ಕನ್ನಡದಲ್ಲಿಯೇ ಮಾತನಾಡಿದ ನಟ ವಿಜಯ ದೇವರಕೊಂಡ: ಕೊಡವರ ಮನಗೆದ್ದ Rashmika Mandanna ಪತಿ

ಕನ್ನಡದಲ್ಲಿಯೇ ಮಾತನಾಡಿದ ನಟ ವಿಜಯ ದೇವರಕೊಂಡ: ಕೊಡವರ ಮನಗೆದ್ದ Rashmika Mandanna ಪತಿ

ಕನ್ನಡದಲ್ಲಿಯೇ ಮಾತನಾಡಿದ ನಟ ವಿಜಯ ದೇವರಕೊಂಡ: ಕೊಡವರ ಮನಗೆದ್ದ Rashmika Mandanna ಪತಿ
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿಯು ಕೊಡಗಿನ ವಿರಾಜಪೇಟೆಯಲ್ಲಿ ತಮ್ಮ ವಿವಾಹದ ರಿಸೆಪ್ಷನ್ ಹಮ್ಮಿಕೊಂಡಿದ್ದರು. ಈ ಸಮಾರಂಭದಲ್ಲಿ ರಶ್ಮಿಕಾ ಕೊಡವ ಸಂಪ್ರದಾಯದಂತೆ ಮಿಂಚಿದರೆ, ವಿಜಯ್ ದೇವರಕೊಂಡ ಕನ್ನಡದಲ್ಲಿ ಮಾತನಾಡಿ ಎಲ್ಲರನ್ನೂ, ವಿಶೇಷವಾಗಿ ರಶ್ಮಿಕಾರನ್ನು ಅಚ್ಚರಿಗೊಳಿಸಿದರು.
ನ್ಯಾಷನಲ್​ ಕ್ರಷ್​, ಕನ್ನಡದ ಕುವರಿ ರಶ್ಮಿಕಾ ಮಂದಣ್ಣ, ಸದ್ಯ ಟಾಲಿವುಡ್ ರೌಡಿ ಸ್ಟಾರ್ ಎಂದೇ ಫೇಮಸ್​ ಆಗಿರೋ ವಿಜಯ್ ದೇವರಕೊಂಡ ಅವರ ಜೊತೆ ದಾಂಪತ್ಯ ಜೀವನವನ್ನು ಎಂಜಾಯ್​ ಮಾಡುತ್ತಿದ್ದಾರೆ. ಇದರ ನಡುವೆಯೇ, ಕೊಡಗಿನ ವಿರಾಜಪೇಟೆಯಲ್ಲಿ ಮೊನ್ನೆ ಜೋಡಿ ರಶ್ಮಿಕಾ ಕುಟುಂಬದ ಆಪ್ತರು ಮತ್ತು ಸಂಬಂಧಿಕರಿಗಾಗಿ ಅದ್ದೂರಿ ರಿಸೆಪ್ಷನ್ ಹಮ್ಮಿಕೊಂಡಿತ್ತು.

ಕೊಡವ ಸಂಪ್ರದಾಯದಂತೆ ಮತ್ತು ತೆಲುಗು ಸಂಪ್ರದಾಯದಂತೆ ಉದಯಪುರದಲ್ಲಿ ಇವರ ವಿವಾಹವಾಗಿತ್ತು. ಇದೀಗ ಕೊಡವ ಸಂಪ್ರದಾಯದಂತೆ ರಶ್ಮಿಕಾ ಸಂಪೂರ್ಣವಾಗಿ ಕೊಡವತಿಯಾಗಿ ಮಿಂಚಿದರು. ಅವರ ಹೇರ್ ಸ್ಟೈಲ್, ಆಭರಣ, ಬಟ್ಟೆ ಬರೆ ಎಲ್ಲವೂ ಕೊಡವ ಸಂಪ್ರದಾಯದಂತೆಯೇ ಇತ್ತು. ತೆಲುಗಿನ ಸೊಸೆಯಾಗಿರುವ ರಶ್ಮಿಕಾ ತನ್ನ ತವರು ಮನೆಯಲ್ಲಿ ತಾನು ಬೆಳೆದು ಬಂದ ಸಂಪ್ರದಾಯವನ್ನೇ ಅನುಸರಿಸಿದ್ದು ಖುಷಿಯ ಸಂಗತಿಯಾಗಿದೆ. ಇನ್ನು ಪತಿ ವಿಜಯ್ ದೇವರಕೊಂಡ ಕಪ್ಪು ಮತ್ತು ಬಿಳಿ ಕಾಂಬಿನೇಷನ್ ನಲ್ಲಿ ಸೂಟ್‌, ಬಿಳಿಬಣ್ಣದ ಬೂಟು ಧರಿಸಿದ್ದರು.

ಇಲ್ಲಿ ಹೈಲೈಟ್ ಆದದ್ದು ವಿಜಯ ದೇವರಕೊಂಡ ಅವರು ಕನ್ನಡದಲ್ಲಿಯೇ ತಮ್ಮ ಮಾತನ್ನು ಆರಂಭಿಸಿದ್ದು. ಅಷ್ಟಕ್ಕೂ ರಶ್ಮಿಕಾ ಮಂದಣ್ಣ (Rashmika Mandanna) ಅವರಿಗೆ ಕನ್ನಡ ಚೆನ್ನಾಗಿಯೇ ಬರುತ್ತದೆ. ಕೆಲವೊಮ್ಮೆ ಕನ್ನಡ ಬರುವುದಿಲ್ಲ ಎನ್ನುವಂತೆ ಮಾತನಾಡಿದ್ದರೂ, ಈ ಹಿಂದೆ ಕನ್ನಡದಲ್ಲಿ ಚೆನ್ನಾಗಿ ಮಾತನಾಡಿರುವ ವಿಡಿಯೋಗಳೂ ಇವೆ. ಆದರೆ ಈಗ ಹೈಲೈಟ್ ಆದದ್ದು ವಿಜಯ ದೇವರಕೊಂಡ ಅವರ ಕನ್ನಡ.

ಕೊಡವರನ್ನು ಉದ್ದೇಶಿಸಿ ವಿಜಯ ದೇವರಕೊಂಡ (Vijay Devarakonda) ಅವರು, ಎಲ್ಲರಿಗೂ ನಮಸ್ಕಾರ, ಎಲ್ಲರೂ ಹೇಗಿದ್ದೀರಾ ಎಂದು ಕನ್ನಡದಲ್ಲಿ ಮಾತನ್ನು ಆರಂಭಿಸಿದಾಗ ಅಲ್ಲಿದ್ದವರೆಲ್ಲಾ ಚಪ್ಪಾಳೆಗಳ ಸುರಿಮಳೆಯನ್ನೇ ಸುರಿಸಿದರು. ಖುದ್ದು ರಶ್ಮಿಕಾ ಕೂಡ ಪತಿಯ ಕನ್ನಡ ಕೇಳಿ ಶಾಕ್​ ಆದರು.

ಬಳಿಕ, ವಿಜಯ್​ ಅವರು ಇಂಗ್ಲಿಷ್​ನಲ್ಲಿ ಮಾತನ್ನು ಆರಂಭಿಸಿ, ನಾನು ರಶ್ಮಿಕಾಳಿಂದ ಸ್ವಲ್ಪ ಕನ್ನಡ ಮತ್ತು ಕೊಡವ ಭಾಷೆಯನ್ನು ಕಲಿತಿರುವುದಾಗಿ ಕೆಲವೊಂದು ಶಬ್ದಗಳನ್ನು ಹೇಳಿದರು. ಅಲ್ಲಿದ್ದವರೆಲ್ಲಾ ಮತ್ತಷ್ಟು ಖುಷಿಯಿಂದ ಚಪ್ಪಾಳೆ ತಟ್ಟಿದರು.

ಅಷ್ಟಕ್ಕೂ ಈ ಜೋಡಿ ರಾಜಸ್ಥಾನದ ಉದಯಪುರದಲ್ಲಿ ಗಣ್ಯರ ಸಮ್ಮುಖದಲ್ಲಿ ಮದುವೆಯಾಗಿತ್ತು. ವಿವಾಹ ಮಹೋತ್ಸವಕ್ಕೆ ಕೊಡಗಿನ ಅನೇಕ ಸಂಬಂಧಿಕರಿಗೆ ಹೋಗಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಮಂದಣ್ಣ ಕುಟುಂಬದವರು ತಮ್ಮ ಜಿಲ್ಲೆಯ ಹಾಗೂ ರಾಜ್ಯದ ಆಪ್ತರಿಗಾಗಿ ಮತ್ತು ಮಂದಣ್ಣ ಕುಟುಂಬದ ದೊಡ್ಡ ಬಳಗಕ್ಕಾಗಿ ಈ ವಿಶೇಷ ರಿಸೆಪ್ಷನ್ ಏರ್ಪಡಿಸಿದ್ದರು.

Source link

Leave a Reply

Your email address will not be published. Required fields are marked *