಯೋಜನೆ ಬೃಹತ್ ಬೆಂಗಳೂರು ಪ್ರಾಧಿಕಾರಕ್ಕೆ (GBA) ಸಲ್ಲಿಸಿದೆ.

ಪೂರ್ವ ಬೆಂಗಳೂರಿನ ಮಹದೇವಪುರ ಮತ್ತು ವೈಟ್‌ಫೀಲ್ಡ್ ಭಾಗಗಳಲ್ಲಿ ಅತಿ ಹೆಚ್ಚು ಟ್ರಾಫಿಕ್ ಒತ್ತಡವಿದ್ದು, ಇಲ್ಲಿ ಹೆಚ್ಚಿನ ಫ್ಲೈಓವರ್ ಮತ್ತು ಪಾದಚಾರಿ ಮೂಲಸೌಕರ್ಯಗಳಿಗೆ ಒತ್ತು ನೀಡಲಾಗುತ್ತದೆ. ಹೆಬ್ಬಾಳ, ಸಾರಕ್ಕಿ ಸರ್ಕಲ್ ಮತ್ತು ಬನ್ನೇರುಘಟ್ಟ ರಸ್ತೆಯ ದಾಲ್ಮಿಯಾ ಜಂಕ್ಷನ್ ಸೇರಿದಂತೆ 25 ಪ್ರಮುಖ ಜಂಕ್ಷನ್‌ಗಳನ್ನು ಅಂಡರ್‌ಪಾಸ್ ಮೂಲಕ ಸಿಗ್ನಲ್ ಮುಕ್ತಗೊಳಿಸಲು ಯೋಜಿಸಲಾಗಿದೆ.

ವರ್ತೂರು ಕೋಡಿ, ದೊಮ್ಮಸಂದ್ರ, ಗುಂಜೂರು, ಎಚ್‌ಎಎಲ್ ಹಳೆ ವಿಮಾನ ನಿಲ್ದಾಣ ರಸ್ತೆ ಮತ್ತು ಯಲಹಂಕ ಭಾಗಗಳಲ್ಲಿ ಹೊಸ ಫ್ಲೈಓವರ್‌ಗಳನ್ನು ಪ್ರಸ್ತಾಪಿಸಲಾಗಿದೆ. ಸುಮಾರು ವಾರ್ಷಿಕವಾಗಿ ಸುಮಾರು 200 ಪಾದಚಾರಿಗಳು ಅಪಘಾತದಲ್ಲಿ ಬಲಿಯಾಗುತ್ತಿದ್ದಾರೆ. ಇದನ್ನು ತಡೆಯಲು 101 ಹೊಸ ಸ್ಕೈವಾಕ್‌ಗಳು ಅನಿವಾರ್ಯ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಇತರ ಸಣ್ಣ ಬದಲಾವಣೆಗಳು:

2,340 ಹೊಸ ಟ್ರಾಫಿಕ್ ಸೈನ್‌ಬೋರ್ಡ್‌ಗಳ ಅಳವಡಿಕೆ.

103 ಬಸ್ ನಿಲ್ದಾಣಗಳ ಸ್ಥಳಾಂತರ ಮತ್ತು 63 ಹೊಸ ಬಸ್ ನಿಲ್ದಾಣಗಳ ನಿರ್ಮಾಣ.

ಅವಾಗಿರುವ 84 ಸ್ಪೀಡ್ ಬ್ರೇಕರ್‌ಗಳ ತೆರವು.

ನೀರು ನಿಲ್ಲುವ 137 ಸ್ಥಳಗಳಲ್ಲಿ ಚರಂಡಿ ವ್ಯವಸ್ಥೆ ಸುಧಾರಣೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಬ್ಯಾಡ್ ನ್ಯೂಸ್: ಮೇ ತಿಂಗಳಿನಲ್ಲಿ ಓಪನ್ ಆಗಲ್ಲ ಪಿಂಕ್ ಲೈನ್! ವಿಳಂಬಕ್ಕೆ ಅಸಲಿ ಕಾರಣವೇನು?

ಬೃಹತ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಮಾತನಾಡಿ, “ಇದು ಅತ್ಯಂತ ವಿವರವಾದ ಆಡಿಟ್ ವರದಿಯಾಗಿದೆ. ಆದರೆ ಇಷ್ಟೊಂದು ದೊಡ್ಡ ಮಟ್ಟದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಭೂಸ್ವಾಧೀನ ಮತ್ತು ಹಣಕಾಸಿನ ಯೋಜನೆ ಬಹಳ ಮುಖ್ಯ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



Source link

Leave a Reply

Your email address will not be published. Required fields are marked *