
ಕಳೆದ ಕೆಲ ವರ್ಷಗಳಿಂದ ಭಾರತದಲ್ಲಿ ಬಲು ವೇಗವಾಗಿ ಬೆಳೆಯುತ್ತಿರುವ ಸ್ಟಾಂಡಪ್ ಕಾಮಿಡಿ ಕ್ಷೇತ್ರದಲ್ಲಿ ದೊಡ್ಡ ಹೆಸರು ಸಮಯ್ ರೈನಾ (ಸಮಾಯ್ ರೈನಾ) ಅವರದ್ದು. ಚೆಸ್ ಸ್ಟ್ರೀಮರ್ ಆಗಿ ಬಳಿಕ ಯೂಟ್ಯೂಬ್ ಸ್ಟ್ರೀಮರ್, ಸ್ಟಾಂಡಪ್ ಕಮಿಡಿಯನ್, ಯೂಟ್ಯೂಬ್ ಶೋ ಹೋಸ್ಟ್ ಆಗಿ ಗುರುತಿಸಿಕೊಂಡಿರುವ ಸಮಯ್ ರೈನಾ, ಯೂಟ್ಯೂಬ್‌ನಲ್ಲಿ ಆರಂಭಿಸಿದ್ದ ‘ಇಂಡಿಯಾ ಗಾಟ್ ಲೇಟೆಂಟ್’ ಶೋ ದೊಡ್ಡ ಹಿಟ್ ಆಗುತ್ತಿದೆ. ಒಂದೇ ದಿನಕ್ಕೆ ಕೋಟ್ಯಂತರ ವೀವ್ಸ್ ಅನ್ನು ಈ ಶೋ ಗಳಿಸುತ್ತಿತ್ತು. ಆದರೆ ಯಾರೋ ಮಾಡಿದ ತಪ್ಪಿನಿಂದ ಶೋ ಅನ್ನು ಬಂದ್ ಮಾಡಿದ್ದು, ಹಳೆಯ ಎಲ್ಲ ವಿಡಿಯೋಗಳನ್ನು ಡಿಲೀಟ್ ಮಾಡಬೇಕಾಯ್ತು ಸಮಯ ರೈನಾ. ಪೊಲೀಸ್ ಎಫ್‌ಐಆರ್, ಹಲವು ಪ್ರಕರಣಗಳ ಬಳಿಕ ಈ ಶೋ ಮತ್ತೆ ಪ್ರಾರಂಭವೇ ಆಗುವುದಿಲ್ಲ ಎಂದುಕೊಳ್ಳಲಾಗಿದೆ. ಆದರೆ ಇದೀಗ ಸಮಯ್ ರೈನಾ, ‘ಇಂಡಿಯಾ ಗಾಟ್ಟೆಂಟ್’ ಅನ್ನು ಮತ್ತೆ ಪ್ರಾರಂಭಿಸುವುದಾಗಿ ಲೇವಡಿ ಮಾಡಿದ್ದಾರೆ.
ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ‘ಇಂಡಿಯಾ ಗಾಟ್ ಲೇಟೆಂಟ್’ ಮೇಲೆ ಕೇಸು ದಾಖಲಾಗಿತ್ತು. ಶೋಗೆ ಅತಿಥಿಯಾಗಿ ಆಗಮಿಸಿದ್ದ ಮತ್ತೊಬ್ಬ ಯೂಟ್ಯೂಬರ್ ರಣವೀರ್ ಅಲ್ಹಾಬಾದಿಯಾ ಹೇಳಿದ್ದ ಒಂದು ಕೆಟ್ಟ ಜೋಕಿನಿಂದ ಶೋ ಮೇಲೆ ಹಾಗೂ ಶೋನಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಹಲವರ ಮೇಲೆ ಹಲವಾರು ಪ್ರಕರಣಗಳು ದಾಖಲಾಗಿವೆ. ಸಮಯ್ ರೈನಾ, ಸಹ ಆಗಿನಿಂದ ‘ಇಂಡಿಯಾ ಗಾಟ್ ಲೇಟೆಂಟ್’ ಬಗ್ಗೆ ಎಲ್ಲಿಯೂ ಮಾತನಾಡಲಿಲ್ಲ, ಆದರೆ ಇದೀಗ ತಮ್ಮ ಹೊಸ ಸ್ಟಾಂಡಪ್‌ನಲ್ಲಿ ‘ಇಂಡಿಯಾ ಗಾಟ್ ಲೇಟೆಂಟ್’ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
‘ನಾನು ಬಯಸಿದ್ದರೂ ಸಹ ‘ಇಂಡಿಯಾ ಗಾಟ್ ಲೇಟೆಂಟ್’ ಅನ್ನು ಮುಕ್ತಾಯಗೊಳಿಸುವುದು ಅಷ್ಟು ಜನಪ್ರಿಯವಾಗಿದೆ, ಆದರೆ ಈಗ ಮುಕ್ತಾಯ ಆಗಿರುವುದು ಸೀಸನ್ 1 ಮಾತ್ರ’. ಆ ಮೂಲಕ ‘ಇಂಡಿಯಾ ಗಾಟ್ ಲೇಟೆಂಟ್ ಸೀಸನ್ 2’ ಬರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ ಸಮಯ್ ರೈನಾ.
ಇದನ್ನೂ ಓದಿ:’ಇಂಡಿಯಾಸ್ ಗಾಟ್ ಲೇಟೆಂಟ್’ ಪುನರಾರಂಭ ಯಾವಾಗ? ಸಮಯ್ ರೈನಾ ಉತ್ತರವೇನು?
‘ಇಂಡಿಯಾ ಗಾಟ್ ಲೇಟೆಂಟ್’ ವಿವಾದ ಆದಾಗ ಅನುಭವಿಸಿದ ಕಷ್ಟಗಳ ಬಗ್ಗೆಯೂ ಮಾತನಾಡಿರುವ ಸಮಯ್ ರೈನಾ, ‘ನಾನು ಅಪ್ ಲೋಡ್ ಮಾಡಿದ ವಿಡಿಯೋದಿಂದ ಹಲವಾರು ಮಂದಿ ತೊಂದರೆಗೆ ಒಳಗಾದರು. ಶೋ ನಡೆದ ಹ್ಯಾಬಿಟಾಟ್ ಜಾಗದ ಮಾಲೀಕ ಬಲರಾಜ್ ಮತ್ತು ಅವರ ವಯ್ಯಸ್ಸಾದ ಪೋಷಕರಿಂದ ತೀವ್ರ ಕಷ್ಟ ಅನುಭವಿಸುವಂತಾಯ್ತು. ರಣವೀರ್ ಅವರ ತಾಯಿಯ ಕ್ಲಿನಿಕ್ ಮೇಲೆ ದಾಳಿ ಮಾಡಲಾಯ್ತು, ಅಪೂರ್ವ ಕೊಲೆ ಬೆದರಿಕೆಗಳು ಬಂದವು. ನನ್ನ ಮೇಲೆ ಹಲವಾರು ಎಫ್‌ಐಆರ್‌ಗಳು ದಾಖಲಾದವು, ಹ್ಯಾಬಿಟಾಟ್ ಅನ್ನು ಒಡೆದು ಹಾಕಿದರು’ ಎಂದೆಲ್ಲ ನೋವಿನಿಂದ ಸಮಯ್ ರೈನಾ ಹೇಳಿದ್ದಾರೆ.
ಆ ಕಷ್ಟದ ಸಮಯದಲ್ಲಿ ತಮ್ಮ ವಿರುದ್ಧ ತಿರುಗಿ ಬಿದ್ದಿದ್ದ ಮಾಧ್ಯಮದವರು, ರಾಜಕಾರಣಿಗಳು ವಿಶೇಷ ನ್ಯೂಸ್ ಚಾನೆಲ್‌ಗಳಿಗೆ ಟೈಮ್ ರೈನಾ ತಮ್ಮ ಹೊಸ ಸ್ಟಾಂಡಪ್‌ನಲ್ಲಿ ತಿರುಗೇಟು ನೀಡಿದರು. ಸಮಯ್ ರೈನಾ, ‘ಇಂಡಿಯಾ ಗಾಟ್ ಲೇಟೆಂಟ್ 2’ ಮಾಡುತ್ತಿರುವುದನ್ನು ನೆಟ್ಟಿಗರು ಸ್ವಾಗತಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ