
ಚೆನ್ನೈ, ಏಪ್ರಿಲ್ 08: ಅಂದು ಸನಾತನ ಧರ್ಮ ನಿರ್ಮೂಲನೆಯ ಮಾತನಾಡಿದ್ದ, ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಸಿದ್ದ ಉದಯನಿಧಿ ಸ್ಟಾಲಿನ್ ಇಂದು ತಿಲಕವಿಟ್ಟಿದ್ದಾರೆ. ಆದರೆ ಫೋಟೊ ತೆಗೆದ ಮೇಲೆ ಒಂದೇ ಒಂದು ಕ್ಷಣವೂ ಹಣೆಯಲ್ಲಿ ತಿಲಕವಿಟ್ಟುಕೊಳ್ಳದೆ ಬಟ್ಟೆಯಿಂದ ಅಳಿಸಿಹಾಕಿದ್ದಾರೆ. ಕೇವಲ ಈ ನಾಟಕವೇ ಎಂದು ಜನರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ತಮಿಳುನಾಡಿನಲ್ಲಿ ಏಪ್ರಿಲ್ 23 ರಂದು ಚುನಾವಣೆ ನಡೆಯಲಿದೆ, ಮೇ 4 ರಂದು ಫಲಿತಾಂಶ ಹೊರಬರಲಿದೆ. ನಾಮಪತ್ರ ಸಲ್ಲಿಕೆ ಮಾರ್ಚ್ 30 ರಿಂದ ಆರಂಭವಾಗಿದೆ. ಏಪ್ರಿಲ್ 6ಕ್ಕೆ ಕೊನೆಗೊಂಡಿದೆ. ಮಂಗಳವಾರ ನಾಮಪತ್ರಗಳು ಜರುಗಿದವು. ಏಪ್ರಿಲ್ 9 ರ ಒಳಗೆ ಅಭ್ಯರ್ಥಿಗಳ ನಾಮಪತ್ರ ಹಿಂಪಡೆಯಬಹುದು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ