ಲಕ್ಷ ಲಕ್ಷ ಶುಲ್ಕ ಪಡೆದರೂ ಬೇಸಿಕ್ ಗ್ರಾಮರ್ ಮಿಸ್ಟೇಕ್: DSP ಶಾಲೆಯ ಎಲ್‌ಕೆಜಿ ಮಗುವಿನ ಡೈರಿಯಲ್ಲಿ ನೂರೆಂಟು ತಪ್ಪು | Basic Grammar Mistake By Prestigious School Despite Receiving Lakhs Of Fees

ಲಕ್ಷ ಲಕ್ಷ ಶುಲ್ಕ ಪಡೆದರೂ ಬೇಸಿಕ್ ಗ್ರಾಮರ್ ಮಿಸ್ಟೇಕ್: DSP ಶಾಲೆಯ ಎಲ್‌ಕೆಜಿ ಮಗುವಿನ ಡೈರಿಯಲ್ಲಿ ನೂರೆಂಟು ತಪ್ಪು | Basic Grammar Mistake By Prestigious School Despite Receiving Lakhs Of Fees



ಲಕ್ಷ ಲಕ್ಷ ಶುಲ್ಕ ಪಡೆದರೂ ಬೇಸಿಕ್ ಗ್ರಾಮರ್ ಮಿಸ್ಟೇಕ್: DSP ಶಾಲೆಯ ಎಲ್‌ಕೆಜಿ ಮಗುವಿನ ಡೈರಿಯಲ್ಲಿ ನೂರೆಂಟು ತಪ್ಪು | Basic Grammar Mistake By Prestigious School Despite Receiving Lakhs Of Fees

ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಓದುತ್ತಿರುವ ಮಗಳ ಡೈರಿಯಲ್ಲಿ ಶಿಕ್ಷಕರು ಮಾಡಿದ ವ್ಯಾಕರಣ ದೋಷವನ್ನು ಪೋಷಕರೊಬ್ಬರು ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ. ದುಬಾರಿ ಶುಲ್ಕ ಪಡೆದು ಕಳಪೆ ಶಿಕ್ಷಣ ನೀಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಖಾಸಗಿ ಶಾಲೆಯ ಅವಾಂತರಕ್ಕೆ ರೋಸಿ ಹೋದ ಪೋಷಕರು:

ಇಂದು ಶಾಲೆಗಳು ಕೇವಲ ಪಾಠ ಮಾಡುವ ಕೇಂದ್ರಗಳಾಗಿ ಉಳಿದಿಲ್ಲ, ಇಂದು ಕೋಟ್ಯಾಂತರ ವ್ಯವಹಾರ ಮಾಡುವ ಉದ್ಯಮವಾಗಿ ಶಿಕ್ಷಣ ಸಂಸ್ತೆಗಳು ಬದಲಾಗಿವೆ. ಪ್ರಮುಖ ಮಹಾನಗರಿಗಳಲ್ಲಿ ಒಂದು ಎಲ್‌ಕೆಜಿಗೆ ಹೋಗುವ ಮಗುವಿನ ವಾರ್ಷಿಕ ಶುಲ್ಕವೇ ಲಕ್ಷ ದಾಟುತ್ತಿದೆ. ಅನೇಕ ಪೋಷಕರು ತಮ್ಮ ಮಕ್ಕಳು ಕೂಡ ಪ್ರತಿಷ್ಠಿತ ಶಾಲೆಯಲ್ಲಿ ಶಿಕ್ಷಣ ಪಡೆಯಬೇಕು ಒಳ್ಳೆಯ ಉದ್ಯೋಗ ಪಡೆದು ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಹೊಟ್ಟೆ ಬಟ್ಟೆ ಕಟ್ಟಿ, ತಮ್ಮೆಲ್ಲಾ ಆಸೆಗಳನ್ನೆಲ್ಲಾ ಬದಿಗೊತ್ತಿ ಸಾಲ ಸೋಲ ಮಾಡಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳನ್ನು ಓದಿಸುತ್ತಿದ್ದಾರೆ. ಆದರೆ ಇಷ್ಟೊಂದು ವೆಚ್ಚ ಮಾಡಿ ಓದಿಸಿದ ನಂತರವೂ ನಿಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯದೇ ಹೋದರೆ ಏನು ಪ್ರಯೋಜನ? ಅಲ್ಲವೇ?

ಹಾಗೆಯೇ ಇಲ್ಲೊಂದು ಕಡೆ ಪೋಷಕರೊಬ್ಬರು ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಓದುತ್ತಿರುವ ತಮ್ಮ ಪುತ್ರಿಯ ಡೈರಿಯಲ್ಲಿರುವ ಗ್ರ್ಯಾಮರ್ (ವ್ಯಾಕರಣ) ತಪ್ಪುಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದು, ವೀಡಿಯೋ ಭಾರಿ ವೈರಲ್ ಆಗಿದೆ.

ಪಾಠ ಮಾಡುವ ಟೀಚರ್‌ಗೆ ಗೊತ್ತಿಲ್ಲ ಕನಿಷ್ಟ ಗ್ರ್ಯಾಮರ್

ನಾನು ಇವತ್ತು ಮಗುವಿನ ಶಾಲೆಯ ಡೈರಿಯನ್ನು ನೋಡುತ್ತಿದ್ದೆ. ನಾನು ಈ ವಿಚಾರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವುದಕ್ಕೆ ಬಯಸುತ್ತೇನೆ. ಶಾಲಾ ಮಕ್ಕಳ ಪುಸ್ತಕಗಳು ಬ್ಯಾಗ್‌ಗಳು ಎಷ್ಟು ದುಬಾರಿ ಎಂಬ ಬಗ್ಗೆ ನಾನು ಕಳೆದ ವಾರದಿಂದಲೂ ವಿಡಿಯೋ ಮಾಡುತ್ತಿದೆ. ಅವೆಲ್ಲಾ ಪಕ್ಕಕ್ಕಿಡೋಣ ಇಲ್ಲಿ ನೋಡಿ, ಇದೇನು ಇದು 400 ರೂಪಾಯಿಯ ಸ್ಕೂಲ್ ನೋಟ್ ಬುಕ್, ಇದು ಇದರಲ್ಲಿ ಟೀಚರ್ ಏನು ಬರೆದಿದ್ದಾರೆ ನೋಡಿ. ‘ಐಮ್ ಸ್ಟಡಿ ಇನ್ ಕ್ಲಾಸ್ ಎಲ್‌ಕೆಜಿ’ ನಂತರ ಮೈ ಸ್ಕೂಲ್ಸ್ ನೇಮ್ ಎಂದು ಬರೆದಿದ್ದಾರೆ. ಇಂತಹ ಬೇಸಿಕ್ ವ್ಯಾಕರಣವನ್ನೇ ಇಲ್ಲಿ ತಪ್ಪಾಗಿ ಬರೆಯಲಾಗಿದೆ. ಇಲ್ಲಿ ನಾನು ಶಿಕ್ಷಕಿಯನ್ನು ದೂರುತ್ತಿಲ್ಲ. ಇಂತಹ ಶಿಕ್ಷಕರನ್ನು ಸೇವೆಗೆ ತೆಗೆದುಕೊಂಡ ಮ್ಯಾನೇಜ್‌ಮೆಂಟ್ ಬಗ್ಗೆ ದೂರುತ್ತಿದ್ದೇನೆ. ಇಲ್ಲಿ ಕಡಿಮೆ ಸ್ಯಾಲರಿಗೆ ಶಿಕ್ಷಕರು ಕೆಲಸ ಮಾಡುತ್ತಾರೆ. ಇದರಿಂದ ಶಾಲೆಗೆ ಒಳ್ಳೆಯ ಪ್ರಾಫಿಟ್ ಬರುತ್ತದೆ. ಆದರೆ ಇವರು ಹೀಗೆ ನಮ್ಮ ಮಕ್ಕಳಿಗೆ ತಪ್ಪು ತಪ್ಪಾಗಿ ಹೇಳಿಕೊಟ್ಟರೆ ನಾವು ಕಟ್ಟುವ ದುಬಾರಿ ಶುಲ್ಕದ ಪ್ರಯೋಜನ ಏನು? ಹೀಗಾಗಿ ಮಗುವನ್ನು ಖಾಸಗಿ ಶಾಲೆಯಿಂದ ತೆಗೆದು ಹಾಕಿ ಸರ್ಕಾರಿ ಶಾಲೆಗೆ ದಾಖಲಿಸುತ್ತೇನೆ. ಇಂತಹ ಇಂಗ್ಲೀಷ್‌ನ್ನು ನನ್ನ ಮಗು ಹೇಗಿದ್ದರೂ ಕಲಿಯುತ್ತದೆ ಜೊತೆಗೆ ಮಧ್ಯಾಹ್ನದ ಬಿಸಿಯೂಟವೂ ದೊರೆಯುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಈ ವೀಡಿಯೋ ನೋಡಿದ ಅನೇಕ ಪೋಷಕರು ಆತಂಕಗೊಂಡಿದ್ದು, ಇಂದಿನ ಶಿಕ್ಷಣ ವ್ಯವಸ್ಥೆಯ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ.

ನೆಟ್ಟಿಗರು ಕಾಮೆಂಟ್ ಗಳಲ್ಲಿ ಹೇಳಿದ್ದೇನು?

ಈ ವಿಡಿಯೋಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಖಾಸಗಿ ಶಾಲೆಯ ಶಿಕ್ಷಕರಿಗಿಂತ ಸರ್ಕಾರಿ ಶಾಲೆಯ ಶಿಕ್ಷಕರು ಹೆಚ್ಚು ಅರ್ಹತೆ ಪಡೆದಿರುತ್ತಾರೆ. ಅವರು ಸರ್ಕಾರಿ ಕೆಲಸ ಗಿಟ್ಟಿಸುವುದಕ್ಕಾಗಿ ಹಲವು ಕಠಿಣ ಪರೀಕ್ಷೆಗಳನ್ನು ಪಾಸು ಮಾಡಿದ ನಂತರವೇ ಅವರಿಗೆ ಈ ಉದ್ಯೋಗ ದೊರೆಯುತ್ತದೆ. ಖಾಸಗಿ ಶಾಲೆಗಳು ಹಾಗಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಾಗೆಯೇ ಕೆಲವರು ಇದರಲ್ಲಿ ತಪ್ಪಿಲ್ಲ ಇದು ಸರಿಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಕೆಲವರು ಇದನ್ನು ವ್ಯಂಗ್ಯ ಮಾಡಿದ್ದು, ನನ್ನ ಶಾಲೆಯ ಹೆಸರು ಡಾಲ್ಫಿನ್ ಪಬ್ಲಿಕ್ ಸ್ಕೂಲ್ ಈ ವಾಕ್ಯ ವ್ಯಾಕರಣಬದ್ಧವಾಗಿ ಸರಿಯಾಗಿದೆ ಎಂದು ಒಬ್ಬರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: ಬಾಗಲಕೋಟೆ: ಯುವ ಪ್ರೇಮಿಗಳು ಸಾವಿಗೆ ಶರಣು: ಗೆಳತಿ ಮೃತಪಟ್ಟ ವಿಚಾರ ತಿಳಿದು ಗೆಳೆಯನೂ ಸಾವು

“My school’s name (ನನ್ನ ಶಾಲೆಯ ಹೆಸರು) ವಾಸ್ತವವಾಗಿ ಸರಿಯಾಗಿದೆ. ನಾವು ಸ್ವಾಧೀನವನ್ನು ತೋರಿಸಲು ಅಪಾಸ್ಟ್ರಫಿ + s(apostrophe + s )ಅನ್ನು ಬಳಸುತ್ತೇವೆ. ಹೆಸರು ಶಾಲೆಗೆ ಸೇರಿದೆ. ನಾವು teacher’s name ಅಥವಾ student’s name ಎಂದು ಹೇಳುವಂತೆಯೇ ಇದು ಎಂದು ಕೆಲವರು ಇದನ್ನು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ಡಿವೋರ್ಸ್‌ ಪಡೆದ ಮಗಳ ಅದ್ದೂರಿ ಸ್ವಾಗತದ ಹಿಂದೆ ಕರಾಳ ಮುಖ: ನಿವೃತ್ತ ಜಡ್ಜ್ ಪುತ್ರಿಯ ವಿಚ್ಛೇದನ ಪ್ರಕರಣಕ್ಕೆ ಟ್ವಿಸ್ಟ್ ನೀಡಿದ ಮಾವ



Source link

Leave a Reply

Your email address will not be published. Required fields are marked *