Headlines

ಒಂದು ಲಕ್ಷದ ಸಂಬಳ ಬಿಟ್ಟು, ಕೇವಲ 14 ತಿಂಗಳಲ್ಲಿ 2 ಲಕ್ಷ ತಿಂಗಳಿಗೆ ಗಳಿಸಲು ಆರಂಭಿಸಿದ ಯುವತಿ! | From 1 Lakh Rupees Salary To 2 Lakh Rupees Freelance Income Tax Lawyer Quits Job To Follow Passion Kvn

ಒಂದು ಲಕ್ಷದ ಸಂಬಳ ಬಿಟ್ಟು, ಕೇವಲ 14 ತಿಂಗಳಲ್ಲಿ 2 ಲಕ್ಷ ತಿಂಗಳಿಗೆ ಗಳಿಸಲು ಆರಂಭಿಸಿದ ಯುವತಿ! | From 1 Lakh Rupees Salary To 2 Lakh Rupees Freelance Income Tax Lawyer Quits Job To Follow Passion Kvn



ಒಂದು ಲಕ್ಷದ ಸಂಬಳ ಬಿಟ್ಟು, ಕೇವಲ 14 ತಿಂಗಳಲ್ಲಿ 2 ಲಕ್ಷ ತಿಂಗಳಿಗೆ ಗಳಿಸಲು ಆರಂಭಿಸಿದ ಯುವತಿ! | From 1 Lakh Rupees Salary To 2 Lakh Rupees Freelance Income Tax Lawyer Quits Job To Follow Passion Kvn

ತಿಂಗಳಿಗೆ ಒಂದು ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದ ಟ್ಯಾಕ್ಸ್ ಲಾಯರ್ ಮೆಹರ್ ವರ್ಮಾ, ಉದ್ಯೋಗದ ಒತ್ತಡದಿಂದ ಬೇಸತ್ತು ಕೆಲಸ ತೊರೆದರು. ಯಾವುದೇ ಬ್ಯಾಕಪ್ ಇಲ್ಲದೆ ಫ್ರೀಲ್ಯಾನ್ಸರ್ ಆಗಿ ಬದುಕು ಆರಂಭಿಸಿ, ಕೇವಲ 14 ತಿಂಗಳಲ್ಲಿ ತಿಂಗಳಿಗೆ ಎರಡು ಲಕ್ಷ ರೂಪಾಯಿ ಆದಾಯ ಗಳಿಸುವ ಮೂಲಕ ಯಶಸ್ಸು ಕಂಡಿದ್ದಾರೆ.

ಬೆಂಗಳೂರು: ಖಾಸಗಿ ವಲಯದಲ್ಲಿ ಉದ್ಯೋಗ ಮಾಡುವ ಉದ್ಯೋಗಸ್ಥರ ಬದುಕು ಒಮ್ಮೊಮ್ಮೆ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಡೋಲಾಯಮಾನವಾಗಿ ಬಿಡುತ್ತವೆ. ಅದರಲ್ಲೂ ಇತ್ತೀಚೆಗೆ ಖಾಸಗಿ ವಲಯದಲ್ಲಿ ಎಐ ಎಂಟ್ರಿ ಕೊಟ್ಟ ಬಳಿಕವಂತೂ ಖಾಸಗಿ ಉದ್ಯೋಗಿಗಳ ಬದುಕು ಮತ್ತಷ್ಟು ಅಭದ್ರತೆಗೆ ದೂಡುವಂತೆ ಮಾಡಿದೆ. ಹೀಗಿರುವಾಗ ತಿಂಗಳಿಗೆ ಒಂದು ಲಕ್ಷ ರುಪಾಯಿ ಸಂಬಳ ಪಡೆಯುತ್ತಾ ಜೀವನ ಸಾಗಿಸುತ್ತಿದ್ದ ಟ್ಯಾಕ್ಸ್ ಲಾಯರ್‌ ಒಂದು ಹಂತದಲ್ಲಿ ಯಾವುದೇ ಬ್ಯಾಕ್‌ಅಪ್ ಇಲ್ಲದೇ ತಾವು ದುಡಿಯುತ್ತಿದ್ದ ಕೆಲಸ ಬಿಟ್ಟು ಆ ಮೇಲೆ ಫ್ರೀಲ್ಯಾನ್ಸರ್ ಆಗಿ ಬದುಕು ಕಟ್ಟಿಕೊಂಡು ತಿಂಗಳಿಗೆ ಸುಮಾರು ಎರಡು ಲಕ್ಷ ರುಪಾಯಿ ದುಡಿಮೆ ಮಾಡಲಾರಂಭಿಸಿದ್ದಾರೆ.

ಮೆಹರ್ ವರ್ಮಾ ಎನ್ನುವ ಯುವತಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಖಾಸಗಿ ವೃತ್ತಿ ಬದುಕು ಹೇಗಿತ್ತು ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕಾನೂನು ಸಂಸ್ಥೆಯೊಂದರಲ್ಲಿ ದೀರ್ಘಕಾಲ ಕೆಲಸ ಮಾಡುವುದರಿಂದ ಹಿಡಿದು ಕಂಟೆಂಟ್ ಕ್ರಿಯೆಟ್ ಹಾಗೂ ಕಥೆ ಹೇಳುವವರೆಗಿನ ಪಯಣವನ್ನು ಮೆಲುಕು ಹಾಕಿದ್ದಾರೆ.

“ಫೆಬ್ರವರಿ 2024 ರಲ್ಲಿ, ನಾನು ಕಾನೂನು ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೆ, ತಿಂಗಳಿಗೆ ಸುಮಾರು ₹1 ಲಕ್ಷ ಸಂಪಾದಿಸುತ್ತಿದ್ದೆ. ಕಾಗದದ ಮೇಲೆ, ಎಲ್ಲವೂ ಸರಿಯಾಗಿ ಕಾಣುತ್ತಿತ್ತು. ಆದರೆ ನಾನು ಖುಷಿಯಾಗಿರಲಿಲ್ಲ. ದೀರ್ಘ ಸಮಯ, ನಿಜವಾದ ವೀಕೆಂಡ್‌ಗಳೇ ಇರಲಿಲ್ಲ. ರಾತ್ರಿ 9–10 ಗಂಟೆಗೆ ಮನೆಗೆ ಬಂದು ಇನ್ನೂ ಕೆಲಸ ಮಾಡುತ್ತಿದ್ದೆ. ನಾನು ನಿರಂತರವಾಗಿ ದಣಿದಿದ್ದೆ, ನಿರಂತರವಾಗಿ ಒತ್ತಡಕ್ಕೊಳಗಾಗಿದ್ದೆ ಮತ್ತು ಪ್ರಾಮಾಣಿಕವಾಗಿ ಹೇಳಬೇಕೆಂದರೆ ಹೆಚ್ಚಿನ ದಿನಗಳಲ್ಲಿ ನಾನು ಭಯಭೀತಳಾಗಿದ್ದೆ” ಎಂದು ಆ ದಿನಗಳನ್ನು ನೆನಪಿಸಿಕೊಂಡಿದ್ದಾರೆ.

ಕಾಗದದ ಮೇಲೆ ನಾನು ಯಶಸ್ವಿಯಾಗಿ ಕಾಣುತ್ತಿದ್ದರೂ, ಆ ಕೆಲಸವು ತನ್ನ ಯೋಗಕ್ಷೇಮದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎನಿಸಲಾರಂಭಿಸಿತು. ಒಂದು ಹಂತದಲ್ಲಿ ನಾನು ಈ ರೀತಿಯ ಕೆಲಸ ನಾನು ನಿಜವಾದ ವಕೀಲೆಯಾಗಲು ಸಾಧ್ಯವಿಲ್ಲ ಎನ್ನುವುದನ್ನು ನಾನು ಅರಿತುಕೊಂಡೆ. ಇದು ನಾನು ಬಯಸಿದ ಜೀವನವಲ್ಲ ಎನ್ನುವುದು ಅರ್ಥವಾಯಿತು. ಹೀಗಾಗಿ ನಾನು ಯಾವುದೇ ದೃಢ ಯೋಜನೆಯಿಲ್ಲದೇ, ಬೆಂಬಲವಿಲ್ಲದೇ ಆ ಕೆಲಸವನ್ನು ತ್ಯಜಿಸಿದೆ ಎಂದು ಮೆಹರ್ ವರ್ಮಾ ಹೇಳಿದ್ದಾರೆ.

ಮೊದಲಿಗೆ ಲಾಯರ್ ಆಗಬೇಕೆನ್ನುವ ಮಹತ್ವಾಕಾಂಕ್ಷೆಯಿತ್ತು!

ಹಿಂದೂಸ್ತಾನ್ ಟೈಮ್ಸ್.ಕಾಂ ಜತೆ ಮಾತನಾಡಿರುವ ಮೆಹರ್ ಶರ್ಮಾ, ಕಾನೂನು ವ್ಯಾಸಂಗ ಮಾಡಿ ವಕೀಲೆಯಾಗಬೇಕು ಎನ್ನುವ ಕನಸು ನನ್ನ ಬಾಲ್ಯದಲ್ಲೇ ರೂಪುಗೊಂಡಿತ್ತು. ನಾನು ಅದನ್ನು ಯಾವತ್ತು ತೀರ್ಮಾನಿಸಿದೆ ಎನ್ನುವುದು ನೆನಪಿಲ್ಲ, ಆದರೆ ನನ್ನ ಪ್ರಕಾರ 5-6ನೇ ತರಗತಿಯಲ್ಲಿದ್ದಾಗಲೇ ಮೊದಲ ಸಲ ಲಾಯರ್ ಆಗಬೇಕು ಎನ್ನುವುದನ್ನು ಬಹಿರಂಗ ಪಡಿಸಿದೆ ಎಂದು ಮೆಹರ್ ವರ್ಮಾ ಹೇಳಿದ್ದಾರೆ.

ಶಾಲಾ ಹಂತದಲ್ಲಿ ನನಗಿರುವ ಸೀಮಿತ ಅನುಭವದಲ್ಲಿ ಲಾಯರ್ ಆಗಬೇಕೆಂದುಕೊಂಡೆ, ಹೆಚ್ಚಿನ ಓದಿನ ಬಳಿಕ ಕಾನೂನು ವ್ಯಾಸಂಗ ನನಗೆ ಹೆಚ್ಚು ಆಕರ್ಷಕ ಎನಿಸತೊಡಗಿತು. ನಿಜ ಹೇಳಬೇಕೆಂದರೆ ಲಾಯರ್‌ಗಳು ಸೂಟ್ ಧರಿಸುವುದು ಇನ್ನಷ್ಟು ಆಕರ್ಷಕವಾಗಿ ಕಾಣುವಂತೆ ಮಾಡಿತು ಎಂದು ಮೆಹರ್ ವರ್ಮಾ ಹೇಳಿದ್ದಾರೆ. ಇದಾದ ಬಳಿಕ ಮೆಹರ್ ಪರೋಕ್ಷ ತೆರಿಗೆ ಲಾಯರ್ ಆಗಿ ವೃತ್ತಿ ಬದುಕು ಆರಂಭಿಸಿದರು. ಆದರೆ ಕೆಲಸದ ಒತ್ತಡದಲ್ಲಿ ತನ್ನನ್ನು ತಾನು ಕಂಡುಕೊಳ್ಳಲು ಮೆಹರ್ ಒದ್ದಾಡಲಾರಂಭಿಸಿದರು.

ಕಾನೂನು ವ್ಯಾಸಂಗದ ಮೂರು ಅಥವಾ ನಾಲ್ಕನೇ ವರ್ಷದಲ್ಲಿಯೇ ನನಗೆ ನಾನು ವ್ಯಾಸಂಗ ಸರಿಹೊಂದುವುದಿಲ್ಲ ಎನಿಸಲಾರಂಭಿಸಿತು. ಆದರೆ ಆ ಸಮಯದಲ್ಲಿ ನನಗೆ ಬೇರೆ ಆಯ್ಕೆಗಳೇ ಇರಲಿಲ್ಲ ಎಂದು ಹೇಳಿದ್ದಾರೆ. ಇನ್ನು ಕಾನೂನು ಅಧ್ಯಯನ ಮಾಡುವಾಗ ಹಾಗೂ ವೃತ್ತಿಜೀವನ ಆರಂಭಿಸಿದಾಗ ಸ್ವತಂತ್ರವಾಗಿ ಬರವಣಿಗೆ, ಸ್ಟೋರಿ ಟೆಲ್ಲಿಂಗ್ ಹೀಗೆ ಕೆಲವೊಂದು ಸೃಜನಾತ್ಮಕ ಪ್ರಯೋಗಗಳನ್ನು ಮಾಡಲಾರಂಭಿಸಿದರು. ಕ್ರಮೇಣ ನನಗೆ ಬರವಣಿಗೆ, ಸ್ಟೋರಿ ಟೆಲ್ಲಿಂಗ್ ಹಾಗೂ ಕಟೆಂಟ್ ರೈಟಿಂಗ್ ಹೆಚ್ಚು ಖುಷಿ ಕೊಡಲಾರಂಭಿಸಿತು ಎಂದು ಮೆಹರ್ ವರ್ಮಾ ಹೇಳಿದ್ದಾರೆ.

ಇದಾದ ಬಳಿಕ ಕಂಟೆಂಟ್ ಕ್ರಿಯೇಷನ್ ಬಗ್ಗೆ ಒಂದು ವರ್ಷ ಸಂಪೂರ್ಣ ಗಮನ ಕೇಂದ್ರೀಕರಿಸಲು ಮೆಹರ್ ತೀರ್ಮಾನಿಸಿದರು., ‘ಆಗ ನಾನಿನ್ನು ಚಿಕ್ಕವಳಾಗಿದ್ದೆ, ನನಗೆ ಯಾವುದೇ ಹಣಕಾಸಿನ ಜವಾಬ್ದಾರಿಗಳಿರಲಿಲ್ಲ. ಇನ್ನು ತಡಮಾಡಿದರೆ, ಈ ಕೆಲಸ ಬಿಡುವುದು ಕಷ್ಟವಾಗುತ್ತದೆ ಎಂದು ತೀರ್ಮಾನಿಸಿ ತಿಂಗಳಿಗೆ ಒಂದು ಲಕ್ಷ ರುಪಾಯಿ ಬರುತ್ತಿದ್ದ ಕೆಲಸಕ್ಕೆ ಗುಡ್ ಬೈ ಹೇಳಿದರು.

ಬದುಕು ಕಟ್ಟಿಕೊಳ್ಳಲು ಹೊರಟಾಗ ಸಿಕ್ಕ ಹಾದಿ ಸುಲಭದ್ದಾಗಿರಲಿಲ್ಲ!

ಟ್ಯಾಕ್ಸ್ ಲಾಯರ್‌ನಿಂದ ಫ್ರೀಲ್ಯಾನ್ಸರ್‌ನ ಪರಿವರ್ತನೆಯ ಹಾದಿ ಸುಲಭವಾಗಿಲಿಲ್ಲ ಎಂದು ಮೆಹರ್ ಆ ದಿನಗಳನ್ನು ಮೆಲುಕು ಹಾಕಿದ್ದಾರೆ. ಫ್ರೀಲ್ಯಾನ್ಸರ್ ಆಗಿ ಕೆಲಸ ಆರಂಭಿಸಿದಾಗ ಗಿಗ್ ತಿಂಗಳಿಗೆ 10,000 ರುಪಾಯಿ ಪಾವತಿಸುತ್ತಿತ್ತು. ಈ ಪ್ರಾಜೆಕ್ಟ್‌ನಲ್ಲಿ ತಿಂಗಳಿಗೆ ಆರರಿಂದ ಏಳು ವಿಡಿಯೋಗಳನ್ನು ಕ್ರಿಯೇಟ್ ಮಾಡಬೇಕಾಗಿತ್ತು. ಇನ್ನು ವೀಕೆಂಡ್‌ನಲ್ಲಿ ಮೆಹರ್ ಫೋಟೋಗ್ರಫಿ ಕೋರ್ಸ್ ಕಲಿತುಕೊಂಡರು.

ನಾನು ತೆಗೆದುಕೊಂಡ ಆ ಕಠಿಣ ನಿರ್ಧಾರ ತನ್ನ ಪೋಷಕರು ಬೆಂಬಲಿಸಲಿಲ್ಲ. ಅವರಿಗೆ ನಾನು ತೆಗೆದುಕೊಂಡ ನಿರ್ಧಾರವು ರಿಸ್ಕಿ ಎನಿಸಲಾರಂಭಿಸಿತು ಎಂದು ಹೇಳಿದ್ದಾರೆ. ಒಂದು ಸ್ಥಿರ ಸಂಬಳದಿಂದ ಅಸ್ಥಿರ ಆದಾಯದತ್ತ ಮುಖ ಮಾಡಿದ್ದು, ಒಂದು ರೀತಿ ಭಾವನಾತ್ಮಕ ಸವಾಲು ಎನಿಸಲಾರಂಭಿಸಿತು. ಕೆಲವೊಮ್ಮೆ ಮತ್ತೆ ನಾನು ತಪ್ಪು ಮಾಡಿದೆನಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿತು ಎಂದು ಮೆಹರ್ ಹೇಳಿದ್ದಾರೆ.

ಆದರೆ ಹಿಡಿದ ಹಟ ಬಿಡಲಿಲ್ಲ. ಪ್ರತಿನಿತ್ಯ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾರಂಭಿಸಿದರು. ಆರಂಭದಲ್ಲಿ ವಿಡಿಯೋಗೆ ಪ್ರತಿನಿತ್ಯ 300ರಿಂದ 500 ವೀವ್ಸ್, 10ರಿಂದ 12 ಲೈಕ್ಸ್ ಬರುತ್ತಿದ್ದವು. ಇದು ನನ್ನನ್ನು ಕುಗ್ಗುವಂತೆ ಮಾಡಿತು. ನಾನು ಪ್ರಯತ್ನ ನಿಲ್ಲಿಸಲಿಲ್ಲ. ಕ್ರಮೇಣ ಆಸಕ್ತಿಯಿಂದ ಕೆಲಸ ಮಾಡಿದ ಪರಿಣಾಮ ಇದೀಗ ಐಡಿಯೇಷನ್ ಸ್ಕ್ರಿಪ್ಟಿಂಗ್, ವಿವಿಧ ವಿಡಿಯೋ ಸೇವೆಗಳಿಗೆ ತಿಂಗಳಿಗೆ 1200 ಡಾಲರ್ ಚಾರ್ಜ್ ಮಾಡುತ್ತಿದ್ದಾರೆ.

ಅಂದರೆ ಟ್ಯಾಕ್ಸ್ ಲಾಯರ್ ಕೆಲಸ ಬಿಟ್ಟು ಕೇವಲ 14 ತಿಂಗಳಲ್ಲಿ ಇದೀಗ ಮೆಹರ್ ವರ್ಮಾ ತಿಂಗಳಿಗೆ ಎರಡು ಲಕ್ಷ ರುಪಾಯಿ ಆದಾಯ ಗಳಿಸಲಾರಂಭಿಸಿದ್ದಾರೆ. ಆಕೆಯ ಪ್ರಕಾರ, ಆರ್ಥಿಕ ಸ್ವಾವಲಂಭನೆ ಮಾತ್ರವೇ ನನ್ನ ಗುರಿಯಲ್ಲ. ದಿನಕ್ಕೆ 12-14 ಗಂಟೆ ದುಡಿಯುವುದೇ ಸಕ್ಸಸ್ ಅಲ್ಲ. ನಾನೀಗ ದಿನಕ್ಕೆ ಆರು ಗಂಟೆ ಕೆಲಸ ಮಾಡುತ್ತೇನೆ. ಉಳಿದ ಸಮಯದಲ್ಲಿ ಕೆಫೆಗೆ ಹೋಗುತ್ತೇನೆ, ಜಿಮ್‌ಗೆ ಹೋಗುತ್ತೇನೆ, ಕುಟುಂಬದ ಜಯ ಕಾಲ ಕಳೆಯುತ್ತೇನೆ. ನಿಜ ಹೇಳಬೇಕೆಂದರೆ ನಾನು ಈಗ ನನ್ನ ಜೀವನವನ್ನು ಎಂಜಾಯ್ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

“ನಾನು ನನ್ನ ಕೆಲಸದಲ್ಲಿ ಚೆನ್ನಾಗಿ ಸಂಪಾದಿಸುತ್ತಿದ್ದಾಗಲೂ, ನಾನು ಯಶಸ್ವಿಯಾಗಿದ್ದೇನೆ ಎಂದು ಅನಿಸುತ್ತಿರಲಿಲ್ಲ. ಆದರೆ ನಾನು ಕಂಟೆಂಟ್ ಕ್ರಿಯೇಷನ್‌ನಲ್ಲಿ ತಿಂಗಳಿಗೆ ₹60–70 ಸಾವಿರ ಗಳಿಸುತ್ತಿದ್ದಾಗ ನಾನು ಯಶಸ್ವಿಯಾದೆ ಅನಿಸಲಾರಂಭಿಸಿತು. ಯಾಕಂದರೆ ನನಗೆ ಆಗ ಫ್ಲೆಕ್ಸಿಬಿಲಿಟಿಯಿತ್ತು ಎಂದು ಮೆಹರ್ ವರ್ಮಾ ಹೇಳಿದ್ದಾರೆ.

ಇನ್ನು ಇದೇ ವೇಳೆ ಯಾರನ್ನೂ ಕುರುಡಾಗಿ ನಂಬಬೇಡಿ ಎನ್ನುವುದನ್ನು ಮೆಹರ್ ವರ್ಮಾ ಎಚ್ಚರಿಸಿದ್ದಾರೆ. ‘ಎಲ್ಲರೂ ನನ್ನ ಹಾದಿಯನ್ನೇ ಅನುಸರಿಸಿ ಎಂದು ಹೇಳುತ್ತಿಲ್ಲ. ಆದರೆ ಕಠಿಣ ಪರಿಶ್ರಮ ಅಥವಾ ಯಶಸ್ಸು ನಿಮಗೆ ಹೇಗಿರಬೇಕು ಎನ್ನುವುದನ್ನು ಬೇರೆ ಯಾರೋ ವ್ಯಾಖ್ಯಾನಿಸಲು ಬಿಡಬೇಡಿ ಎಂದು ಮೆಹರ್ ವರ್ಮಾ ಕಿವಿಮಾತು ಹೇಳಿದ್ದಾರೆ.



Source link

Leave a Reply

Your email address will not be published. Required fields are marked *